PhotoGrid Site 1661236825427

ಬಾಳಿ ಬದುಕುವ ವಯಸ್ಸಿನಲ್ಲಿ ಪರಲೋಕ ಸೇರಿದ ಯುವ ನಟ ಸತೀಶ್ ವಜ್ರ ದಂಪತಿ ಕುಟುಂಬ ಅದೆಷ್ಟು ಸುಂದರವಾಗಿತ್ತು ಗೊತ್ತಾ? ವಿಡಿಯೋ ನೋಡಿ ಇಲ್ಲಿದೆ!!

ಸುದ್ದಿ

ಎನಿಸಿಕೊಂಡಿದ್ದ ಸತೀಶ ವಜ್ರ ಕೌಟುಂಬಿಕ ಕಲಹದ ಕಾರಣಕ್ಕೆ ಹ-ತ್ಯೆ-ಗೆ ಒಳಗಾಗಿದ್ದಾರೆ ಇದು ನಮಗೆಲ್ಲರಿಗೂ ಗೊತ್ತು. ಲಗೋರಿ ಎನ್ನುವ ಚಿತ್ರದಲ್ಲಿ ಅಭಿನಯಿಸಿ ಪ್ರಶಂಸೆಯನ್ನು ಗಳಿಸಿಕೊಂಡಿದ್ದ ನಟ್ಟ ಸತೀಶ್ ವಜ್ರ ಇನ್ನೇನು ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಳ್ಳಬೇಕು ಹೆಚ್ಚಿನ ಸಿನಿಮಾಗಳನ್ನ ಮಾಡಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ಅವರ ಜೀವನವೇ ಕೊ’ನೆಯಾಗಿ ಬಿಟ್ಟಿತು.

ಹಳ್ಳಿಯಿಂದ ಬೆಂಗಳೂರಿಗೆ ಬಂದು ಸಣ್ಣ ಕಟಿಂಗ್ ಶಾಪ್ ಹಾಕಿಕೊಂಡು ಜೊತೆಗೆ ಸಿನಿಮಾದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು ಸತೀಶ್ ವಜ್ರ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ ಗಳನ್ನ ಮಾಡುತ್ತಾ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಕೇವಲ 32 ವರ್ಷ ವಯಸ್ಸಿಗೆ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

ಕೆಲವು ದು-ಷ್ಕರ್ಮಿಗಳು ಅವರ ಮನೆಗೆ ಬಂದು ಅವರನ್ನು ಕೊ’ಲೆ ಮಾಡಿ ಪ’ರಾರಿಯಾಗಿದ್ದರು ಆದರೆ ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡಿದ ರಾಜರಾಜೇಶ್ವರಿ ನಗರ ಪೊಲೀಸರು ಸತೀಶ್ ಅವರ ಕೊ-ಲೆ-ಯ ಹಿಂದಿನ ಕಾರಣವನ್ನು ಹಾಗೂ ವ್ಯಕ್ತಿಯನ್ನು ಕಂಡು ಹಿಡಿದಿದ್ದರು. ಹೌದು ಸತೀಶ್ ಕೊ-ಲೆ-ಗೆ ಕಾರಣವಾದವರು ಬೇರೆ ಯಾರು ಅಲ್ಲ ಅವರ ಭಾಮೈದ ಸುದರ್ಶನ್.

ಸತೀಶ್ ಹಾಗೂ ಅವರ ಪತ್ನಿ ಸುಧಾಮಣಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು ಇವರಿಗೆ ಒಬ್ಬ ಗಂಡು ಮಗ ಕೂಡ ಇದ್ದಾನೆ. ಸತೀಶ ಪತ್ನಿ ಸುಧಾಮಣಿ ಒಂದು ವರ್ಷದ ಹಿಂದೆಯೇ ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾರೆ ತನ್ನ ಸಹೋದರಿಯ ಸಾವಿಗೆ ಸತೀಶ್ ಕಾರಣ ಎನ್ನುವ ಕಾರಣಕ್ಕೆ ಸಿಟ್ಟಾಗಿದ್ದ ಸುದರ್ಶನ್ ಸರಿಯಾದ ಸಮಯವನ್ನು ನೋಡಿ ಸತೀಶ್ ಅವರನ್ನು ಹ-ತ್ಯೆ ಮಾಡಿದ್ದ.

ಇನ್ನು ಸತೀಶ್ ಹಾಗೂ ಸುಧಾಮಣಿ ಅವರ ಮಗ ಸುಧಾಮಣಿ ಅವರ ತಂದೆ ತಾಯಿಯ ಬಳಿಯೇ ಬೆಳೆಯುತ್ತಿದ್ದ ಹಾಗಾಗಿ ನನ್ನ ಮಗನ ನನಗೆ ಕೊಟ್ಟುಬಿಡಬೇಕು ಅಂತ ಬಹಳ ಬಾರಿ ಸುಧಾಮಣಿ ಪೋಷಕರಿಗೆ ತೊಂದರೆ ಕೊಟ್ಟಿದ್ದ ಸತೀಶ್ ಎನ್ನಲಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಸಿಟ್ಟಿನಿಂದಲೇ ಸುದರ್ಶನ ತನ್ನ ಸ್ನೇಹಿತ ನಾಗೇಂದ್ರ ಜೊತೆ ಸೇರಿ ಸತೀಶ ಅವರನ್ನು ಹ’ತ್ಯೆ ಮಾಡಿದ್ದಾನೆ.

ಇನ್ನು ಯುವ ನಟ ಸತೀಶ್ ಪ್ರಜ್ವಲ್ ದೇವರಾಜ್ ಅವರ ಬಹಳ ದೊಡ್ಡ ಅಭಿಮಾನಿ ತನ್ನ ಮಗನ ನಾಮಕರಣಕ್ಕೆ ಪ್ರಜ್ವಲ್ ದೇವರಾಜ್ ಅವರು ಆಗಮಿಸಿದ್ದನ್ನ ನೋಡಿ ಸತೀಶ್ ಇನ್ನಿಲ್ಲದಷ್ಟು ಸಂತಸಪಟ್ಟಿದ್ದ. ಅಲ್ಲದೆ ಸತೀಶ್ ಅವರ ಮಗನಿಗೆ ವಜ್ರ ಅಂತ ಸ್ವತಃ ನಟ ಪ್ರಜ್ವಲ್ ದೇವರಾಜ್ ಅವರೇ ನಾಮಕರಣ ಮಾಡಿದ್ದರು.

ಇದನ್ನು ಪ್ರಜ್ವಲ್ ದೇವರಾಜ್ ಅವರು ಕೂಡ ಸಂದರ್ಶನ ಒಂದರಲ್ಲಿ ಹೇಳಿದರು ’ಅಭಿಮಾನಿ ಒಬ್ಬನ ಮಗನಿಗೆ ನಾನೇ ಹೆಸರು ಇಟ್ಟಿದ್ದೆ ಇದಕ್ಕಿಂತ ಭಾಗ್ಯ ಇನ್ನೊಂದು ಏನಿದೆ’ ಅಂತ ಹೇಳಿಕೊಂಡಿದ್ದರು. ಇದೀಗ ಸತೀಶ್ ವಜ್ರ ನಮ್ಮ ಜೊತೆಗಿಲ್ಲ ಆದರೆ ಅವರು ತಮ್ಮ ಕುಟುಂಬದ ಜೊತೆಗೆ ಹಾಗೂ ಮಗನ ಜೊತೆಗೆ ಸಮಯ ಕಳೆದ ಕೆಲವು ಫೋಟೋಗಳನ್ನು ಹೊಂದಿರುವ ವಿಡಿಯೋ ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *