ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಸಂಭ್ರಮ ಅಂದ್ರೆ ಅದು ಮದುವೆ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಮದುವೆಯನ್ನು ಇನ್ನಷ್ಟು ಚೆನ್ನಾಗಿಸಲು, ಇನ್ನಷ್ಟು ಮೆಮೊರೇಬಲ್ ಆಗಿಸಲು ಸಾಕಷ್ಟು ತಯಾರಿ ನಡೆಸುತ್ತಾರೆ. ಹೌದು ಹೆಣ್ಣಿಗೆ ಒಮ್ಮೆ ಮದುವೆಯಾದ ನಂತರ ಮತ್ತೆ ತಂದೆ ತಾಯಿ ಮನೆಯಲ್ಲಿ ಅವರೊಂದಿಗೆ ಇರಲು ಸಾಧ್ಯವಿಲ್ಲ ಆಕೆಯ ಹೊಸ ಜೀವನ ವಿವಾಹ ಎನ್ನುವ ಬಂಧದಿಂದಲೇ ಆರಂಭವಾಗುತ್ತದೆ. ಇದೀಗ ಮದುವೆ ಮೊದಲಿನಷ್ಟು ಸಾಂಪ್ರದಾಯಿಕವಾಗಿ ಇಲ್ಲ.
ಸಾಕಷ್ಟು ಮದುವೆಗಳಲ್ಲಿ ಐಶಾರಾಮಿ ತನವೇ ಈ ಎದ್ದು ಕಾಣುತ್ತೆ. ಇನ್ನು ಮದುವೆಯಾದ ಮೇಲೆ ಫೋಟೋ ವಿಡಿಯೋಗಳನ್ನು ಮಾಡಿಸುವುದು ಈ ಹಿಂದೆ ಕಾಮನ್ ಆಗಿದ್ದು. ಆದರೆ ಇದೀಗ ಜನರ ವಿಚಾರಧಾರೆಗಳು ಬದಲಾಗಿವೆ ಹಾಗೆ ಮದುವೆಯ ಬಗ್ಗೆ ಕಲ್ಪನೆಯು ಬದಲಾಗಿದೆ. ಇದೀಗ ಮದುವೆಗೂ ಮೊದಲು ನವ ವಧು ವರರು ಫ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಹೆಚ್ಚು ಮಹತ್ವ ನೀಡುತ್ತಾರೆ.
ಅದಕ್ಕಾಗಿ ಸಾಕಷ್ಟು ಖರ್ಚು ಮಾಡುವವರು ಇದ್ದಾರೆ. ಬೇರೆ ಬೇರೆ ಕಾನ್ಸೆಪ್ಟ್ ಇಟ್ಟುಕೊಂಡು ಫೋಟೋಶೂಟ್ ಮಾಡಿಸಲಾಗುತ್ತೆ. ಇದಕ್ಕಾಗಿ ಫೋಟೋ ಶೂಟ್ ಮಾಡಿಸುವ ಕಂಪನಿಗಳು ಕೂಡ ಬಹಳ ವಿಶೇಷವಾದ ಜನರಿಗೆ ತಿಳಿಸಿ, ವಿಶೇಷವಾದ ಆಫರ್ ಗಳನ್ನು ಕೂಡ ನೀಡುತ್ತಿದ್ದಾರೆ ಅಂದರೆ ಪ್ರ ವೆಡ್ಡಿಂಗ್ ಫೋಟೋಶೂಟ್ ಗಳಲ್ಲಿ ಪೈಪೋಟಿ ಆರಂಭವಾಗಿದೆ. ಇನ್ನು ತರೆವಾರಿ ವೇಷ ಭೂಷಣ ಧರಿಸಿ ಫೋಟೋಶೂಟ್ ಮಾಡಿಸಲಾಗುತ್ತೆ.
