ಈವರಿಗೆ 8 ಸೀಸನ್ ಗಳನ್ನ ಭರ್ಜರಿಯಾಗಿ ಪೂರ್ಣಗೊಳಿಸಿದ ಬಿಗ್ ಬಾಸ್ ಇದೀಗ ಒಂಬತ್ತನೇ ಸೀಸನ್ ನಲ್ಲಿ ಎರಡು ವಾರಗಳನ್ನ ಯಶಸ್ವಿಯಾಗಿ ಮುಗಿಸಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಜೋರಾಗಿ ಕೈ ಕೈ ಮಿಲಾಯಿಸುವ ಸ್ಪರ್ಧಿಗಳು ಇಲ್ಲ. ಆದರೆ ಮುಸುಕಿನ ಗುದ್ದಾಟ ಮಾತ್ರ ನಿರಂತರವಾಗಿ ನಡೆಯುತ್ತಿರುತ್ತದೆ. ಎಲ್ಲಾ ಸ್ಪರ್ಧಿಗಳು ಗೆಲ್ಲಬೇಕು ಎನ್ನುವ ಹಠ ತೊಟ್ಟಂತೆ ಕಾಣುತ್ತಿದೆ ಅದರಲ್ಲೂ ಹೆಣ್ಣು ಮಕ್ಕಳು ಒಂದು ಕೈ ಮೇಲಿದ್ದಾರೆ.
ಹೌದು ಬಿಗ್ ಬಾಸ್ ಸೀಸನ್ 9 ನೀವು ಕೂಡ ನೋಡುತ್ತಿರಬಹುದು. ಇವರಿ ಹೆಣ್ಣುಮಕ್ಕಳು ಹೆಚ್ಚು ಸ್ಟ್ರಾಂಗ್ ಆಗಿದ್ದಾರೆ. ಅದರಲ್ಲೂ ಈ ಹಿಂದೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಅನುಪಮಾ ಗೌಡ, ದೀಪಿಕಾ ದಾಸ್ ಹಾಗೂ ದಿವ್ಯ ಉರುಡುಗ ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸುತ್ತಿದ್ದಾರೆ. ಬಹುಶಹ ಬಿಗ್ ಬಾಸ್ ಮನೆಯ ಮೂಲೆ ಮೂಲೆ ಗೊತ್ತಿರುವ ಈ ಸ್ಪರ್ಧಿಗಳಿಗೆ ಸ್ವಲ್ಪ ಸುಲಭ ಆಗಿರಬಹುದು.
ಇದರ ಜೊತೆಗೆ ನವೀನರು ಕೂಡ ತಾವೇನು ಕಡಿಮೆ ಇಲ್ಲ ಅಂತ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನು ಕಳೆದ ವಾರಂತ್ಯದಲ್ಲಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ನಿರೂಪಕಿ ಅನುಪಮಾ ಗೌಡ ಬಿಗ್ ಬಾಸ್ ಮನೆಯಲ್ಲಿ ಹವಾ ಮೇಂಟೈನ್ ಮಾಡಿದ್ದಾರೆ. ಎಲ್ಲಾ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅನುಪಮಾ ಗೌಡ ಅಡುಗೆ ಮಾಡುವುದಕ್ಕೂ ಸೈ ಟಾಸ್ಕ್ ಮಾಡುವುದಕ್ಕೂ ಸೈ ಎನ್ನುವಂತಿದ್ದಾರೆ.
