ಬಿಗ್ ಬಾಸ್ ಸೀಸನ್ ಒಂಬತ್ತು ಯಶಸ್ವಿಯಾಗಿ ಎರಡನೇ ವಾರವನ್ನು ಮುಗಿಸಿದೆ ಇನ್ನೇನು ಪಂಚಾಯ್ತಿ ಕಟ್ಟೆ ಆರಂಭವಾಗಲಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳದ್ದೇ ಅಬ್ಬರ. ಕೊನೆಗೂ ಎಲ್ಲಾ ಟಾಸ್ಕ್ ಗಳನ್ನ ಗೆದ್ದಿದ್ದು ವಜ್ರಕಾಯ ತಂಡ. ಜೊತೆಗೆ ವಿಜಯ ದಶಮಿ ಹಬ್ಬದ ಪ್ರಯುಕ್ತ ಕರ್ನಾಟಕದ ಪ್ರಮುಖ ಆಟವಾದ ಕುಸ್ತಿಯನ್ನೂ ಕೂಡ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೋರಂಜನೆಯ ದೃಷ್ಟಿಯಿಂದ ಆಯೋಜನೆ ಮಾಡಿದ್ದರು.
ಕುಸ್ತಿಪಟುಗಳ ಜೊತೆ ಬಿಗ್ ಬಾಸ್ ನ ಮಹಿಳಾ ಸ್ಪರ್ಧಿಗಳೂ ಕೂಡ ಕುಸ್ತಿ ಮಾಡಿದ್ದು ಮನೋರಂಜನೆಯಿಂದ ಕೂಡಿತ್ತು. ಬಿಗ್ ಬಾಸ್ ನಲ್ಲಿ ಎರಡು ತಂಡಗಳನ್ನಾಗಿ ಮಾಡಿ ಈ ವಾರ ಟಾಸ್ಕ್ ನೀಡಲಾಗಿತ್ತು ಒಂದು ತಂಡಕ್ಕೆ ದೀಪಿಕಾ ದಾಸ್ ಲೀಡರ್ ಆಗಿದ್ದರೆ ಇನ್ನೊಂದು ತಂಡದ ನಾಯಕತ್ವವನ್ನು ಅನುಪಮಾ ಗೌಡ ವಹಿಸಿಕೊಂಡಿದ್ದರು. ಅನುಪಮಾ ಗೌಡ ನೇತೃತ್ವದ ವಜ್ರಕಾಯ ತಂಡ ಈ ವಾರದ ಎಲ್ಲಾ ಟಾಸ್ಕ್ ಗಳನ್ನು ಗೆದ್ದು ಕ್ಯಾಪ್ಟನ್ಸಿ ಟಾಸ್ಕ್ ಗೂ ಕೂಡ ಆಯ್ಕೆಯಾಗಿದೆ.
ಈ ನಡುವೆ ಬಿಗ್ ಬಾಸ್ ಹೆಸರನ್ನ ಬಳಸಿಕೊಂಡು ಫ್ರಾಂಕ್ ಮಾಡಲು ಹೋಗಿ ಅನುಪಮಾ ಗೌಡ ಹಾಗೂ ರಾಕೇಶ್ ಪೇಚಿಗೆ ಸಿಲುಕಿದರು. ಹೌದು, ಗುರೂಜಿ ಅವರಿಗೆ ತಾವು ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಕ್ಯಾಪ್ಟನ್ ಆಗಬೇಕು ಎನ್ನುವ ಮಹಾದಾಸೆ ಇತ್ತು. ಅದರ ಬಗ್ಗೆ ಎಲ್ಲರ ಬಳಿಯೂ ಹೇಳಿಕೊಂಡು ಬಂದಿದ್ದಾರೆ ನಾನು ಈ ಮನೆಯನ್ನ ಅರ್ಥ ಮಾಡಿಕೊಂಡಿದ್ದೇನೆ ಹಾಗಾಗಿ ನಾನು ಕ್ಯಾಪ್ಟನ್ ಆಗಬೇಕು ಅಂತ ಹೇಳಿದರು.
