ಬಿಗ್ ಬಾಸ್ ಪ್ರಿಯರ ಖುಷಿಗೆ ಇಂದಿನಿಂದ ಪಾರವೇ ಇಲ್ಲ. ಅದರಲ್ಲೂ ಈ ಬಾರಿ ಮೊದಲನೇ ಪ್ರಯತ್ನವಾಗಿ ವೂಟ್ ಆಪ್ ನಲ್ಲಿ ಅಂದರೆ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ಈ ಓಟಿಟಿ ಬಿಗ್ ಬಾಸ್ ಗೆ ಇಂದಿನಿಂದ ಚಾಲನೆ ಸಿಕ್ಕಿದ್ದು ಒಬ್ಬೊಬ್ಬರಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುತ್ತಿದ್ದಾರೆ. ಬಿಗ್ ಬಾಸ್ ಪ್ರೇಕ್ಷಕರಿಗೆ ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಅನ್ನುವ ಕುತೂಹಲ ಇತ್ತು.
ಆ ಕುತೂಹಲವನ್ನು ಇದೀಗ ಬಿಗ್ ಬಾಸ್ ಒಬ್ಬೊಬ್ಬ ಕಂಟೆಸ್ಟೆಂಟ್ ಗಳನ್ನು ತೋರಿಸುವ ಮೂಲಕ ತಣಿಸುತ್ತಿದೆ. ಬಿಗ್ ಬಾಸ್ ಓಟಿಟಿ ಕನ್ನಡ ಸಾಕಷ್ಟು ಕುತೂಹಲ ಮೂಡಿಸಿದಂತೂ ನಿಜ. ಯಾಕಂದರೆ ಇದು ಮೊದಲ ಓಟಿಟಿ ಸೀಸನ್. ಹಾಗಾಗಿ ಪ್ರೇಕ್ಷಕರಿಗೆ ನಿರೀಕ್ಷೆಗಳು ಕೊಂಚ ಹೆಚ್ಚೇ ಇದೆ. ಇವತ್ತಿನಿಂದ ಪ್ರಾರಂಭ ಆದ ಬಿಗ್ ಬಾಸ್ ಓಟಿಟಿಗೆ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಅವರು ‘ಬಿಗ್ ಬಾಸ್’ ಮನೆ ಸೇರಿದ್ದರು.
ಇದೀಗ ಎರಡನೇ ಸ್ಪರ್ಧಿಯ ಎಂಟ್ರಿ ಆಗಿದೆ. ಈ ಎರಡನೆ ಸ್ಪರ್ಧಿಯನ್ನು ನೋಡಿದ ಕನ್ನಡ ಜನತೆ ಸಿಕ್ಕಾಪಟ್ಟೆ ಶಾಕ್ ಆಗಿದ್ದಾರೆ. ಹೌದು, ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಒಟಿಟಿಗೆ ಎಂಟ್ರಿ ನೀಡಿರುವುದು. ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ಸೋನು ಶ್ರೀನಿವಾಸ್ ಅವರು ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ.
ಎಂಬ ಸುದ್ದಿ ಹರಡಿತ್ತು. ಅದು ಈಗ ನಿಜ ಆಗಿದೆ. ಕಪ್ಪು ಹಾಗೂ ತಿಳಿ ನೀಲಿ ಬಣ್ಣದ ಸುಂದರ ಡ್ರೆಸ್ ಹಾಕಿಕೊಂಡು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋಗೆ ಬರಮಾಡಿಕೊಂಡಿದ್ದಾರೆ. ಇನ್ನು ವೇದಿಕೆಗೆ ಬಂದ ಸೋನು ಶ್ರೀನಿವಾಸ್ ಗೌಡ ಅವರನ್ನು ಕಿಚ್ಚ ಸುದೀಪ್ ಅವರು ಕಾಲೆಳೆದಿದ್ದು ಇದುವೇ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಇನ್ನು ಬಿಗ್ ಬಾಸ್ ಮನೆಯೊಳಗೆ ಸೋನು ಶ್ರೀನಿವಾಸ್ ಗೌಡ ಹೋಗಿರುವುದರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವರು ಖುಷಿ ವ್ಯಕ್ತಪಡಿಸಿದರೆ ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಸೋನು ಶ್ರೀನಿವಾಸ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅವರಿಗೆ ಇನ್ಸ್ಟಾಗ್ರಾಂ ನಲ್ಲಿ 7.7 ಲಕ್ಷ ಫಾಲೋವರ್ಸ್ ಇದ್ದಾರೆ.
ಇವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವ ಮೂಲಕ ಫೇಮಸ್ ಆದವರು. ಟಿಕ್ ಟಾಕ್ ನಿಂದ ಫೇಮಸ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಇದೀಗ ರೀಲ್ಸ್ ನಲ್ಲೂ ಫೇಮಸ್. ಆದರೆ ಇವರು ಚರ್ಚೆ ಆಗಿದ್ದು ಕೆಲ ಖಾಸಗಿ ವಿಡಿಯೋಗಳಿಂದ. ಹೌದ ಸೋನು ಶ್ರೀನಿವಾಸ್ ಗೌಡರದ್ದೇ ಎಂದು ಹೇಳುವಂತಹ ಅವರ ಖಾಸಗಿ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಆ ನಂತರ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ಈ ಮೂಲಕ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಕ್ಯಾಡ್ ಬರೀಸ್ ಸಿನಿಮಾ ಸೇರಿದಂತೆ ಕೆಲ ಕಿರುಚಿತ್ರ ಹಾಗೂ ಅಲ್ಬಂ ಸಾಂಗ್ ಗಳಲ್ಲಿ ನಟಿಸಿದ್ದಾರೆ. ಇದೀಗ ಇವರು ಬಿಗ್ ಬಾಸ್ ಓಟಿಟಿಗೆ ಎಂಟ್ರಿ ಕೊಟ್ಟು ಇನ್ನಷ್ಟು ಫೇಮಸ್ ಆಗಲಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿರುವ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.