ಮೈಸೂರಿನ ಅರಮನೆ ಆವರಣದಿಂದ ಹಿಡಿದು ಜೋಗ ಜಲಪಾತದ ವರೆಗೆ ವಿಶೇಷ ಥೀಮ್ ರಚಿಸಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕೆಲವೊಂದು ವಿಲಕ್ಷಣ ಫೋಟೋಶೂಟ್ ನೋಡಿದ್ರೆ ಜನರ ಕ್ರೇಜ್ ಯಾವ ಮಟ್ಟಕ್ಕಿದೆ ಅನ್ನೋದು ಅರ್ಥವೇ ಆಗುವುದಿಲ್ಲ. ಯಾಕಂದ್ರೆ ಅದೆಷ್ಟು ಬಾರಿ ಇಂತಹ ಫೋಟೋಗಳನ್ನು ತೆಗೆಸಿಕೊಳ್ಳಲು ಹೋದ ನವ ಜೋಡಿಗಳು.
ಇನ್ನೇನು ಹೊಸ ಮನೆ ತುಳಿದು ಸುಖವಾಗಿ ಸಂಸಾರ ನಡೆಸಬೇಕು ಎನ್ನುವಷ್ಟರಲ್ಲಿ ಅಪಾಯ ತಂದುಕೊಂಡಿದ್ದು ಇದೆ. ತಮ್ಮ ಫೋಟೋಶೂಟ್ ಎಲ್ಲರಿಗಿಂತ ವಿಭಿನ್ನವಾಗಿರಬೇಕು ಎಂದು ಯೋಚಿಸುವ ಕೆಲವು ಜೋಡಿಗಳು ಅಪಾಯದ ಸ್ಥಳದಲ್ಲಿ ಫೋಟೋಗಳನ್ನು ತೆಗೆಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದು ಉಂಟು. ಹಾಗಾಗಿ ಇಂತಹ ಸಾಹಸಕ್ಕೆ ಕೈ ಹಾಕುವವರು ಜಾಗೃತಿಯಿಂದ ಇರುವುದು ಬಹಳ ಮುಖ್ಯ.
ಇನ್ನು ಹಳ್ಳಿಯ ಸೊಗಡಿನಲ್ಲಿ, ಗದ್ದೆಯಲ್ಲಿ ಕೇಸರಿನಲ್ಲಿ ಹೀಗೆ ಎಲ್ಲೆಲ್ಲೋ ಥೀಮ್ ರಚಿಸಿ ಫೋಟೋ ಶೂಟ್ ಮಾಡಿಸುತ್ತಾರೆ ಆದರೆ ಈ ಒಂದು ವಿಲಕ್ಷಣ ಫೋಟೋಗಳನ್ನು ನೋಡಿ. ಬಹುಶಹ ಈ ತರದ ಫೋಟೋಶೂಟ್ ನೀವು ಎಂದೂ ನೋಡಿರಲಿಕ್ಕಿಲ್ಲ. ಈ ಜೋಡಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿದ್ದಾರೋ ಅಥವಾ ನೇರವಾಗಿ ಮಧುಚಂದ್ರಕ್ಕೆ ಹೊರಟುಬಿಟ್ಟಿದ್ದಾರೋ ಗೊತ್ತಿಲ್ಲ.
ಮೈಕೆ ಬೆಡ್ ಶೀಟ್ ಸುತ್ತಿಕೊಂಡು, ರೋಮ್ಯಾಂಟಿಕ್ ಆಗಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಮೈಕೆ ಸುತ್ತಿರುವ ಬಿಳಿಯ ವರ್ಣದ ಬೆಡ್ ಶೀಟ್ ಹಾಗೂ ಹಸಿರಿನ ಮಡಿಲಿನಲ್ಲಿ ತೆಗೆಸಿದ ಈ ಫೋಟೋಗಳು ವಿಶೇಷವಾಗಿರುವುದು ಸತ್ಯ. ಆದರೆ ಈ ಫೋಟೋಗಳನ್ನು ನೋಡಿದ ಜನ ಮಾತ್ರ ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ.
ಯವ ಸಿನಿಮಾದ ಸೀನ್ ಗಳಿಗೂ ಕಡಿಮೆ ಇಲ್ಲ ಈ ನವ ವಧು ವರರ ಫೋಟೋ ಶೂಟ್! ಈ ಫೋಟೋಗಳನ್ನು ನೋಡಿದ್ರೆ ಅದ್ಯಾಕೋ ರವಿಚಂದ್ರನ್ ಅವರ ಹಾಡೂ ನೆನಪಿಗೆ ಬರಬಹುದು. ಈ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ!