ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಿಂದ ಹಿಡಿದು ಸೌತ್ ವರೆಗೆ ಸಾಕಷ್ಟು ಸಿನಿಮಾಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿಕೊಂಡಿದ್ದ ನಟಿ ಶ್ರೀದೇವಿ. ಇದೀಗ ಶ್ರೀದೇವಿ ಅವರು ನಮ್ಮ ಜೊತೆ ಇಲ್ಲವಾದರೂ ಅವರ ಮಕ್ಕಳು ತಾಯಿಯಂತೆ ಸಿನಿಮಾದಲ್ಲಿ ಮಿಂಚಲು ಹೊರಟಿದ್ದಾರೆ. ಜಾನ್ವಿ ಕಪೂರ್ ಹಾಗೂ ಖುಷಿ ಕಪೂರ್ ಇಬ್ಬರು ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಜಾನ್ವಿ ಕಪೂರ್ 2018ರಲ್ಲಿ ಧಡಕ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಶಶಾಂಕ್ ಖೈತಾನ್ ನಿರ್ದೇಶನದ ಈ ರೋಮ್ಯಾಂಟಿಕ್ ಸಿನಿಮಾದಲ್ಲಿ ಇಶಾನ್ ಕಟ್ಟರ್ ಗೆ ಜೊತೆಯಾಗಿ ಜಾನ್ವಿ ಕಪೂರ್ ಅಭಿನಯಿಸಿದ್ರು. ಇವರ ಮೊದಲ ಚಿತ್ರಕ್ಕೆ ಝಿ ಸಿನಿ ಪ್ರಶಸ್ತಿಯನ್ನು ಕೂಡ ಗಳಿಸಿದ್ದಾರೆ. ಘೋಸ್ಟ್ ಸ್ಟೋರೀಸ್, ಗುಂಜನ್ ಸಕ್ಸೇನ, ರೂಹಿ, ದೋಸ್ತಾನ 2, ಗುಡ್ ಲುಕ್ ಜರ್ರೀ ಮೊದಲದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇದೀಗ ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ನಿರ್ಮಾಣದ ಮೀಲಿ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ ಜಾನ್ವಿ ಕಪೂರ್. ಹೌದು ಮಿಲಿ ಸಿನಿಮಾದ ತಯಾರಿ ಜೋರಾಗಿತ್ತು. ಜಾನ್ವಿ ಕಪೂರ್ ಹಾಗೂ ಅವರ ತಂದೆ ಬೋನಿ ಕಪೂರ್ ಇಬ್ಬರು ಈ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದರು. ಈಗಾಗಲೇ ಜಾನ್ವಿ ಸಾಕಷ್ಟು ಸಂದರ್ಶನಗಳನ್ನು ಕೂಡ ನೀಡಿದ್ದಾರೆ.
ಇನ್ನು ಜಾನ್ವಿ ಕಪೂರ್ ಸಿನಿಮಾದ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಸುಮಾರು 21 ಮಿಲಿಯನ್ ಫಾಲೋವರ್ಸ್ ಹೊಂದಿರುವ ನಟಿ ಇವರು ಜಾನ್ವಿ ಕಪೂರ್ ಸಕತ್ ಹಾಟ್ ಆಗಿರುವ ನಟಿ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುವ ಜಾನ್ವಿ ಕಪೂರ್ ತಮಗೆ ಸರಿ ಅನಿಸಿದ್ದನ್ನೆ ಮಾಡುವ ವ್ಯಕ್ತಿತ್ವ ಹೊಂದಿರುವವರು ಹೌದು.
ಜಾನ್ವಿ ಅವರ ಬಟ್ಟೆಯ ಬಗ್ಗೆ ಈಗಾಗಲೇ ಸಾಕಷ್ಟು ಟ್ರೋಲ್ ಆಗಿದೆ ಶ್ರೀದೇವಿ ಅಂತೆ ಸರಳವಾಗಿ ಜಾನ್ವಿ ಬದುಕುವುದಿಲ್ಲ ಅಂತ ಹಲವರು ಮಾತನಾಡಿಕೊಳ್ಳುತ್ತಾರೆ ಆದರೆ ಜಾನ್ವಿ ಕಪೂರ್ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮಗೆ ಅನ್ನಿಸಿದ್ದನ್ನು ಮಾಡುತ್ತಾರೆ. ಹೌದು, ಜಾನ್ವಿ ಕಪೂರ್ ಅವರ ಇನ್ಸ್ಟಾಗ್ರಾಮ್ ಅಫಿಶಿಯಲ್ ಖಾತೆಯಲ್ಲಿ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.
ಅದರಲ್ಲಿ ತಮ್ಮ ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ಅಪ್ಡೇಟ್ ನೀಡುತ್ತಾರೆ, ಜೊತೆಗೆ ತಾವು ಯಾವುದೇ ಸ್ಥಳಕ್ಕೆ ಹಾಲಿಡೇ ಟ್ರಿಪ್ ಹೋದರು ಅಲ್ಲಿಯ ಹಾಟ್ ಫೋಟೋಗಳನ್ನ ಅಪ್ಲೋಡ್ ಮಾಡುತ್ತಾರೆ. ಜಾನ್ವಿ ಕಪೂರ್ ಅವರ ಹಾಟ್ ಅವತಾರಕ್ಕೆ ಫಿದಾ ಆಗದವರೇ ಇಲ್ಲ. ಇತ್ತೀಚಿಗೆ ಅವರ ಸಿನಿಮಾಗಳು ಅಷ್ಟು ಹಿಟ್ ಆಗುತ್ತಿಲ್ಲ. ಹಾಗಂತ ಜಾನ್ವಿ ಕಪೂರ್ ಅವರ ಬೇಡಿಕೆ ಅಂತೂ ಕಡಿಮೆ ಆಗಿಲ್ಲ.
ಉತ್ತರ ಭಾರತದ ಪ್ರೇಕ್ಷಕರನ್ನ ರಂಜಿಸುವಲ್ಲಿ ಜಾನ್ವಿ ಕಪೂರ್ ನಿರಂತರ ಪ್ರಯತ್ನ ನಡೆಯುತ್ತಿದೆ. ಅಂದಹಾಗೆ ಜಾನ್ವಿ ಕಪೂರ್ ಅವರು ಅಭಿನಯಿಸಿದ ಮಿಲಿ ಸಿನಿಮಾ ಮಲಯಾಳಂನ ಹೆಲನ್ ಚಿತ್ರದ ರಿಮಿಕ್ಸ್ ಹಾಗಾಗಿ ಈ ಎರಡು ಸಿನಿಮಾ ನೋಡಿದವರು ಜಾನ್ವಿ ಅವರಿಗೆ ಎಷ್ಟು ಮಾರ್ಕ್ ಕೊಡುತ್ತಾರೆ ಕಾದು ನೋಡಬೇಕು. ಜಾನ್ವಿ ಕಪೂರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.