PhotoGrid Site 1667632853064

ಬನಾರಸ್ ಚಿತ್ರ ಸೂಪರ್ ಹಿಟ್, ಎಲ್ಲೆಲ್ಲೂ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್! ಜಮೀರ್ ಪುತ್ರನ ಕೈ ಹಿಡಿದ ಕನ್ನಡ ಪ್ರೇಕ್ಷಕರು, ಒಂದೇ ದಿನಕ್ಕೆ ಎಷ್ಟು ಕೋಟಿ ಬಾಚಿದೆ ನೋಡಿ!!

ಸುದ್ದಿ

ಕನ್ನಡದಲ್ಲಿ ಅಂತೂ ಇಂತೂ ಒಂದು ಹೊಸ ಮುಖ ಇದೀಗ ಹಿಟ್ ಸಿನಿಮಾವನ್ನು ನೀಡಿದೆ. ಹೌದು ಬನಾರಸ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಝೈಧ್ ಖಾನ್ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾವೇ ಹಿಟ್ ಆದ ಖುಷಿಯಲ್ಲಿ ಇದ್ದಾರೆ. ಮೊದಲ ಸಿನಿಮಾ ಮೂಲಕವೇ ಗ್ರಾಂಡ್ ಎಂಟ್ರಿ ಕೊಟ್ಟವರು ಇವರು. ಪಂಚ ಭಾಷೆಗಳಲ್ಲಿ ಬನಾರಸ್ ಸಿನಿಮಾ ತೆರೆಕಂಡಿದೆ. ಸುಮಾರು ಸಾವಿರಕ್ಕೂ ಹೆಚ್ಚು ಟಾಕೀಸ್ ಗಳಲ್ಲಿ ಬಿಡುಗಡೆಯಾಗಿದೆ.

ಮಲ್ಟಿ ಥಿಯೇಟರ್ ಗಳಲ್ಲಿ ಬನಾರಸ್ ಸಿನಿಮಾ ನೋಡೋದಕ್ಕೆ ಸಿಗುತ್ತೆ ಅದರಲ್ಲೂ ಬಾಲಿವುಡ್ ನಲ್ಲಿ ಭರ್ಜರಿಯಾಗಿ ಸಿನಿಮಾ ಓಡುತ್ತಿದೆ. ಎಂಎಲ್ಎ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈಧ್ ಖಾನ್ ನಟನೆಯ ಬನಾರಸ್ ಸಿನಿಮಾ ಇದೀಗ ಯಶಸ್ಸಿನ ಮುಂದುವರಿಯುತ್ತಿದೆ. ಝೈಧ್ ಖಾನ್ ಹಾಗೂ ಸೋನಾಲ್ ಅಭಿನಯಿಸಿರುವ ಮೊದಲ ಚಿತ್ರ ಇದು.

ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹೀಗೆ ಐದು ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಿದೆ. ಬಾಲಿವುಡ್ ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ 3ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಇನ್ನು ರಾಜ್ಯದಲ್ಲಿ 200 ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೇ ಅದೇ ರೀತಿ ಬನಾರಸ್ ಸಿನಿಮಾ ತಮಿಳು ಹಾಗೂ ತೆಲುಗಿನಲ್ಲಿ ನೂರ 150ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ.

ಬನಾರಸ್ ಸಿನಿಮಾದ ಬಿಡುಗಡೆಗೆ ಈ ಹಿಂದೆ ಸಾಕಷ್ಟು ಉತ್ತರಗಳು ಕೇಳಿ ಬಂದಿದ್ದವು ಆದರೆ ಇದೆಲ್ಲವನ್ನು ಹಿಂದಿಕ್ಕಿ ಇದೀಗ ಎಲ್ಲಾ ಮಲ್ಟಿ ಸ್ಕ್ರೀನ್ ಗಳಲ್ಲಿಯೂ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ ಝೈದ್ ಖಾನ್ ಹಾಗೂ ಸೋನಾಲ್ ಜೋಡಿಯನ್ನ ಜನರು ಮೆಚ್ಚಿಕೊಂಡಿದ್ದಾರೆ. ಇದರಲ್ಲಿರುವ ಹಾಡು, ಡೈಲಾಗ್ ಎಲ್ಲವನ್ನು ಕೂಡ ಪ್ರೇಕ್ಷಕರು ಹಾಡಿ ಹೊಗಳಿದ್ದಾರೆ ಕನ್ನಡಕ್ಕೆ ಒಬ್ಬ ಯಂಗ್ ಹೀರೋ ಸಿಕ್ಕಿರುವುದಕ್ಕೆ ಜನ ಬಹಳ ಖುಷಿಪಟ್ಟಿದ್ದಾರೆ.

ಲವರ್ ಬಾಯ್ ಆಗಿ ಝೈಧ್ ಖಾನ್ ಮಲ್ಟಿ ಲ್ಯಾಂಗ್ವೇಜ್ ಗಳಲ್ಲಿ ಮಿಂಚಿದ್ದಾರೆ ಬನಾರಸ್ ಸಿನಿಮಾದ ಮೇಕಿಂಗ್ ಅದಕ್ಕಾಗಿ ಬಳಸಿರುವ ಅದ್ದೂರಿ ಸೆಟ್ ಎಲ್ಲವೂ ಅದ್ಭುತವಾಗಿದೆ ಸಾಂಗ್ ನಿರ್ಮಾಣ ಎಲ್ಲವೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಹಳ ಸಮಯದ ನಂತರ ಕನ್ನಡಕ್ಕೆ ಒಬ್ಬ ಚಾಕ್ಲೇಟ್ ಹೀರೋ ಸಿಕ್ಕಂತಾಗಿದೆ.

ಬನಾರಸ್ ಸಿನಿಮಾ ನಿರ್ಮಾಣಕ್ಕೆ ಸುಮಾರು 50 ಕೋಟಿ ಬಂಡವಾಳ ಹಾಕಲಾಗಿತ್ತು. ಇದೀಗ ಬನಾರಸ್ ಸಿನಿಮಾ ಓಡುತ್ತಿರುವ ರೀತಿಯನ್ನು ನೋಡಿದರೆ ದುಪ್ಪಟ್ಟು ಹಣ ಗಳಿಕೆ ಮಾಡುವ ಸಾಧ್ಯತೆ ಎದ್ದು ಕಾಣಿಸುತ್ತಿದೆ. ಇನ್ನು ತಮ್ಮ ಮೊದಲ ಸಿನಿಮಾವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿ ಬಹಳ ಖುಷಿಪಟ್ಟಿದ್ದಾರೆ.

ಝೈಧ್ ಖಾನ್ “ನಾನು ಇದುವರಿಗೆ ಯಾವ ಥಿಯೇಟರ್ ಗೂ ಹೋಗಿ ಈ ರೀತಿ ಸಿನಿಮಾ ನೋಡಿಲ್ಲ ಇದು ನನಗೆ ಮೊದಲ ಅನುಭವ. ಅದರಲ್ಲೂ ನನ್ನ ಸಿನಿಮಾವನ್ನೇ ನೋಡಿ ಜನರ ಪ್ರತಿಕ್ರಿಯೆ ಕಂಡು ಬಹಳ ಖುಷಿಯಾಗುತ್ತಿದೆ ಎಲ್ಲರ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ” ಎಂದು ಜೈದ್ ಖಾನ್ ಹೇಳಿದ್ದಾರೆ. ಒಟ್ಟಿನಲ್ಲಿ ಬನಾರಸ್ ಸಿನಿಮಾ ಕನ್ನಡಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ.

Leave a Reply

Your email address will not be published. Required fields are marked *