Picsart 22 09 25 09 48 20 335

ಬಿಗ್ ಬಾಸ್ ಮನೆಯ ತುಂಬಾ ಕಲರ್ ಕಲರ್ ಫಿಗರ್ ಗಳು, ಯಾರ ಮೇಲೆ ಬೀಳಲಿದೆ ಸುಂದರ ರಾಕೇಶ್ ಅಡಿಗ ಕಣ್ಣು! ಅಬ್ಬಬ್ಬಾ ನೋಡಿ ಯಾರೆಲ್ಲ ಅಂತಾ!!

ಸುದ್ದಿ

ಅಂತೂ ಜನರು ಬಹು ದಿನಗಳಿಂದ ಕಾಯ್ತಾ ಇದ್ದ ಬಿಗ್ ಬಾಸ್ ಸೀಸನ್ 9 ಆರಂಭವಾಗಿದೆ. ನಿನ್ನೆಯಷ್ಟೇ ಗ್ರ್ಯಾಂಡ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಚಾಲನೆ ನೀಡಿದ್ದಾರೆ ಕಿಚ್ಚ ಸುದೀಪ್. ಕಳೆದ ತಿಂಗಳಲ್ಲಿ ಬಿಗ್ ಬಾಸ್ ಓಟಿಟಿ ಕನ್ನಡ ವರ್ಷನ್ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಿತ್ತು. ಆದರೆ ಇದು ಸಾಕಷ್ಟು ಜನರಿಗೆ ನೋಡಲು ಸಿಗಲಿಲ್ಲ ಹಾಗಾಗಿ ಬೇಸರಗೊಂಡಿದ್ದ ಜನರಿಗೆ ಈಗ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ 9 ಸಾಕಷ್ಟು ಮನರಂಜನೆ ನೀಡಲಿದೆ.

ಹೌದು, ಕನ್ನಡ ಕಿರುತರೆ ಲೋಕದಲ್ಲಿ ಬಹಳ ದೊಡ್ಡ ಶೋ ಎಂದು ಕರೆಸಿಕೊಳ್ಳುವ ಬಿಗ್ ಬಾಸ್ ಸೀಸನ್ 9 ಪ್ರಸಾರವಾಗಲಿದೆ. ನೂರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಯಾವ ಸ್ಪರ್ಧಿ ಉಳಿದುಕೊಳ್ಳುತ್ತಾರೆ ಎನ್ನುವ ಟಾಸ್ಕ್ ಇನ್ನೇನು ಆರಂಭವಾಗಲಿದೆ. ಅಂದಹಾಗೆ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗುತ್ತಾರೆ ಎನ್ನುವ ವಿಷಯ ಈಗಾಗಲೇ ರಿವೀಲ್ ಆಗಿತ್ತು. ಹಳೆಯ 8 ಸ್ಪರ್ಧಿಗಳು ಹಾಗೂ ಹೊಸ 10 ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗುವುದು.

ಹೌದು, ಈಗಾಗಲೇ ಬಿಗ್ ಬಾಸ್ ಕನ್ನಡ ಓ ಟಿ ಟಿ ವರ್ಷನ್ ನಲ್ಲಿ ಟಾಪ್ 4ನಲ್ಲಿದ್ದ ನಾಲ್ಕು ಜನ ಬಿಗ್ ಬಾಸ್ ದೊಡ್ಡ ಮನೆಗೆ ಹೋಗಲು ಎಂಟ್ರಿ ಪಡೆದಿದ್ದಾರೆ. ಅದರಲ್ಲಿ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ಸಾನಿಯಾ ಅಯ್ಯರ್ ಹಾಗೂ ರಾಕೇಶ್ ಅಡಿಗ ಸೇರಿದ್ದಾರೆ. ಇದರ ಜೊತೆಗೆ ಉಳಿದಂತೆ ಇನ್ನೂ ನಾಲ್ಕು ಹಳೆಯ ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ.

ಬಿಗ್ ಬಾಸ್ ನಲ್ಲಿ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್, ಅನುಪಮಾ ಆನಂದ್ ಕುಮಾರ್ (ನಿರೂಪಕಿ ಅನುಪಮಾ ಗೌಡ) ನಟಿ ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಈಗಾಗಲೇ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಲು ಲೈಫ್ ನಲ್ಲಿ ಒಮ್ಮೆ ಮಾತ್ರ ಅವಕಾಶ ಸಿಗುತ್ತೆ ಮತ್ತೆ ಮತ್ತೆ ಈ ಅವಕಾಶ ಒಲಿದು ಬರೋದಿಲ್ಲ ಎಂದು ಹೇಳುತ್ತಿದ್ದ ಮಾತು ಇದೀಗ ಸುಳ್ಳಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಸಾಕಷ್ಟು ದಿನ ಇದ್ದ ಸ್ಪರ್ಧಿಗಳು ಈಗ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಹೀಗೆ ಹಳೆಯ ಸ್ಪರ್ಧಿಗಳನ್ನು ಮತ್ತೆ ಯಾಕೆ ಕರೆಸಲಾಗಿದೆ ಎನ್ನುವುದು ಹಲವರ ಪ್ರಶ್ನೆ. ಬೇರೆ ಸ್ಪರ್ಧಿಗಳು ಸಿಗಲಿಲ್ವಾ ಅಂತ ಜನ ಈಗಾಗಲೇ ಕಮೆಂಟ್ ಮಾಡಿ ಕೇಳುತ್ತಿದ್ದಾರೆ. ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ಕಾವ್ಯಶ್ರೀ ಅಮೂಲ್ಯ ಗೌಡ, ನೇಹಾ ಗೌಡ.

ವಿನೋದ್ ಗೊಬ್ಬರಗಾಲ ಕೂಡ ಹೊಸ ಸ್ವರ್ಧಿಗಳಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ ಅದರ ಜೊತೆಗೆ ಬೈಕರ್ ಐಶ್ವರ್ಯ ಪಿಸೆ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಮಾಡೆಲ್ ದೃಶ್ ಚಂದ್ರಪ್ಪ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ. ಇನ್ನು ಪ್ರತಿದಿನ ರಾತ್ರಿ 9:30ಕ್ಕೆ ಬಿಗ್ ಬಾಸ್ ಶೋ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.

Leave a Reply

Your email address will not be published. Required fields are marked *