ಪುಷ್ಪ ಸಿನಿಮಾದ ಹೂಂ ಅಂಟಾವಾ ಮಾಮ ಊಹುಂ ಅಂಟಾವಾ ಮಾಮ ಹಾಡು, ಫ್ಯಾಮಿಲಿ ಮ್ಯಾನ್ ಸೀರೀಸ್ ಇವೆಲ್ಲವೂ ಮುಖ್ಯವಾಗಿ ಸಮಂತಾ ಅವರನ್ನೇ ನೆನಪಿಸುತ್ತವೆ. ಭಾರತ ಸಿನಿಮಾ ಇಂಡಸ್ಟ್ರಿ ಕಂಡ ಅತ್ಯದ್ಭುತ ನಟಿ ಸಮಂತ. ಕನ್ನಡ, ತಮಿಳು, ತೆಲುಗು, ಹಿಂದಿ ಎಲ್ಲಾ ಸಿನಿಮಾಗಳಲ್ಲಿಯೂ ಬಹಳ ಅದ್ಭುತವಾಗಿ ಅಭಿನಯಿಸುವ ನಟಿ ಸಮಂತ ಎಂದು ಬಹು ಬೇಡಿಕೆಯ ನಟಿ ಎನಿಸಿದ್ದಾರೆ. ಸಿನಿಮಾಗಳು ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಷಯಕ್ಕೂ ಸಾಕಷ್ಟು ಗಾಸಿಪ್ ಆಗಿದ್ದಾರೆ ಸಮಂತಾ.
ಹೌದು ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಈಗಾಗಲೇ ವಿ-ಚ್ಛೇದನ ಕೂಡ ಪಡೆದುಕೊಂಡಿರುವ ಸಮಂತ ಅವರು ತಮ್ಮ ಬಗ್ಗೆ ಯಾರೇ ಕಮೆಂಟ್ ಮಾಡಿದರು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಇನ್ನೂ ಹೆಚ್ಚು ತಮ್ಮ ಕೆರಿಯರ್ ಬಗ್ಗೆ ಗಮನಹರಿಸುತ್ತಾರೆ. ಸಮಂತಾ ಅವರ ಜೀವನದಲ್ಲಿ ಬಿರುಗಾಳಿ ಎದ್ದರೂ ಕೂಡ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ವೃತ್ತಿ ಜೀವನದಲ್ಲಿ ಇನ್ನಷ್ಟು ಮುಂದುವರೆಯುತ್ತಿದ್ದಾರೆ.
ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿರುವ ಸಮಂತಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಅವರ ವರ್ಕೌಟ್ ಇರಬಹುದು, ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್ ಕೊಡುವುದಿರಬಹುದು, ಹೀಗೆ ಮೊದಲಾದ ವಿಷಯಗಳ ಬಗ್ಗೆ ಸಮಂತ ಅಭಿಮಾನಿಗಳ ಹಂಚಿಕೊಳ್ಳುತ್ತಾರೆ. ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೆ ಹಲವಾರು ಪ್ರಮೋಶನ್ ವಿಡಿಯೋಗಳನ್ನು ಕೂಡ ಸಮಂತಾ ಮಾಡುತ್ತಾರೆ.
ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿಕೊಂಡು ಜನರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಸ್ನೇಹಿತರೆ ಸಮಂತಾ ಇತ್ತೀಚಿಗೆ ಹೊಸ ಬ್ಯುಸಿನೆಸ್ ಕೂಡ ಆರಂಭಿಸಿದ್ದಾರೆ. ಹೌದು ಈ ಬಗ್ಗೆಯೂ ಕೂಡ ಸಮಂತಾ ಅವರು ಇತ್ತೀಚಿಗೆ ಪೋಸ್ಟ್ ಒಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದೀಗ ಸಮಂತಾ ಅವರು ಅಡುಗೆ ಮನೆಯಲ್ಲಿ ಕಾಣಿಸಿಕೊಂಡಿದ್ದು ಬಾರಿ ಸುದ್ದಿ ಮಾಡಿದೆ.
ಸಿನಿಮಾ ಮಾಡುವುದನ್ನು ಬಿಟ್ಟು ಅಡುಗೆ ಕಲಿಯುವುದಕ್ಕೆ ಮುಂದಾಗಿದ್ದಾರಾ ಸಮಂತಾ ಅಂತ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹೌದು ಇತ್ತೀಚೆಗೆ ಅಡುಗೆ ಶೋ ಒಂದರಲ್ಲಿ ಸಮಂತಾ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಯೂಟ್ಯೂಬ್ ನಲ್ಲಿ ಫೇಮಸ್ ಆಗಿರುವ ಶ್ರೀದೇವಿ ಅವರ ಫುಡ್ ಬ್ಲಾಗ್ ಒಂದರಲ್ಲಿ ಸಮಂತಾ ಅವರು ಭಾಗವಹಿಸಿದ್ದರು. ಉತ್ತಮ ನ್ಯೂಟ್ರಿಷಿಯನ್ ಕೂಡ ಆಗಿರುವ ಶ್ರೀದೇವಿ ಯೌಟ್ಯೂಬ್ ನಲ್ಲಿ ಸಾಕಷ್ಟು ಆರೋಗ್ಯಕರ ಅಡುಗೆಗಳನ್ನ ಮಾಡಿ ಪೋಸ್ಟ್ ಮಾಡುತ್ತಾರೆ.
ಇವರ ಫುಡ್ ವ್ಲೋಗ್ ಒಂದರಲ್ಲಿ ಸಮಂತಾ ಭಾಗವಹಿಸಿದ್ದು ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೀಕ್ಷಣೆಯನ್ನು ಪಡೆದುಕೊಂಡಿದೆ. ನಟಿ ಸಮಂತಾ ಅವರು ಬಾಲಿವುಡ್ ನಲ್ಲಿಯೂ ಕಮಾಲ್ ಮಾಡುತ್ತಿದ್ದಾರೆ. ಅಲ್ಲಿಯೂ ಕೂಡ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
ಬಿಡುವಿದ್ದಾಗ ಪ್ರವಾಸವನ್ನೂ ಕೈಕೊಳ್ಳುವ ಸಮಂತಾ ಸಾಕಷ್ಟು ಫೋಟೋಗಳನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿಗೆ ಬಾಲಿವುಡ್ ನ ಫೇಮಸ್ ಆಗಿರುವ ಕಾಫ್ ವಿತ್ ಕರಣ್ ಶೋ ನಲ್ಲಿಯೂ ಕೂಡ ಸಮಂತಾ ಅತಿಥಿಯಾಗಿದ್ದು, ತಮ್ಮ ವಯಕ್ತಿಕ ಜೀವನದ ಕೆಲವು ಘಟನೆಗಳನ್ನು ಹಂಚಿಕೊಂಡಿದ್ದರು. ಇದೂ ಕೂಡ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.