PhotoGrid Site 1667809713648

ಬಿಗ್ ಬಾಸ್ ಇತಿಹಾಸದಲ್ಲೇ ಯಾರೂ ಪಡೆಯದ ಸಂಭಾವನೆ ಹೊತ್ತುಕೊಂಡು ಮನೆಗೆ ಹೋದ ಸಾನ್ಯಾ ಐಯ್ಯರ್! ಪಡೆದ ಹಣ ಅದೆಷ್ಟು ಗೊತ್ತಾ? ಮೈ ಬೆವರುತ್ತೆ ನೋಡಿ!!

ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಸುಮಾರು 84 ದಿನಗಳ ಸುದೀರ್ಘ ಜರ್ನಿಯನ್ನ ಮುಗಿಸಿ ಸಾನಿಯಾ ಅಯ್ಯರ್ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಗೊಂಬೆಯಂತೆಯೇ ಮುದ್ಡಾಗಿ ಇರುವ ಸಾನಿಯಾ ಒಟಿಟಿ ವರ್ಷನ್ ನಿಂದ ಬಿಗ್ ಬಾಸ್ ಸೀಸನ್ 9 ಕ್ಕೆ ಬಂದವರು. ಜನರಿಗೆ ತುಂಬಾ ಹತ್ತಿರವಾಗಿದ್ದ ಸಾನಿಯಾ ಇದೀಗ ಬಿಗ್ ಬಾಸ್ ಮನೆಯ ಜರ್ನಿ ಅಂತ್ಯ ಗೊಳಿಸಿದ್ದಾರೆ.

ಪುಟ್ಟಗೌರಿ ಮದುವೆಯಲ್ಲಿ ಪುಟ್ಟ ಗೌರಿಯಾಗಿ ಸಾನಿಯಾ ಅಯ್ಯರ್ ನಟಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಆಕೆಯ ಅತ್ಯುತ್ತಮ ಪ್ರತಿಭೆ ನೋಡಿ ಕನ್ನಡಿಗರು ಹೌಹಾರಿದ್ದರು. 2012ರಲ್ಲಿ ಪುಟ್ಟಗೌರಿ ಮದುವೆ ಧಾರವಾಹಿ ಆರಂಭವಾಗಿತ್ತು. ಅದರಲ್ಲಿ ಸಾನಿಯಾ ಅವರದ್ದೇ ಮುಖ್ಯ ರೋಲ್.

ಕೆಲವು ವರ್ಷಗಳ ವರೆಗೆ ಈ ಧಾರಾವಾಹಿಯಲ್ಲಿ ನಟಿಸಿ ನಂತರ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಿದ್ರು ಸಾನ್ಯಾ. ಹಾಗಾಗಿ ಹೆಚ್ಚಾಗಿ ಯಾವ ಧಾರವಾಹಿಯಲ್ಲಿಯೂ ಮತ್ತೆ ಕಾಣಿಸಿಕೊಂಡಿರಲಿಲ್ಲ. ಖ್ಯಾತ ಕಿರುತರೆ ನಟಿ ದೀಪ ಅಯ್ಯರ್ ಅವರ ಮಗಳು ಸಾನಿಯಾ ಅಯ್ಯರ್. ಇವರು 1998 ಸೆಪ್ಟೆಂಬರ್ 21ರಂದು ಬೆಂಗಳೂರಿನಲ್ಲಿ ಹುಟ್ಟಿದರು, ಮೌಂಟ್ ಕಾರ್ಮೆಲ್ ಸ್ಕೂಲ್ ನಲ್ಲಿ ಕಲಿತ ಸಾನಿಯಾ ಅಯ್ಯರ್ ನಂತರ ದಯಾನಂದ ಸಾಗರ್ ಯುನಿವರ್ಸಿಟಿಯಲ್ಲಿ ಮೀಡಿಯಾ ಸ್ಟಡಿ ಮಾಡಿದ್ದಾರೆ.

