ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಒಂದೇ ದಿನಕ್ಕೆ ಹವಾ ಎಬ್ಬಿಸಿದ ತಮಿಳು ನಟಿ ರಚಿತಾ ಮಹಾಲಕ್ಷ್ಮಿ! ರಚಿತಾ ನೋಡಲು ಟಿವಿ ಮುಂದೆ ಕ್ಯೂ ನಿಂತ ಪ್ರೇಕ್ಷಕರು ನೋಡಿ!!

ಸುದ್ದಿ

ಕನ್ನಡ ಭಾಷೆ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಕಿರುತೆರೆಯ ಲೋಕ ಬಹಳ ಬೆಳೆಯುತ್ತಿದೆ. ಜನ ಹೆಚ್ಚಾಗಿ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳನ್ನ ಬಹಳ ಆಸಕ್ತಿಯಿಂದ ನೋಡುತ್ತಾರೆ. ಅದರಲ್ಲೂ ಬಿಗ್ ಬಾಸ್ ಎನ್ನುವ ಒಂದು ರಿಯಾಲಿಟಿ ಶೋ ದೇಶದ ಎಲ್ಲಾ ಟೆಲಿವಿಷನ್ ಪ್ರಿಯರ ಮನಸೂರೆಗೊಂಡ ಶೋ. ಇತ್ತೀಚಿಗೆ ಕನ್ನಡದಲ್ಲಿಯೂ ಕೂಡ ಬಿಗ್ ಬಾಸ್ ಸೀಸನ್ ಆರಂಭವಾಗಿದೆ.

ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 9 ಬಹಳ ಅತ್ಯದ್ಭುತವಾಗಿ ನಡೆಯುತ್ತಿದೆ. ಈಗಾಗಲೇ ಮೂರು ವಾರಗಳು ಕಳೆದಿವೆ. ಎಲ್ಲಾ ಸ್ಪರ್ಧಿಗಳು ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಇನ್ನು ಬಿಗ್ ಬಾಸ್ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ಕೂಡ ಪ್ರಸಾರವಾಗುತ್ತಿದೆ ಹಿಂದಿಯಲ್ಲಿ ಈಗಾಗಲೇ ಸಾಕಷ್ಟು ಸೀಸನ್ ಗಳು ಪ್ರಸಾರವಾಗಿವೆ. ಸಲ್ಮಾನ್ ಖಾನ್ ಈ ಶೋವನ್ನು ನಡೆಸಿಕೊಡುತ್ತಾರೆ.

ಇನ್ನೂ ತಮಿಳುನಲ್ಲಿ ಬಿಗ್ ಬಾಸ್ ಸೀಸನ್ 6 ಈಗ ಆರಂಭವಾಗಿದೆ ಬಹುಭಾಷಾ ನಟ ಸೂಪರ್ ಸ್ಟಾರ್, ಕಮಲಾ ಹಾಸನ್ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ. ಕನ್ನಡದಲ್ಲಿ ನಡೆಯುವಂತೆ ತಮಿಳುನಲ್ಲಿಯೂ ಕೂಡ ಬಿಗ್ ಬಾಸ್ ನಾ ಮನೆಯಲ್ಲಿ ಹಲವು ಟಾಸ್ಕ್ ಗಳು ನಡೆಯುತ್ತವೆ ನಾಮಿನೇಷನ್ ಎಲಿಮಿನೇಷನ್ ಎಲ್ಲವೂ ಇರುತ್ತದೆ.

ಇನ್ನು ಈ ತಮಿಳು ಬಿಗ್ ಬಾಸ್ ಸೀಸನ್ 6 20 ಸ್ಪರ್ಧಿಗಳಲ್ಲಿ ಒಬ್ಬ ಸ್ಪರ್ಧೆ ನಮ್ಮ ಕನ್ನಡತಿ. ಹೌದು ಇದು ಕನ್ನಡಿಗರಿಗೂ ಕೂಡ ಹೆಮ್ಮೆಯ ವಿಷಯ. ನಟಿ ರಚಿತಾ ಮಹಾಲಕ್ಷ್ಮಿ ಈ ಬಾರಿ ತಮಿಳಿನ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ರಚಿತಾ ಮಹಾಲಕ್ಷ್ಮಿ ಅಪಟ ಕನ್ನಡತಿ. ಕನ್ನಡದಲ್ಲಿ ನಟಿಸಿ ಕನ್ನಡಿಗರನ್ನ ರಂಜಿಸಿದ್ದಾರೆ.

ಇನ್ನು ಹೆಚ್ಚಾಗಿ ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿಯೂ ನಟಿಸಿರುವ ರಚಿತಾ ಮಹಾಲಕ್ಷ್ಮಿ ಕೆಲವು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. 1991ರಲ್ಲಿ ಜನಿಸಿದ ರಚಿತಾ ಮಹಾಲಕ್ಷ್ಮಿ ಅವರಿಗೆ ಇದಿಗ 31 ವರ್ಷ ವಯಸ್ಸು. ನೋಡುವುದಕ್ಕೆ ಅತ್ಯಂತ ಸ್ಪೂರದ್ರೂಪಿ ಆಗಿರುವ ರಚಿತಾ ಮಹಾಲಕ್ಷ್ಮಿ ಕನ್ನಡದ ಮೇಘ ಮಂದಾರ, ಸುಪ್ರಭಾತ, ಸವಿಗನಸು, ಮೊದಲಾದ ಸೀರಿಯಲ್ ಮೂಲಕ ಫೇಮಸ್ ಆಗಿ.

ನಂತರ ತೆಲುಗು ಹಾಗೂ ತಮಿಳು ಕಿರುತೆರೆಯಿಂದ ಅವಕಾಶಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಇದೀಗ ತಮಿಳು ತೆಲುಗು ಕನ್ನಡ ಎಲ್ಲಾ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ರಚಿತಾ ಮಹಾಲಕ್ಷ್ಮಿ, ತಮಿಳು ಬಿಗ್ ಬಾಸ್ ದೊಡ್ಮನೆಯನ್ನು ಪ್ರವೇಶಿಸಿದ್ದಾರೆ. ನಟಿ ರಚಿತಾ ಮಹಾಲಕ್ಷ್ಮಿ ತಮ್ಮ ವೈವಾಹಿಕ ಜೀವನದಿಂದ ಬ್ರೇಕ್ ಅಪ್ ಮಾಡಿಕೊಂಡು ಇದೀಗ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ತಮ್ಮ ವೃತ್ತಿ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ರಚಿತಾ ಮಹಾಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿ ಇರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಅಪ್ಲೋಡ್ ಮಾಡಿರುವ ರಚಿತಾ ಮಹಾಲಕ್ಷ್ಮಿ ಅವರಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಕೂಡ ಇದ್ದಾರೆ.

Leave a Reply

Your email address will not be published. Required fields are marked *