ಕನ್ನಡದ ಬಿಗ್ ಬಾಸ್ ಸೀಸನ್ 9 ಬಹಳ ಇಂಟರೆಸ್ಟಿಂಗ್ ಆಗಿ ನಡೆಯುತ್ತಿದೆ. ಬಿಗ್ ಬಸ್ ಮನೆಯಲ್ಲಿ ಪ್ರತಿ ವಾರವು ಒಂದೊಂದು ಎಲಿಮಿನೇಷನ್ ಇದ್ದಿದ್ದೆ. ಆದರೆ ಈ ಬಾರಿ ಕಿಚ್ಚ ಸುದೀಪ್ ಅವರ ಪಂಚಾಯಿತಿ ಇಲ್ಲದೆ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ನಡೆದು ಹೋಗಿದೆ. ಈ ಹಿಂದೆಯೂ ಬಿಗ್ ಬಾಸ್ ನಲ್ಲಿ ಕೆಲವು ಬಾರಿ ಈ ರೀತಿ ಆಗಿತ್ತು ಕಿಚ್ಚ ಸುದೀಪ್ ಕಾರಣಂತರಗಳಿಂದ ವಾರಾಂತ್ಯದ ಎಪಿಸೋಡ್ ನಡೆಸಿಕೊಡಲು ಸಾಧ್ಯವಾಗುವುದಿಲ್ಲ.
ಕಿಚ್ಚ ಸುದೀಪ್ ಇಲ್ಲದೆ ಇದ್ದರೂ ವಾರಾಂತ್ಯದಲ್ಲಿ ಮನೆಯಿಂದ ಒಂದು ಸ್ಪರ್ಧೆಯನ್ನು ಮಾತ್ರ ಹೊರ ಕಳಿಸಲಾಗುತ್ತಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರಗಳ ಕಾಲ ಎಲ್ಲರನ್ನೂ ರಂಜಿಸಿದ ನಟಿ ಮಯೂರಿ ಈ ಬಾರಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಅಶ್ವಿನಿ ನಕ್ಷತ್ರ ಎನ್ನುವ ಧಾರಾವಾಹಿಯ ಮೂಲಕ ಫೇಮಸ್ ಆದವರು ನಟಿ ಮಯೂರಿ.
ಹುಬ್ಬಳ್ಳಿಯ ಈ ಬೆಡಗಿ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಇತ್ತೀಚಿಗೆ ಸಿನಿಮಾಗಳಲ್ಲಿ ಅಷ್ಟು ಆಕ್ಟಿವ್ ಆಗಿಲ್ಲದ ಮಯೂರಿ ತಮ್ಮ ಮುದ್ದಾದ ಮಗನ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಮಯೂರಿ ಅವರ ಮಗ ಆರವ್ ಈಗ ತಾನೇ ಎರಡು ವರ್ಷ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಈ ಪುಟ್ಟ ಮಗನನ್ನ ಬಿಟ್ಟು ಮಯೂರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುವ ನಿರ್ಧಾರ ಮಾಡಿದ್ದರು.
ಬಿಗ್ ಬಾಸ್ ಮನೆಯಲ್ಲಿ ಮಗನನ್ನು ಬಿಟ್ಟು ನಾಲ್ಕು ವಾರ ಕಳೆದ ಮಯೂರಿ ಮಗನನ್ನು ನೆನಪಿಸಿಕೊಳ್ಳದೆ ಇದ್ದ ದಿನವೇ ಇಲ್ಲ. ಈ ಬಾರಿ ಮಯೂರಿ ಮನೆಯಿಂದ ಹೊರ ನಡೆಯುವುದಕ್ಕೆ ಇದು ಕೂಡ ಒಂದು ಕಾರಣವಾಗಿರಬಹುದು. ಮಗನನ್ನ ಬಿಟ್ಟು ಇರಲಾರದೆ ಮಯೂರಿ ಸದಾ ಕಣ್ಣೀರು ಹಾಕುತ್ತಿದ್ದರು ಹಾಗಾಗಿ ಅವರು ಹೆಚ್ಚಾಗಿ ಜನರೊಂದಿಗೆ ಬೆರೆತು ಎಲ್ಲಾ ಟಾಸ್ಕ್ ಗಳಲ್ಲಿಯೂ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ಕಾರಣಕ್ಕಾಗಿ ಮಯೂರಿ ಇದೀಗ ಮನೆಯಿಂದ ಹೊರ ನಡೆದಿದ್ದಾರೆ. ಅತ್ಯಂತ ಸಾಫ್ಟ್ ನೇಚರ್, ಕಪಟವಿಲ್ಲದ ಮುದ್ದಾದ ನಗು ಇವೆ ಮಯೂರಿ ಅವರ ಆಸ್ತಿ. ಮಯೂರಿ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಇಷ್ಟವಾಗಿದ್ದರು. ಆದರೆ ಪ್ರತಿ ವಾರದಂತೆ ಈ ವಾರವೂ ಕೂಡ ಒಂದಲ್ಲ ಒಂದು ಸ್ಪರ್ಧಿ ಮನೆಯಿಂದ ಹೊರ ನಡೆಯಲೇಬೇಕಿತ್ತು.
ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಡೆಸುವುದರ ಮೂಲಕ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಮಯೂರಿ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ, ಮನೆಗೆ ಬರುತ್ತಿದ್ದಂತೆ ಮಗ ಆರವ್ ನನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ ಮಯೂರಿ. ಆರವ್ ಕೂಡ ಅಮ್ಮನನ್ನ ಬಹಳ ಮಿಸ್ ಮಾಡಿಕೊಂಡಿದ್ದು ಅಮ್ಮನನ್ನ ನೋಡಿ ಓಡಿ ಬಂದು ತಬ್ಬಿ ಕೊಳ್ಳುತ್ತಾನೆ. ಅಮ್ಮ ಮಗನ ಪ್ರೀತಿ ವಾತ್ಸಲ್ಯಕ್ಕೆ ಸಾಕ್ಷಿಯಾದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
View this post on Instagram