ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಗಿಡದ ಬಗ್ಗೆ ನಿಮಗೆಲ್ಲರಿಗೂ ಗೊತ್ತು. ಬಿಲ್ವಪತ್ರೆಯನ್ನು ಶಿವನ ಸ್ವರೂಪ ಎಂದೇ ಪರಿಗಣಿಸಲಾಗುತ್ತದೆ. ದೇವಾನು ದೇವತೆಗಳು ಕೂಡ ಆ ಶಿವನನ ಒಲಿಸಿಕೊಳ್ಳಲು ಬಿಲ್ವಪತ್ರೆಯನ್ನು ಸಮರ್ಪಣೆ ಮಾಡುತ್ತಿದ್ದರಂತೆ. ದೇವಲೋಕದಲ್ಲಿಯೂ ಕೂಡ ಬಿಲ್ವಪತ್ರೆ ಗಿಡಕ್ಕೆ ಪೂಜ್ಯನಿಯ ಭಾವವಿದೆ.
ಪುರಾಣಗಳಲ್ಲಿಯೂ ಉಲ್ಲೇಖವಿರುವ ಬಿಲ್ವಪತ್ರೆ ಅಥವಾ ಪತ್ರೆಯ ಗಿಡದ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಸಿ ಕೊಡುತ್ತೀವಿ. ನಿಮಗೆ ಅದೃಷ್ಟ ಬರಬೇಕು, ಜೀವನ ಅತ್ಯುತ್ತಮವಾಗಿ ಸಾಗಬೇಕು ಅಂತ ಇದ್ರೆ ಈ ಕೆಲವು ಕೆಲಸಗಳನ್ನು ಮಾಡಿ. ಇದರಿಂದ ಬಿಲ್ವಪತ್ರೆಯ ಮೂಲಕ ಆ ಶಿವನ ಕೃಪೆಗೆ ನೀವು ಪಾತ್ರರಾಗುತ್ತೀರಿ. ಹಾಗಾದ್ರೆ ಯಾವ ಕೆಲಸ ಮಾಡಬೇಕು ಹೇಳ್ತೀನಿ ಮುಂದೆ ಓದಿ.
ಬಿಲ್ವಪತ್ರೆಯ ಗಿಡ ಅತ್ಯಂತ ಶ್ರೇಷ್ಠವಾದದ್ದು. ಅದು ಎಲ್ಲಾ ಕಡೆಯೂ ಸಿಗುವುದಿಲ್ಲ ನೀವು ಅದನ್ನು ಮನೆಯ ಎದುರು ತಂದು ನೆಡಬಹುದು ಅಥವಾ ಬಿಲ್ವಪತ್ರೆ ಗಿಡ ಇರುವಲ್ಲಿ ಹೋಗಿ ಅದನ್ನು ಪೂಜಿಸಬಹುದು. ಇನ್ನು ಬಿಲ್ವಪತ್ರೆಯ ಗಿಡದ ಎಲೆಗಳನ್ನು ಅಂದರೆ ಪತ್ರೆಗಳನ್ನ ತಂದು ಶಿವನ ಪೂಜೆ ಮಾಡಿದರೆ ಶಿವನ ಸಂಪೂರ್ಣ ಕೃಪೆ ನಿಮ್ಮ ಮೇಲಿರುತ್ತೆ. ಹಾಗೆಯೇ ಬಿಲ್ವಪತ್ರೆ ಗಿಡಕ್ಕೆ ನೀರು ಉಣಿಸುವುದು ಅತ್ಯಂತ ಪುಣ್ಯದ ಕೆಲಸ.
