PhotoGrid Site 1660446962458

ಬಿಗ್ ಬಾಸ್ ಮನೆಯಲ್ಲಿ ಮಾರಿಕೊಳ್ಳುವ ವಿಷಯದ ಬಗ್ಗೆ ಎಲ್ಲರೊಂದಿಗೆ ಚರ್ಚೆ ನಡೆಸುತ್ತಿರುವ ಸೋನು ಗೌಡ! ವಿಡಿಯೋ ನೋಡಿ ಇದೇನಪ್ಪ ಎಂದ ನೆಟ್ಟಿಗರು ನೋಡಿ!!

ಸುದ್ದಿ

ಬಿಗ್ ಬಾಸ್ ಕನ್ನಡ ಒಟಿಟಿ ಆರಂಭವಾಗಿದೆ. ಈಗಾಗಲೇ ಸಾಕಷ್ಟು ನೆಟ್ಟಿಗರು ಬಿಗ್ ಬಾಸ್ ಒಂದು ಹುಚ್ಚರ ಸಂತೆ ಅಂತ ಕಮೆಂಟ್ ಮಾಡುತ್ತಿದ್ದಾರೆ ಯಾಕೆಂದರೆ ಈ ಬಾರಿ ಬಿಗ್ ಬಾಸ್ ಕನ್ನಡ ಓಟಿಟಿ ಗೆ ಪ್ರವೇಶ ಪಡೆದಿರುವ 16 ಸ್ಪರ್ಧಿಗಳಲ್ಲಿ ಯಾರ ಬಗ್ಗೆಯೂ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಅದರಲ್ಲೂ ಎಲ್ಲರೂ ಸಾಮಾಜಿಕ ಜಾಲತಾಣದ ಮೂಲಕ ಫೇಮಸ್ ಆಗಿರುವವರೇ. ಒಂದಿಬ್ಬರು ಮೂವರು ಕಲಾವಿದರನ್ನು ಬಿಟ್ಟರೆ ಮತ್ಯಾರ ಮುಖ ಪರಿಚಯವು ಜನರಿಗೆ ಇಲ್ಲ.

ಅದರಲ್ಲೂ ಹೊರಗಿದ್ದಾಗ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದು ಮಾತ್ರ ಜನರಲ್ಲಿ ಆ’ಕ್ರೋಶ ಮೂಡಿಸಿದೆ. ಯಾವ ಅರ್ಹತೆಯೂ ಇಲ್ಲದೆ ಇರುವಂತವರನ್ನೇ ಆಯ್ಕೆ ಮಾಡಿ ಬಿಗ್ ಬಾಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಯಾರು ಏನೇ ಹೇಳಿದರೂ ಬಿಗ್ ಬಾಸ್ ಎನ್ನುವ ಮನೋರಂಜನೆಯನ್ನು ಸಾಕಷ್ಟು ಜನ ಎಂಜಾಯ್ ಮಾಡುತ್ತಾರೆ.

ಬಿಗ್ ಬಾಸ್ ಮನೆಯಲ್ಲಿ ನಡೆಯುವ ಪ್ರತಿಯೊಂದು ಘಟನೆಯು ಹೊರ ಪ್ರಪಂಚದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತದೆ. ಅಂದಹಾಗೆ ಬಿಗ್ ಬಾಸ್ ಕನ್ನಡ ಓಟಿಟಿ ಆರಂಭವಾಗಿ ಒಂದು ವಾರ ಕಳೆದಿದೆ. ಇವರ ಮನೆಯಿಂದ ಹೊರಗೆ ಹೋಗುವ ಸ್ಪರ್ಧೆ ಯಾರು ಎನ್ನುವುದು ಇನ್ನೇನು ಗೊತ್ತಾಗಬೇಕಷ್ಟೇ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ನಾನು ಯಾರು ಮೂಲಕ ಸ್ಪರ್ದಿಗಳು ಕಣ್ಣಿನಲ್ಲಿ ಗಂಗೆ ಕಾವೇರಿಯನ್ನು ಹರಿಸಿದ್ದು ಆಗಿದೆ. ನಂತರ ನೀಡಿದ ಟಾಸ್ಕ್ ನಲ್ಲಿ ಜಗಳವಾಡಿದ್ದು ಆಯ್ತು.