ಆದರೆ ಅನುಪಮಾ ಗೌಡ ಈ ಬಾರಿ ಮನೆಯಿಂದ ಹೊರ ಹೋಗುವುದಕ್ಕೆ ನಾಮಿನೇಟ್ ಆಗಿದ್ದಾರೆ ಹಾಗಾಗಿ ಮುಂದಿನ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗುಳಿದಿದ್ದಾರೆ. ಅನುಪಮಾ ಗೌಡ ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟ ಪ್ರದರ್ಶಸುತ್ತಿದ್ದಾರೆ. ದೈಹಿಕ ಬಲದ ಆಟದಿಂದ ಹಿಡಿದು ಮೈಂಡ್ ಗೇಮ್ ವರೆಗೂ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಇನ್ನು ನಿರೂಪಕಿ ನಟಿ ಅನುಪಮಾ ಗೌಡ ದೊಡ್ಮನೆಯಲ್ಲಿ ಧರಿಸುವ ಬಟ್ಟೆಯಿಂದಾಗಿ ಟ್ರೋಲ್ ಆಗುತ್ತಿದ್ದಾರೆ. ಹೌದು, ಅನುಪಮಾ ಗೌಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಶಾರ್ಟ್ ಬಟ್ಟೆಗಳನ್ನೇ ಧರಿಸುತ್ತಿದ್ದು, ಈ ವಿಷಯವಾಗಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಆಗುತ್ತಿದೆ. ಇತ್ತೀಚೆಗೆ ಸ್ವಿಮ್ ಸೂಟ್ ಧರಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಅನುಪಮಾ ಗೌಡ ಈಜಾಡುವ ದೃಶ್ಯ ಸರಿಯಾಗಿದೆ. ಕಪ್ಪು ಬಿಳುಪಿನ ಸ್ವಿಮ್ ಸೂಟ್ ನಲ್ಲಿ ಅನುಪಮಾ ಗೌಡ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಇದೀಗ ಬಿಗ್ ಬಾಸ್ ಮನೆಯಲ್ಲಿ ಚಿನ್ನ ಹುಡುಕುವ ಟಾಸ್ಕ್ ಆರಂಭವಾಗಿದೆ. ಇದರಲ್ಲಿ ಸ್ಪರ್ಧಿಗಳು ಗೆದ್ದ ಚಿನ್ನವನ್ನು ಕದಿಯುವಲ್ಲಿ ಅರುಣ್ ಸಾಗರ್ ನಿರತರಾಗಿದ್ದಾರೆ. ಆದರೆ ಉಳಿದ ಸ್ಪರ್ಧಿಗಳು ಮಾತ್ರ ಶತಾಯಗತಾಯ ಆದಷ್ಟು ಚಿನ್ನ ಗಳಿಸಲೇಬೇಕು ಅಂತ ಬಜರ್ ಆಗುವುದನ್ನೇ ಕಾಯುತ್ತಿರುತ್ತಾರೆ. ಈ ನಡುವೆ ಪ್ರಶಾಂತ ಸಂಬರ್ಗಿ ತುಸು ಸ್ಮಾರ್ಟ್ ಆಗಿಯೇ ಆಟ ಆಡುತ್ತಿದ್ದಾರೆ.
ಇನ್ನ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರ ನಡುವೆ ಆಗಾಗ ಜಗಳದ ಕಿಡಿ ಹಾರುತ್ತಿದೆ. ಇತ್ತ ಎಲ್ಲರೂ ಚಿನ್ನ ಗೆಲ್ಲುವುದಕ್ಕೆ ಕಷ್ಟ ಪಡುತ್ತಿದ್ದರೆ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಆರ್ಯವರ್ಧನ್ ಗುರೂಜಿ ಶಿಸ್ತಾಗಿ ಕುಳಿತು ಆಟ ನೋಡುತ್ತಿದ್ದಾರೆ. ಚಿನ್ನದ ಕೆಲವು ಯಾರದ್ದು ಎಂಬುದು ಟಾಸ್ಕ್ ಮುಗಿದ ನಂತರ ಗೊತ್ತಾಗಲಿದೆ. ನಟಿ ಅನುಪಮಾ ಗೌಡ ನಿಮ್ಮ ನೆಚ್ಚಿನ ಸ್ಪರ್ಧಿ ಆಗಿದ್ದರೆ ನಮಗೆ ತಪ್ಪದೆ ಕಮೆಂಟ್ ಮಾಡುವ ಮೂಲಕ ತಿಳಿಸಿ.