ಬಿಲ್ವಪತ್ರೆ ಮರ ಅಥವಾ ಗಿಡ ನಿಮ್ಮ ಕಣ್ಣಿಗೆ ಬಿದ್ದರೆ ಅದಕ್ಕೆ ನಿಮ್ಮ ಕೈಲಾದಷ್ಟು ನೀರನ್ನು ಉಳಿಸಿ ಇದರಿಂದ ಶಿವನಿಗೆ ನೀವು ಜಲಾಭಿಷೇಕ ಮಾಡಿದಷ್ಟು ಪುಣ್ಯ ದೊರೆಯುತ್ತದೆ. ಇನ್ನು ದಾನ ಧರ್ಮ ಮಾಡಬೇಕು ಅಂತಿದ್ರೆ ಬಿಲ್ವಪತ್ರ ಮರದ ಅಡಿಯಲ್ಲಿ ಮಾಡಿದರೆ, ಅದರಿಂದ ಸಿಗುವ ಪುಣ್ಯ ಫಲ ದುಪ್ಪಟ್ಟು. ಬಿಲ್ವಪತ್ರ ಮಾರದ ನೆರಳಿನಲ್ಲಿ ಯಾರಿಗಾದರೂ ಊಟ ಬಡಿಸಿದರೆ ಅಥವಾ ಅನ್ನದಿಂದ ಮಾಡಿದ ಖಿರನ್ನು ತಿನ್ನಲು ನೀಡಿದರೆ ಅಂತವರು ಜೀವನದಲ್ಲಿ ಅತಿ ಹೆಚ್ಚು ಪುಣ್ಯಪ್ರಾಪ್ತಿ ಮಾಡಿಕೊಳ್ಳುತ್ತಾರೆ.
ಇನ್ನು ಬಿಲ್ವಪತ್ರ ಮರದ ಬೇರಿನ ಬುಡದಲ್ಲಿ ಪೂಜೆ ಮಾಡಿ ನೀರನ್ನು ಕುಡಿದರೆ ಪುಣ್ಯಕ್ಷೇತ್ರಗಳಲ್ಲಿ ತೀರ್ಥ ಕುಡಿದ ಫಲ ನಿಮಗೆ ದೊರೆಯುತ್ತದೆ. ಇನ್ನು ಬಿಲ್ವಪತ್ರೆ ಮರದ ಬುಡದಲ್ಲಿ ದೀಪವನ್ನು ಉರಿಸುವವರು ತತ್ವಜ್ಞಾನ ಸಂಪನ್ನ ರಾಗಿ ಜೀವನದಲ್ಲಿ ಅತ್ಯುತ್ತಮ ಅನುಭವಗಳನ್ನು ಪಡೆದುಕೊಳ್ಳುತ್ತಾರೆ. ಇನ್ನು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ನಿಮ್ಮ ಪಾಪಗಳೆಲ್ಲವೂ ತೊಳೆದು ಹೋಗುತ್ತೆ.
ಇನ್ನು ಬಿಲ್ವಪತ್ರೆ ಮರದ ಅಡಿಯಲ್ಲಿ ಶಿವಭಕ್ತರಿಗೆ ಆಹಾರ ನೀಡಿದೆ ಅಥವಾ ತುಪ್ಪದ ಅನ್ನವನ್ನು ನೀಡಿದರೆ ಅಂಥವರು ಎಂದಿಗೂ ಬಡತನದಿಂದ ತೊಂದರೆ ಅನುಭವಿಸುವುದಿಲ್ಲ ಅವರಿಗೆ ಆರ್ಥಿಕ ತೊಂದರೆ ಎಂದಿಗೂ ಬರುವುದಿಲ್ಲ. ಯಾವುದೇ ಪುಣ್ಯ ಕ್ಷೇತ್ರಗಳಲ್ಲಿ ನೋಡಿದರೂ ಶಿವ ಪ್ರತಿಷ್ಠಾಪನೆ ಆಗಿರುವುದು. ಬಿಲ್ವ ಪತ್ರೆ ಮರದ ಬುಡದಲ್ಲಿ ಹಾಗಾಗಿ ಬಿಲ್ವಪತ್ರೆಗೆ ಶಿವನಷ್ಟೇ ಮಹತ್ವವಾದ ಸ್ಥಾನವಿದೆ. ಬಿಲ್ವ ಪತ್ರೆ ಮರ ನಮ್ಮಲ್ಲಿರುವ ಎಲ್ಲಾ ನೆಗೆಟಿವ್ ಎನರ್ಜಿಯನ್ನೂ ಸೆಳೆದುಕೊಂಡು ಪಾಸಿಟಿವಿಟಿಯನ್ನು ಧಾರೆ ಎರೆಯುತ್ತದೆ. ಹಾಗಾಗಿ ತಪ್ಪಡೇ ಜಿಲ್ವಪತ್ರೆ ಮರವನ್ನು ಪೂಜಿಸಿ, ಆ ಶಿವನ ಕೃಪೆಗೆ ಪಾತ್ರರಾಗಿ.