ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿನ ಕಥೆ ಕೇಳಿ ಪ್ರೇಕ್ಷಕರು ದುಃಖ ಪಡುವುದಕ್ಕಿಂತಲೂ ಹೆಚ್ಚಾಗಿ ಇಂಥ ನಾಟಕಗಳನ್ನ ಬೇಕಿತ್ತ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಈ ಶೋವನ್ನು ನೋಡುತ್ತಿರುವವರಲ್ಲಿ ಅಸಮಾಧಾನ ವ್ಯಕ್ತಪಡಿಸಿದವರೇ ಜಾಸ್ತಿ. ಯಾಕಂದ್ರೆ ಈ ಬಾರಿ ಸಾಕಷ್ಟು ಸ್ಪರ್ದಿಗಳು ಸೋಶಿಯಲ್ ಮೀಡಿಯಾ ಸ್ಟಾರ್ ಗಳೆ. ಅವರ ಹಿನ್ನೆಲೆ ಇತ್ತೀಚಿಗೆ ಹೊರಬಂದಿದೆ ಇದನ್ನು ನೋಡಿದ ಪ್ರೇಕ್ಷಕರು ಇವರೆಲ್ಲ ಬಿಗ್ ಬಾಸ್ ಮೆಟೀರಿಯಲ್ ಅಲ್ಲ ಅಂತ ಹೇಳಿಕೊಳ್ಳುತ್ತಿದ್ದಾರೆ.
ಸಮಾಜಕ್ಕೆ ಯಾವುದೇ ಮಾರ್ಗದರ್ಶನವನ್ನು ನೀಡಲು ಸಾಧ್ಯವಾಗದಂತಹ ಸ್ಪರ್ಧಿಗಳನ್ನು ಯಾಕೆ ಬಿಗ್ ಬಾಸ್ ಮನೆಯೊಳಗೆ ಕರೆಸಿಕೊಂಡಿದ್ದಾರೆ ಅನ್ನೋದೇ ಹಲವರ ಪ್ರಶ್ನೆ. ಆದರೂ ಬಿಗ್ ಬಾಸ್ ಅಂದ್ರೆ ಅಲ್ಲಿ ಎಂಟರ್ಟೈನ್ಮೆಂಟ್ ಏನು ಕಡಿಮೆ ಇರಲ್ಲ. ಕೆಲವರು ನಕ್ಕು, ನಗಿಸುತ್ತ ಇದ್ರೆ, ಇನ್ನು ಕೆಲವರು ಕಣ್ಣೀರು ಹಾಕುತ್ತಿರುತ್ತಾರೆ. ಇನ್ನು ಕೆಲವರು ಜಗಳ ಮಾಡುವುದರಲ್ಲಿ ದಿನ ಕಳೆಯುತ್ತಾರೆ. ಈಗಾಗಲೇ ಸೋನು ಶ್ರೀನಿವಾಸ್ ಗೌಡ ಹಾಗೂ ಸ್ಪೂರ್ತಿ ಅವರ ನಡುವೆ ಜಟಾಪಟಿ ನಡೆದಿದೆ.
ಇದಕ್ಕೆಲ್ಲ ಕಾರಣ ಆಗಿದ್ದು ರಾಕೇಶ್ ಅಡಿಗ ಅವರ ಒಂದು ಮಾತು ಅನ್ನೋದು ಹೆಚ್ಚಾಗಿ ಕೇಳಿ ಬರುತ್ತಿದೆ ಇದೆಲ್ಲದರ ನಡುವೆ ನಾನು ಯಾರು ಎನ್ನುವ ಟಾಸ್ಕ್ ನಲ್ಲಿ ತಮ್ಮ ತಮ್ಮ ಜೀವನದ ಕಥೆಯನ್ನು ಹೇಳಿಕೊಂಡ ಸ್ಪರ್ಧಿಗಳು ಸಾಕಷ್ಟು ಈ ಸ್ಪರ್ಧಿಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಜೀವನದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ನೊಂದು ಬೆಂದು ಹೋಗಿದ್ದಾರೆ. ಗಂಡನಿಂದ ಕಿರುಕುಳ ಅನುಭವಿಸಿದ ಚೈತ್ರ ಹಳ್ಳಿಕೆರೆ, ಹೆಂಡತಿಯಿಂದ ದೂರಾಗಿ ಆಕೆಯನ್ನ ಮರೆಯಲು ಸಾಧ್ಯವಾಗದ ಸೋಮಣ್ಣ ಮಾಚಿವಾಡ.
ಖಾಸಗಿ ವಿಡಿಯೋ ವೈರಲ್ ಮಾಡಿದ ಬಾಯ್ ಫ್ರೆಂಡ್ ಬಗ್ಗೆ ಹೇಳಿಕೊಂಡ ಸೋನು ಶ್ರೀನಿವಾಸ ಗೌಡ, ತನ್ನ ಬಾಯ್ ಫ್ರೆಂಡ್ ಜೊತೆಗೆ ಇರುವಾಗ ಅಪ್ಪನೇ ಖಾಸಗಿ ವಿಡಿಯೋವನ್ನು ಮಾಡಿ ಇತರರಿಗೆ ತೋರಿಸಿದ ಕಥೆಯನ್ನು ಹೇಳಿದ ಸಾನಿಯಾ ಅಯ್ಯರ್, ಚಿಕ್ಕ ವಯಸ್ಸಿನಲ್ಲಿ ಕಳ್ಳತನವನ್ನು ಮಾಡಿ ತಪ್ಪು ಮಾಡಿದ ರಾಕೇಶ್ ಅಡಿಗ, ಎರಡನೇ ಮದುವೆಯಾಗಿ ಸುದ್ದಿಯನ್ನು ಮುಚ್ಚಿಟ್ಟ ರಾಜೇಶ್, ಹಾಗೂ ಮೂಕನಂತೆ ನಟಿಸಿ ಭಿಕ್ಷೆ ಬೇಡುತ್ತಿದ್ದ ಲೋಕೇಶ್ ಕುಮಾರ್.
