ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆಯ ಮಹಾಪೂರವೇ ಹರಿಯುತ್ತಿದೆ. ಯಾಕೆಂದರೆ ಈ ಬಾರಿ ಇರುವ 18 ಸ್ಪರ್ಧಿಗಳು ಕೂಡ ಒಂದಲ್ಲ ಒಂದು ಟ್ಯಾಲೆಂಟ್ ಹೊಂದಿದ್ದಾರೆ ಕೇವಲ ಟಾಸ್ಕ್ ನಲ್ಲಿ ತಮ್ಮ ದೈಹಿಕ ಬಲ ಹಾಗೂ ಬುದ್ಧಿ ಶಕ್ತಿಯನ್ನು ತೋರಿಸುವುದು ಮಾತ್ರವಲ್ಲ ಜನರನ್ನ ನಕ್ಕು ನಗಿಸುವಲ್ಲಿಯೂ ಕೂಡ ಬಿಗ್ ಬಾಸ್ ಸ್ಪರ್ಧಿಗಳು ಬಹಳ ಮುಂದಿದ್ದಾರೆ. ಹೌದು ಸ್ನೇಹಿತರೆ, ಬಿಗ್ ಬಾಸ್ ಸೀಸನ್ 9 ಆರಂಭವಾಗಿ ಒಂದು ವಾರ ಕಳೆದಿದೆ.
ಇನ್ನೇನು ಕಿಚ್ಚನ ಪಂಚಾಯಿತಿ ಕಟ್ಟೆ ಕೂಡ ಆರಂಭವಾಗಲಿದೆ. ಈ ಬಾರಿ ವೀಕೆಂಡ್ ಬಹಳ ಮಜವಾಗಿರುತ್ತೆ. ಯಾಕಂದ್ರೆ ಸ್ಪರ್ಧಿಗಳ ಜೊತೆ ಚರ್ಚೆ ಮಾಡೋದಕ್ಕೆ ಸಾಕಷ್ಟು ವಿಷಯಗಳಿವೆ. ಒಂದು ವಾರ ಹೇಗೆ ಕಳೆದು ಅಂತಾನೇ ಗೊತ್ತಾಗಿಲ್ಲ ಸ್ಪರ್ಧಿಗಳು ಅತ್ಯಂತ ಅದ್ಭುತವಾಗಿ ಟಾಸ್ಕ್ ಗಳನ್ನು ಮುಗಿಸಿದ್ದಾರೆ. ಎಲ್ಲರೂ ಈ ಬಾರಿ ತಾನು ಗೆಲ್ಲಬೇಕು, ತಾನು ಗೆಲ್ಲಬೇಕು ಎನ್ನುವ ಹಠವನ್ನು ತೊಟ್ಟು ಬಂದಂತೆ ಕಾಣುತ್ತೆ.
ಇತರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಪ್ರೇಮದ ಪಾಠಗಳು ಕೂಡ ಶುರುವಾಗಿವೆ. ಹೌದು ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮ ಇವೆಲ್ಲವೂ ಬಹಳ ಕಾಮನ್ ಇವರಿಗೆ ಎಲ್ಲ ಎಪಿಸೋಡ್ ಗಳಲ್ಲಿ ತಮಗೆ ಕಂಫರ್ಟ್ ಝೋನ್ ಎನಿಸಿರುವ ಸ್ಪರ್ಧಿಗಳ ಜೊತೆ ಇತರ ಸ್ಪರ್ಧಿ ಸದಾ ಒಟ್ಟಿಗೆ ಇರೋದನ್ನ ನೀವು ನೋಡಿದ್ದೀರಿ. ಒಂದು ತಿಂಗಳಿಂದೇ ಪ್ರಸಾರವಾಗಿದ್ದ ಓಟಿಟಿ ವರ್ಷನ್ ನಲ್ಲಿಯೂ ಕೂಡ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಅವರ ಹೆಸರು ಒಟ್ಟಾಗಿ ಕೇಳಿಬಂದಿತ್ತು.
ಇದೀಗ ಈ ಜೋಡಿ ದೊಡ್ಡಮನೆಯನ್ನು ಕೂಡ ಪ್ರವೇಶ ಮಾಡಿದೆ. ಆದರೆ ಮೊದಲ ವಾರ ಮಾತ್ರ ಅಷ್ಟಾಗಿ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಬೆರೆಯಲು ಸಾಧ್ಯವಾಗಿಲ್ಲ. ಈ ನಡುವೆ ನವಾಜ್, ಬೈಕರ್ ಐಶ್ವರ್ಯ ಪಿಸ್ಸೆ ಅವರಿಗೆ ಪ್ರಪೋಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಸದ್ದು ಮಾಡಿದೆ. ಮೊದಲಿನಿಂದಲೂ ಐಶ್ವರ್ಯ ಅವರನ್ನು ಗಮನಿಸಿಕೊಂಡು ಬಂದಿದ್ದ ನವಾಜ್ ಅವರು ಐಶ್ವರ್ಯ ನೋಡೋದಕ್ಕೆ ಹಾಲಿವುಡ್ ನಟಿ ತರ ಇದ್ದಾರೆ ಅಂತ ಪ್ರಶಂಸೆ ಮಾಡಿದ್ದಾರೆ.
ಇನ್ನು ಐಶ್ವರ್ಯ ಪಿಸೆ ಅವರಿಗೆ ಬಹಳ ಕ್ಯೂಟ್ ಆಗಿ ನವಾಜ್ ಪ್ರಪೋಸ್ ಕೂಡ ಮಾಡಿದ್ದಾರೆ. ಈ ಪ್ರಪೋಸ್ ಅನ್ನ ನೋಡಿ ಫಿದಾ ಆದ ಐಶ್ವರ್ಯ ನಿಮಗೆ ಉತ್ತಮ ಹುಡುಗಿ ಸಿಗುತ್ತಾಳೆ ಅಂತ ಹೇಳಿದ್ದಾರೆ. ಇದರ ಜೊತೆಗೆ ನವಾಜ್ ಹಿಂದೆ ದೀಪಿಕಾ ದಾಸ್ ಬಿದ್ದಿರೋದು ಇದೀಗ ಸುದ್ದಿಯಲ್ಲಿರುವ ವಿಚಾರ. ಹೌದು ಬಿಗ್ ಬಾಸ್ ಮನೆಯ ರೂಮ್ ನಲ್ಲಿ ನವಾಜ್ ಅವರ ಬಳಿ ದೀಪಿಕಾ ದಾಸ್.
ನಾನು ನೋಡೋದಕ್ಕೆ ಚೆನ್ನಾಗಿಲ್ವಾ ನನ್ನ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ ಅಂತ ಬಿಲ್ಡಪ್ ಕೊಟ್ಟಿದ್ರು. ಈ ಮಾತನಾ ಕೇಳಿಸಿಕೊಂಡ ನವಾಜ್ ದೀಪಿಕಾ ಅವರಿಗೂ ಬಹಳ ಮುದ್ದಾಗಿ ಪ್ರಪೋಸ್ ಮಾಡಿದ್ದಾರೆ ಇದು ನೋಡುವುದಕ್ಕೆ ಬಹಳ ಮನೋರಂಜನೆಯವಾಗಿದಂತೂ ಸುಳ್ಳಲ್ಲ. ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ನಿಮ್ಮ ನೆಚ್ಚಿನ ಸ್ಪರ್ಧೆ ಯಾರು ನಮಗೆ ಕಮೆಂಟ್ ಮಾಡಿ ತಿಳಿಸಿ.