ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ ಬೆನ್ನಲ್ಲೇ ಮಧ್ಯರಾತ್ರಿ ರೂಪೇಶ್ ಶೆಟ್ಟಿಯನ್ನು ತಬ್ಬಿಕೊಂಡ ಸಾನ್ಯಾ ಐಯ್ಯರ್! ಲವ್ವಿ ಡವ್ವಿ ನೋಡಿ ಬೆಚ್ಚಿಬಿದ್ದ ಪ್ರೇಕ್ಷಕರು!!

ಸುದ್ದಿ

ಈ ಹಿಂದೆ ಬಿಗ್ ಬಾಸ್ ಓಟಿಪಿಯಲ್ಲಿ ಪ್ರಸಾರವಾಗಿದ್ದು, ಅದರಲ್ಲಿ ಸ್ಪರ್ಧಿಗಳಾಗಿದ್ದ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಇಬ್ಬರು ಇದೀಗ ಬಿಗ್ ಬಾಸ್ ಸೀಸನ್ ಅನ್ನು ಕೂಡ ಪ್ರವೇಶಿಸಿದ್ದಾರೆ ಸಾನಿಯಾ ಹಾಗೂ ರೂಪೇಶ್ ನಡುವೆ ಸ್ನೇಹ ಬಲವಾಗಿತ್ತು. ಇದು ಇವರ ನಡುವಿನ ಪ್ರೀತಿಯಾಗಿ ತಿರುಗಿದೆ. ಬಿಗ್ ಬಾಸ್ ಮನೆಯಲ್ಲಿ ಈಗಲೂ ಸಾನಿಯಾ ಹಾಗೂ ರೂಪೇಶ್ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ.

ಹೌದು ಬಿಗ್ ಬಾಸ್ ಸೀಸನ್ 9 ನಲ್ಲಿ ಲವ್ ಬರ್ಡ್ಸ್ ಎಂದೇ ಕರೆಸಿಕೊಂಡಿರುವ ಜೋಡಿ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್. ನಾಸಿಯಾ ಅಯ್ಯರ್ ಗೆ ರೂಪೇಶ್ ಶೆಟ್ಟಿ ಅಂದರೆ ಬಹಳ ಇಷ್ಟ. ಆಗಾಗ ರೂಪೇಶ್ ಶೆಟ್ಟಿ ಜೊತೆ ಏಕಾಂತದಲ್ಲಿ ಮಾತನಾಡಲು ಬಯಸುತ್ತಾರೆ. ಮೊನ್ನೆಯಷ್ಟೆ ಬಾತ್ ರೂಪ್ ಏರಿಯಾದಲ್ಲಿ ರೂಪೇಶ್ ಕುಳಿತಿದ್ದರು. ಆಗ ಅಲ್ಲಿಗೆ ಬಂದ ಸಾನಿಯಾ ಅಯ್ಯರ್ ನನಗೆ ನಿನ್ನನ್ನ ಕಂಡರೆ ಒಂಥರಾ ಆಗುತ್ತಿದೆ. ಎನ್ನುತ್ತಾರೆ.

ಅದಕ್ಕೆ ರೂಪೇಶ್ ಒಂಥರಾ ಅಂದ್ರೆ ಯಾವ ತರ, ನನ್ನ ಮೇಲೆ ಕೋಪ ಬರ್ತಿದ್ಯಾ? ನನ್ನ ಮುಖದಲ್ಲಿನ ಕಲೆ ನೋಡಿ ಒಂಥರಾ ಆಗ್ತಿದ್ಯಾ ಅಂತ ಏನು ಅರ್ಥವಾಗದಂತೆ ನಟಿಸುತ್ತಾರೆ. ಇಲ್ಲಿರುವ ಯಾರ ದೃಷ್ಟಿಯೂ ನಿನ್ನ ಮೇಲೆ ಬೀಳದೆ ಇರಲಿ ಎಂದು ಸಾನಿಯಾ ರೂಪೇಶ್ ಅವರಿಗೆ ದೃಷ್ಟಿಯನ್ನು ತೆಗೆದಿದರು. ಒಮ್ಮೊಮ್ಮೆ ನಿನ್ನ ಮೇಲೆ ಲವ್ ಜಾಸ್ತಿ ಆಗುತ್ತೆ ಎಂದು ಸಾನಿಯಾ ನಾಚುತ್ತಲೆ ನಾನು ಇಲ್ಲಿ ಇರೋದೇ ಇಲ್ಲ ಅಲ್ಲಿಂದ ಹೊರಟು ಹೋದರು.