ಕಾಲೇಜು ವಿದ್ಯಾಭ್ಯಾಸದ ನಂತರ ಮತ್ತೆ ಆಕ್ಟಿಂಗ್ ಕಡೆಗೆ ಸಾನಿಯಾ ಮುಖ ಮಾಡುತ್ತಾರೆ. ಸಕ್ಕತ್ ಹಾಟ್ ಅಂಡ್ ಬೋಲ್ಡ್ ಆಗಿರುವ ಸಾನಿಯಾ ಅಯ್ಯರ್ 2015ರಲ್ಲಿ ಡ್ಯಾನ್ಸಿಂಗ್ ಶೋ ಒಂದರಲ್ಲಿಯೂ ಕೂಡ ಭಾಗವಹಿಸಿದ್ರು. ನೋಡೋದಕ್ಕೆ ಅತ್ಯಂತ ಮುದ್ದಾಗಿರುವ, ಗೊಂಬೆಯಂತಿರುವ ಸಾನಿಯಾ ಅಯ್ಯರ್ ಮತ್ತೆ ಕಾಣಿಸಿಕೊಂಡಿದ್ದು ಬಿಗ್ ಬಾಸ್ ಸೀಸನ್ ನಲ್ಲಿ.

ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗುತ್ತಿದ್ದ ಓಟಿಟಿ ವರ್ಷನ್ ನಲ್ಲಿ ಸಾನಿಯಾ ಸ್ಪರ್ಧಿಯಾಗಿದ್ರು. ಓಟಿಟಿ ವರ್ಷನ್ ನಲ್ಲಿ ಟಾಪ್ 4ರಲ್ಲಿ ಒಬ್ಬರಾಗಿ ಕಾಣಿಸಿಕೊಂಡು, ಅಲ್ಲಿಂದಲೇ ಬಿಗ್ ಬಾಸ್ ಸೀಸನ್ 9ಕ್ಕೂ ಕೂಡ ಪ್ರವೇಶ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಸಾನಿಯಾ ಹಾಗೂ ರೂಪೇಶ್ ಶೆಟ್ಟಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದವರು. ಇದೀಗ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಒಂಟಿ ಪಯಣ ಮುಂದುವರೆಸಬೇಕಾಗಿದೆ.

ಬಿಗ್ ಬಾಸ್ ನಿಂದ ಹೊರಬಂದ ಸಾನಿಯಾಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಇನ್ನು ಸಾನಿಯಾ ಅವರಿಗೆ 24ರ ಹರೆಯ ಆಗಲೇ ಜೀವನದಲ್ಲಿ ರಿಲೇಶನ್ ಶಿಪ್ ವಿಷಯದಲ್ಲಿ ಎಡವಿದ್ದಾರೆ. ಹಾಗಾಗಿ ರೂಪೇಶ್ ಜೊತೆಗೆ ಅವರ ಸ್ನೇಹವನ್ನು ಜನ ಪ್ರೀತಿ ಎಂದೇ ಭಾವಿಸಿದ್ದಾರೆ. ಇದಕ್ಕೆ ನಿಜವಾದ ಉತ್ತರ ಮಾತ್ರ ರೂಪೇಶ್ ಹಾಗೂ ಸಾನಿಯಾ ನೀಡಬೇಕು.

ಬಿಗ್ ಬಾಸ್ ಮನೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಎಲ್ಲರನ್ನು ರಂಜಿಸಿದ್ದರು ಸಾನಿಯಾ. ಟಾಸ್ಕ್, ಮನೋರಂಜನೆ ಯಾವುದಾದ್ರೂ ಸರಿ ಸಾನಿಯಾ ಮುಂದೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಜವಾಬ್ದಾರಿಯನ್ನು ಕೂಡ ನಿಭಾಯಿಸಿದ ಸಾನಿಯಾ ಇದೀಗ ಬಿಗ್ ಬಾಸ್ ಮನೆಗೆ ಬೈ ಬೈ ಹೇಳಿದ್ದಾರೆ. ಇವರಿಗೆ ಬಿಗ್ ಬಾಸ್ ತಂದ ಸುಮಾರು 7 ಲಕ್ಷ ಸಂಭಾವನೆ ನೀಡಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *