PhotoGrid Site 1663142278458

ಬಹಳ ದಿನಗಳ ನಂತರ ಮತ್ತೆ ಫೋಟೋಶೂಟ್ ಮಾಡಿಸಿದ ನ್ಯಾಚುರಲ್ ಬ್ಯೂಟಿ ನಟಿ ಮೇಘನಾ ರಾಜ್! ಸೊಗಸಾದ ಸುಂದರ ಫೋಟೋಗಳು ಇಲ್ಲಿವೆ ನೋಡಿ!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ ಮೇಘನಾ ರಾಜ್ ಬಹಳ ಚಿರಪರಿಚಿತರು. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿ, ಕನ್ನಡ ಮನೆಮಗಳು ಎನಿಸಿದ್ದಾರೆ. ಮೇಘನಾ ರಾಜ್ ಅವರು ರಾಜ್ಯದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರದ್ದು ನಟನಾ ಹಿನ್ನೆಲೆ ಇರುವ ಕುಟುಂಬ ಮೇಘನಾ ಅವರ ತಾಯಿ ಪ್ರಮೀಳಾ ಜೋಷಾಯಿ ಹಾಗೂ ತಂದೆ ಸುಂದರ್ ರಾಜ್ ಇಬ್ಬರೂ ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಈಗಲೂ ಕೂದ ನಟನಾ ವೃತ್ತಿಯನ್ನು ಮುಂದುವರೆಸಿರುವ ಪ್ರಮೀಳಾ ಹಾಗೂ ಸುಂದರ್ ರಾಜ್ ಅವರ ಮಗಳೇ ಮೇಘನಾ ರಾಜ್. ಮೇಘನಾ ರಾಜ್ ಅವರನ್ನು ಕನ್ನಡ ಜನತೆ ಇಷ್ಟಪಡುವುದಕ್ಕೆ ಮತ್ತೊಂದು ಪ್ರಮುಖ ಕಾರಣ ಮೇಘನಾ ಅವರು ಚಿರಂಜಿವಿ ಸರ್ಜಾ ಅವರ ಪತ್ನಿ. ಚಂದನವನ ಕನ್ನಡದ ಬಹುಮುಖ ಪ್ರತಿಭೆಯಾಗಿದ್ದ ಚಿರು ಸರ್ಜಾ ಅವರನ್ನು ಕಳೆದುಕೊಂಡು ನಿಜಕ್ಕೂ ಅನಾಥವಾಗಿದೆ.

ಆದರೆ ಮೇಘನಾ ಅವರ ಹೊಟ್ಟೆಯಲ್ಲಿ ಮತ್ತೆ ಚಿರು ಹುಟ್ಟಿ ಬಂದಿದ್ದಾರೆ ಎನ್ನುವ ಹಾಗೆ ರಾಯನ್ ರಾಜ್ ಸರ್ಜಾ ಮೇಘನಾ ಅವರ ಮಡಿಲು ತುಂಬಿದ್ದಾನೆ. ರಾಯನ್ ಗೆ ಇದೀಗ ಎರಡು ವರ್ಷ. ಮಗನ ಜೊತೆಗಿನ ಫೋಟೋ ವಿಡಿಯೊಗಳನ್ನು ಸಾಕಷ್ಟು ಶೇರ್ ಮಾಡುತ್ತಿದ್ದ ಮೇಘನಾ ಆ ಮೂಲಕ ಚಿರು ನೆನಪನ್ನು ಜನರ ಮನಸ್ಸಿನಲ್ಲಿ ಶಾಶ್ವತವಾಗಿರಿಸಿದ್ದಾರೆ. ನಟಿ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು.

ಮದುವೆಗೂ ಮೊದಲು ಮಲಯಾಲಂ ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿದ್ದರು ಮೇಘನಾ! 1990ರಲ್ಲಿ ಜನಿಸಿದ ಮೇಘನಾ ರಾಜ್ ಸಿನಿಮಾ ರಂಗ ಪ್ರವೇಶಿಸಿದ್ದು 2009ರಲ್ಲಿ. ನಂತರ ಹಲವಾರು ಅವಕಾಶಗಳು ಅವರನ್ನು ಅರಸಿ ಬಂದವು. 2010ರಲ್ಲಿ ಕನ್ನಡದ ಪುಂಡ ಸಿನಿಮಾದಲ್ಲಿಅಭಿನಯಿಸಿ, ಆ ಮೂಲಕ ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರು.

2018ರಲ್ಲಿ ಚಿರಂಜೀವಿ ಸರ್ಜಾ ಅವರನ್ನು ಮದುವೆಯಾದ ಮೇಘನಾ ರಾಜ್ ಮದುವೆಯ ಬಳಿಕ ಸಿನಿಮಾ ರಂಗದಿಂದ ಸ್ವಲ್ಪ ದೂರವೇ ಉಳಿದರು. ಸಂತೋಷವಾಗಿದ್ದ ಮೇಘನಾ ಕುಟುಂಬ ಬಹಳ ಬೇಗ ನೋವನ್ನು ಕಾಣುವಂತಾಯಿತು. ಚಿರು ಹೋದ ಮೇಲೆ ಮೇಘನಾ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಶೇರ್ ಮಾಡುವುದನ್ನು ಬಿಟ್ಟರೆ, ಸಿನಿಮಾ ಅಭಿನಯದಿಂದ ದೂರವೇ ಉಳಿದರು.

ಆದರೆ ಇತ್ತೀಚಿಗೆ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂದ ಮೇಘನಾ, ಡ್ಯಾನ್ಸ್ ಶೋ ಒಂದರ ತೀರ್ಪುಗಾರರಾಗಿ ಮತ್ತೆ ವೃತ್ತಿ ಜೀವನವನ್ನು ಆರಂಭಿಸಿದರು. ಇದೀಗ ಜಾಹೀರಾತು ಹಾಗೂ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಹೌದು, ನಟಿ ಮೇಘನಾ ರಾಜ್ ತಮ್ಮದೆ ಆದ ಪ್ರೊಡಕ್ಷನ್ ಹೌಸ್ ಮೂಲಕ ಸಿನಿಮಾ ನಿರ್ಮಾಣದ ಕಡೆಗೂ ಗಮನಹರಿಸಿದ್ದಾರೆ! ಅವರ ನಿರ್ಮಾಣದ ಸಿನಿಮಾದಲ್ಲಿ ಮೇಘನಾ ಅವರೇ ನಾಯಕಿಯಾಗಿ ಅಭಿನಯಿಸುತ್ತಾರೆ ಎನ್ನುವ ಮಾಹಿತಿಯೂ ಇದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಮೇಘನಾ ರಾಜ್ ತನ್ನ ಹಾಗೂ ಚಿರು ಅಭಿಮಾನಿಗಳ ಪ್ರೀತಿ ಅಭಿಮಾನವನ್ನು ಗಳಿಸಿಕೊಂಡಿದ್ದಾರೆ. ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ಮೇಘನಾ ಸಾಕಷ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸುತ್ತಾರೆ.

PhotoGrid Site 1663141113481

ಇತ್ತೀಚೆಗೆ ಓಣಂ ಸಮಯದಲ್ಲಿ ಗೋಲ್ಡನ್ ಬಣ್ಣದ ಸೀರೆಉಟ್ಟು, ಹಸಿರು ಬಣ್ಣದ ರವಿಕೆ ತೊಟ್ಟು ಬಹಳ ಅದ್ಭುತವಾಗಿ ಕಂಗೊಳಿಸಿದ್ದು ಮಾತ್ರವಲ್ಲದೇ ಅವರ ಫೋಟೋ ನೋಡಿ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಮೇಘನಾ ರಾಜ್ ಅವರ ಫೋಟೊಗಳನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವೂ ವೀಕ್ಷಿಸಬಹುದು.

Leave a Reply

Your email address will not be published. Required fields are marked *