ಇದೀಗ ಪ್ರೇಮ ಕಹಾನಿ ಶುರುವಾಗಿದೆ. ಇದೊಂದು ಟ್ರಯಾಂಗಲ್ ಲವ್ ಸ್ಟೋರಿಯಂತಿದೆ. ನಟ ರಾಕೇಶ್ ಸೋಶಿಯಲ್ ಮೀಡಿಯಾ ಇನ್ಫುಯೆನ್ಸರ್ ಸ್ಪೂರ್ತಿ ಗೌಡ ಹಾಗೂ ಸೋನು ಶ್ರೀನಿವಾಸ್ ಗೌಡ ಈ ಮೂವರ ನಡುವಿನ ಕಥೆ ಇದು. ಈಗಾಗಲೇ ಸ್ಪೂರ್ತಿ ಗೌಡ ಅವರ ಬಳಿ ರಾಕೇಶ್ ತುಂಬಾ ಕ್ಲೋಸ್ ಆಗಿದ್ದಾರೆ. ರಾಕೇಶ ಸ್ಪೂರ್ತಿ ಗೌಡ ಅವರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ. ಇಬ್ಬರೂ ಕುಳಿತು ಗಾಸಿಪ್ ಮಾಡುತ್ತಾರೆ.

ರಾಕೇಶ್ ಸ್ಪೂರ್ತಿಗೆ ತಿನ್ನಿಸಿದ್ದನ್ನ ನೋಡಿ ಆರ್ಯವರ್ಧನ ಗುರೂಜಿ ಇಬ್ಬರ ಬಗ್ಗೆಯೂ ಮಾತನಾಡಿದರು. ಇನ್ನು ಈ ನಡುವೆ ಸೋನು ಶ್ರೀನಿವಾಸ ಗೌಡ ತನಗೆ ರಾಕೇಶ್ ಮೇಲೆ ಫೀಲಿಂಗ್ ಇದೆ ಅಂತ ಮತ್ತೋರ್ವ ಸ್ಪರ್ಧಿ ಜೊತೆ ಹೇಳಿಕೊಂಡಿದ್ದರು. ಅಲ್ಲದೆ ರಾಕೇಶ್ ಅವರ ಜೊತೆಗೆಯೂ ನೀನು ಒಪ್ತಿಯೂ ಇಲ್ವೋ ಗೊತ್ತಿಲ್ಲ ನಿನ್ನ ಮೇಲೆ ನನಗೆ ಫೀಲಿಂಗ್ಸ್ ಇದೆ ಅಂತ ಹೇಳಿದ್ದಾರೆ. ಸ್ಪೂರ್ತಿ ಗೌಡ ರಾಕೇಶ್ ಜೊತೆ ಕ್ಲೋಸ್ ಆಗಿರೋದನ್ನ ನೋಡಿ ಸೋನು, ರಾಕೇಶ್ ಅವರನ್ನ ನಿನಗೆ ಬಿಟ್ಟುಕೊಟ್ಟಿದ್ದೇನೆ ಅಂತ ಹೇಳಿದರು.

ಅದಕ್ಕೆ ರಾಕೇಶ್ ಎಷ್ಟಕ್ಕೆ ಅಂತ ಕೇಳಿದ್ರೆ ನಾನು ಮನಸ್ಸಿನಲ್ಲಿಯೇ ನಿನಗೆ ಮನೆ ಕಟ್ಟಿದ್ದೇನೆ ಇನ್ನು ಎಷ್ಟಕ್ಕೆ ಸೇಲ್ ಮಾಡೋಕೆ ಆಗುತ್ತೆ ಹಾಗೆ ನಿನ್ನನ್ನ ಬಿಟ್ಟು ಕೊಟ್ಟಿದ್ದೇನೆ ಅಂತ ಹೇಳಿದ್ದು, ಟ್ರಯಾಂಗಲ್ ಲವ್ ಸ್ಟೋರಿ ಟುವೇ ಲವ್ ಸ್ಟೋರಿ ಯಾಗುವ ಸಾಧ್ಯತೆ ಇದೆ. ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಹುಟ್ಟಿಕೊಳ್ಳೋದು ಹೊಸತಲ್ಲ.

ಹೀಗೆ ಮನೆಯಲ್ಲಿ ಪ್ರೀತಿ ಗೀತಿ ಅಂತ ಹೊರಗಡೆ ಬಂದು ಮದುವೆಯಾದವರೂ ಇದ್ದಾರೆ.ಹಾಗಾಗಿ ಈ ಪ್ರೇಮ್ ಕಹಾನಿ ಎಲ್ಲಿಗೆ ಹೋಗಿ ಮುಟ್ಟತ್ತೆ ಕಾದು ನೋಡಬೇಕು! ಅಂದಹಾಗೆ ಕಿಚ್ಚನ ವಾರದ ಕಥೆ ಕೇಳುವುದಕ್ಕೆ ಕಾಯುತ್ತಿದ್ದವರಿಗೆ ವೀಕೆಂಡ್ ಕಿಚ್ಚನ ಸುಡಿಪ್ ಬಂದಿದ್ದು ಖುಷಿ ಕೊಟ್ಟಿದೆ!

Leave a Reply

Your email address will not be published. Required fields are marked *