ಗುರೂಜಿಗೆ ಫ್ರಾಂಕ್ ಮಾಡುವುದಕ್ಕಾಗಿ ಬಿಗ್ ಬಾಸ್ ಈ ಬಾರಿ ಕ್ಯಾಪ್ಟನ್ ಆಯ್ಕೆಯ ಬಗ್ಗೆ ನೀಡಿರುವ ಆದೇಶವನ್ನು ಅನುಪಮಾ ಗೌಡ ಹಾಗೂ ರಾಕೇಶ್ ಓದಿದರು. ಈ ಫ್ರಾಂಕ್ ಗೆ ವಜ್ರಕಾಯ ತಂಡ ಸಪೋರ್ಟ್ ಮಾಡಿತ್ತು. ಕೊನೆಗೆ ಬಿಗ್ ಬಾಸ್ ಹೆಸರನ್ನ ಬಳಸಿಕೊಂಡು ಫ್ರಾಂಕ್ ಮಾಡಿದ್ದಕ್ಕೆ ಫ್ರಾಂಕ್ ನಲ್ಲಿ ಆಯ್ಕೆಯಾದ ನಾಲ್ಕು ಜನ ಮಾತ್ರ ಬಿಗ್ ಬಾಸ್ ಕ್ಯಾಪ್ಟೆನ್ಸಿ ಟಾಸ್ಕ್ ಮಾಡಬಹುದು ಎಂದು ಬಿಗ್ ಬಾಸ್ ನಿಂದ ಆದೇಶ ಬಂತು.
ಇದರಿಂದ ಉಳಿದ ಸ್ಪರ್ಧಿಗಳಿಗೆ ಬೇಸರ ಆಗಿದ್ದು ಅಲ್ಲದೆ ಸ್ಪರ್ಧಿಗಳ ನಡುವೆ ಕಿತ್ತಾಟವು ಜೋರಾಗಿತ್ತು. ಕೊನೆಗೆ ಬಿಗ್ ಬಾಸ್ ಇದು ಕೂಡ ಒಂದು ಫ್ರಾಂಕ್ ಎಂದು ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನ ಮಾಡಿದ್ರು. ಇನ್ನು ಈ ನಡುವೆ ಬಿಗ್ ಬಾಸ್ ಗೆ ಎರಡನೇ ಬಾರಿ ಪ್ರವೇಶ ಮಾಡಿದ ಅನುಪಮಾ ಗೌಡ ಎಲ್ಲಾ ಟಾಸ್ಕ್ ಗಳಲ್ಲಿಯೂ ಹಾಗೂ ಮನೆಯ ಇತರ ಚಟುವಟಿಕೆಗಳಲ್ಲಿ ಹೆಚ್ಚು ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದಾರೆ.
ಇದೀಗ ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಫ್ರಾಂಕ್ ಮಾಡುತ್ತಿದ್ದಾರೆ ಅನುಪಮಾ ಗೌಡ. ಇವರ ನೇತೃತ್ವದ ವಜ್ರಕಾಯ ತಂಡವು ಈ ಬಾರಿ ಯಶಸ್ಸನ್ನ ಗಳಿಸಿದೆ. ಈ ನಡುವೆ ಅನುಪಮಾ ಗೌಡ ಅವರ ಪ್ರಪಂಚದಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅನುಪಮ ಗೌಡ ಅವರು ಹೆಚ್ಚಾಗಿ ಶಾರ್ಟ್ ಬಟ್ಟೆಯನ್ನೇ ಧರಿಸುತ್ತಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹೈಲೈಟ್ ಆಗುತ್ತಿದೆ. ಬಿಗ್ ಬಾಸ್ ಮನೆಗೆ ಎರಡನೇ ಬಾರಿ ಹೋದಮೇಲೆ ಅನುಪಮಾ ಗೌಡ ಅವರು ಸಣ್ಣ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುತ್ತಾರೆ ಎಂದು ನೆಟ್ಟಿದರೂ ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.