ಇವರೆಲ್ಲರದ್ದು ಕಥೆಯನ್ನು ಕೇಳಿ ಉಳಿದ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ. ಬಹುಶಃ ನೋಡಿರುವ ಪ್ರೇಕ್ಷಕರಲ್ಲಿಯೂ ಕೆಲವರಿಗೆ ಬೇಸರವೂ ಆಗಿರಬಹುದು. ಆದರೆ ಇವರೆಲ್ಲರ ಕಥೆ ಕೇಳಿ ಆರ್ಯವರ್ಧನ್ ಗುರೂಜಿ ಮಾತ್ರ ಖಡಕ್ ಆಗಿ ಮಾತನ್ನ ಆಡಿದ್ದಾರೆ. ಅದರಲ್ಲೂ ಲೋಕೇಶ್ ತನ್ನ ಕಥೆಯನ್ನು ಹೇಳಿಕೊಳ್ಳುವಾಗ ಹೀಗೆಲ್ಲಾ ಎಮೋಷನಲ್ ಆಗಿ ಮಾತನಾಡಿ ಸಿಂಪತಿ ಗಿಟ್ಟಿಸಿಕೊಳ್ಳಬಾರದು ಅಂತ ಆರ್ಯವರ್ಧನ್ ಗುರೂಜಿ ಖಡಕ್ ಆಗಿ ಹೇಳಿದ್ದಾರೆ ಪ್ರೇಕ್ಷಕರು ಕೂಡ ಇದಕ್ಕೆ ಹೌದು ಎಂದು ಸಹಮತವನ್ನು ಸೂಚಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಏನೇ ಘಟನೆ ನಡೆದರೂ ಅದು ಹೊರ ಪ್ರಪಂಚದಲ್ಲಿ ಬಹಳ ದೊಡ್ಡ ಚರ್ಚೆಗೆ ಕಾರಣವಾಗುತ್ತೆ. ಇದೀಗ ಸ್ಪರ್ಧಿಗಳ ಜೀವನದಲ್ಲಿ ನಡೆದಿರುವ ಘಟನೆಗಳ ಬಗ್ಗೆ ಹಲವರು ಹಲವಾರು ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅದರ ಬೆನ್ನಲ್ಲೇ ಆರ್ಯವರ್ಧನ್ ಗುರೂಜಿ ತಂದೆ ತಾಯಿಗಳ ಕಷ್ಟಗಳನ್ನು ಹೀಗೆ ಹೇಳಿಕೊಳ್ಳಬಾರದು ಜೀವನದಲ್ಲಿ ಆಗಿದ್ದು ಆಗಿ ಹೋಗಿದೆ ಇನ್ನು ಮುಂದುವರೆಯಬೇಕು. ಎಂದು ಹೇಳಿರುವ ಮಾತು ಪ್ರೇಕ್ಷಕರಿಗೆ ನಿಜಕ್ಕೂ ಇಷ್ಟವಾಗಿದೆ.
ಇನ್ನು ಆರ್ಯವರ್ಧನ್ ಗುರೂಜಿ ಅವರು ತಮ್ಮ ಜೀವನದ ಕೆಲವು ಘಟನೆಯನ್ನು ಹೇಳಿಕೊಂಡಿದ್ದಾರೆ. ಅವರು ಹಳ್ಳಿಯಿಂದ ಬಂದವರಾಗಿದ್ದರು ಯಾವುದೇ ಕಷ್ಟವನ್ನು ನೋಡಿಲ್ಲ. ಸುಮಾರು 5000 ಕೋಟಿಯಷ್ಟು ಆಸ್ತಿಯನ್ನು ಪೂರ್ವಜರು ನನಗಾಗಿ ಮಾಡಿಟ್ಟಿದ್ದಾರೆ ಅಂತ ಆರ್ಯವರ್ಧನ್ ಗುರೂಜಿ ಹೇಳಿಕೊಂಡಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಸಾಲ ಕೊಟ್ಟಿದ್ದೇನೆ ಎನ್ನುವುದಾಗಿಯೂ ಹೇಳಿದ್ದಾರೆ.
ಆದರೆ ಗುರುಜಿಯವರಿಂದ ಸಾಲ ಪಡೆದುಕೊಂಡವರು ಯಾರು ಎನ್ನುವುದರ ಬಗ್ಗೆ ಅವರ ಹೆಸರುಗಳನ್ನ ಬಹಿರಂಗಪಡಿಸಿಲ್ಲ. ಒಟ್ಟಿನಲ್ಲಿ ಬಿಗ್ ಬಾಸ್ ಶೋನಲ್ಲಿ ಆಗಲೇ ಡ್ರಾಮಾ ಶುರುವಾಗಿದೆ. ಇನ್ನು ಎಲಿಮಿನೇಷನ್ ಕೂಡ ನಡೆದಿದ್ದು ಈ ಬಾರಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವರು ಯಾರು ಎನ್ನುವುದು ವಾರಾಂತ್ಯದ ವರೆಗೆ ಕಾದು ನೋಡಬೇಕು.