ಆದರೆ ಈ ಸಂಭಾಷಣೆಯಲ್ಲಿ ತನಗೆ ಎಲ್ಲ ಗೊತ್ತಿದ್ರೂ ಏನು ಗೊತ್ತಿಲ್ಲದಂತೆ ಇನೋಸೆಂಟ್ ಆಗಿ ಕಾಣಿಸಿಕೊಂಡರು ರೂಪೇಶ್. ಇನ್ನು ನಿನ್ನೆ ಗಾರ್ಡನ್ ಏರಿಯಾದಲ್ಲಿ ವರ್ಕೌಟ್ ಮಾಡುವಾಗ ಸಾನಿಯಾ ಅವರನ್ನು ಎತ್ತುಕೊಂಡು ರೂಪೇಶ್ ವರ್ಕೌಟ್ ಮಾಡಿದ್ದಾರೆ. ಈಗ ನಿನಗೆ ನನ್ನನ್ನು ಎತ್ತಿಕೊಳ್ಳಬೇಕು ಅನ್ನಿಸುತ್ತಿದ್ಯಾ ಎಂದು ಕೇಳಿದ ಸಾನಿಯಾ ನಿನಗೆ ಯಾವಾಗೆಲ್ಲ ನನ್ನನ್ನು ಎತ್ತಿಕೊಳ್ಳಬೇಕು ಅನ್ನಿಸುತ್ತೋ ಅವಾಗೆಲ್ಲ ಎತ್ತಿಕೊಳ್ಳಬಹುದು ಅಂತ ಫುಲ್ ಫ್ರೀಡಂ ಕೊಟ್ಟಿದ್ದಾರೆ ಸಾನಿಯಾ.

ಇನ್ನು ನಿನ್ನೆ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಅಯ್ಯರ್ ರೂಪೇಶ್ ಶೆಟ್ಟಿ ಅವರನ್ನು ಮಧ್ಯರಾತ್ರಿ ತಬ್ಬಿಕೊಂಡ ದೃಶ್ಯ ಸೆರಿಯಾಗಿದೆ. ಸಾನಿಯಾ ಅಯ್ಯರ್ ಗೆ ರೂಪೇಶ್ ಶೆಟ್ಟಿಯನ್ನು ತಬ್ಬಿಕೊಂಡು ಗುಡ್ ನೈಟ್ ಹೇಳಬೇಕು. ಆದರೆ ನಿನ್ನೆ ಬಹುಶಃ ರೂಪೇಶ್ ಇದನ್ನು ಮಿಸ್ ಮಾಡಿರಬೇಕು. ನಂತರ ಮದ್ಯರಾತ್ರಿ ಎದ್ದು ಬಂದ ರೂಪೇಶ್ ಮೊದಲು ಶೇಖ್ ಹ್ಯಾಂಡ್ ಮಾಡಿ ನಂತರ ಸಾನಿಯಾ ಅವರನ್ನು ತಬ್ಬಿಕೊಂಡು ಗುಡ್ ನೈಟ್ ಹೇಳಿದ್ದಾರೆ.

ಇನ್ನು ರೂಪೇಶ್ ಗೆ ಕೈತುತ್ತುಕೊಡಲು ಹೋದ ಸಾನಿಯಾ ರೂಪೇಶ್ ಬೇಡವೆಂದರೂ ಬಲವಂತವಾಗಿ ತುತ್ತನ್ನು ನೀಡಿದರು ಒಂದೊಮ್ಮೆ ನನ್ನ ಕೈಯಿಂದ ತುತ್ತು ತಿನ್ನದೇ ಹೋದರೆ ನಿನ್ನನ್ನ ರಾತ್ರಿ ತಬ್ಬಿಕೊಂಡು ಗುಡ್ ನೈಟ್ ಹೇಳುವುದೇ ಇಲ್ಲ ಅಂತ ಸಾನಿಯಾ ತಾಕತ್ತು ಮಾಡಿದ್ದಾರೆ. ಕೊನೆಗೆ ಬೇರೆ ದಾರಿ ಇಲ್ಲದೆ ರೂಪೇಶ್ ಸಾನಿಯಾ ಕೈಯಲ್ಲಿ ಊಟ ಮಾಡಿದ್ದಾರೆ.

ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯ ಇತರ ಮನರಂಜನೆಯ ಜೊತೆಗೆ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಅವರ ಕ್ಯೂಟ್ ಲವ್ ಸ್ಟೋರಿ ಕೂಡ ಹೆಚ್ಚು ಮನೋರಂಜನೆ ನೀಡುತ್ತಿದೆ. ಆದರೆ ಈ ನಡುವೆ ಟಾಸ್ಕ್ ವಿಷಯ ಬಂದಾಗ ಸ್ವಲ್ಪವೂ ವಿಚಲಿತನಾಗದೇ ರೂಪೇಶ್ ಆಡುತ್ತಿರುವುದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

Leave a Reply

Your email address will not be published. Required fields are marked *