ಕನ್ನಡ ಸಿನಿಮಾ ಇಂಡಸ್ಟ್ರಿ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ಇಂದು ಕನ್ನಡದಲ್ಲಿ ಸಾಕಷ್ಟು ವಿಭಿನ್ನವಾದ ಕಥೆಗಳನ್ನು, ಪಾತ್ರಧಾರಿಗಳನ್ನು ಹೊಂದಿರುವ ಸಿನಿಮಾಗಳನ್ನು ನೋಡಬಹುದು. ಕೇವಲ ಬಿಗ್ ಬಜೆಟ್ ಚಿತ್ರಗಳು ಮಾತ್ರವಲ್ಲದೆ ಅತ್ಯುತ್ತಮ ಕಲಾವಿದರನ್ನು ಹೊಂದಿರುವ ಹೊಸ ನಿರ್ದೇಶಕರ ಪ್ರತಿಭೆಯಲ್ಲಿಯೂ ಕೂಡ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಅಂತದ್ದೇ ಒಂದು ಚಿತ್ರ ಎಂ ಆರ್ ಪಿ. ಇನ್ನು ಇಂಥಹ ಸಿನಿಮಾಗಳನ್ನು ಜನರೂ ಕೂಡ ಹೆಚ್ಚಾಗಿ ನೋಡುತ್ತಾರೆ.
ಕಥೆಗೆ ಪ್ರಾಮುಖ್ಯತೆ ನೀಡುವ ಸಿನಿಮಾಗಳು ಇಂದು ಚಿತ್ರಮಂದಿರದಲ್ಲಿ ಗೆಲ್ಲುತ್ತಿವೆ. ಹೌದು, ಎಂ ಆರ್ ಪಿ ಒಂದು ವಿಶೇಷವಾದ ಕಥಾವಸ್ತುವನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಜನರ ಮೆಚ್ಚುಗೆ ಗಳಿಸಿದೆ. ಬಹುಶಃ ಈ ತಿಂಗಳ ಕೊನೆಯಲ್ಲಿ ಎಂ ಆರ್ ಪಿ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ. ಬಹಳ ವಿಭಿನ್ನವಾದ ಕಥೆ ಹೊಂದಿರುವ ಎಂ ಆರ್ ಪಿ ಚಿತ್ರ ಈಗಾಗಲೇ ಹಾಸ್ಯ ಪೂರಕವಾದ ಚಿತ್ರ ಅನ್ನೋದು ಟ್ರೈಲರ್ ನೋಡಿದ್ರೆ ಅರ್ಥವಾಗುತ್ತೆ.
ಆದರೂ ಇದರಲ್ಲಿರುವ ಎಮೋಷನ್ಸ್, ಫೈಟಿಂಗ್, ಹಾಡುಗಳು ಎಲ್ಲವೂ ಕೂಡ ಜನರ ಗಮನ ಸೆಳೆದಿವೆ. ಸದ್ದಿಲ್ಲದೇ ಈ ಸಿನಿಮಾದ ಚಿತ್ರೀಕರಣವೂ ಮುಗಿದಿದೆ. ಇನೇನು ತೆರೆಕಾಣಲಿರುವ ಈ ಚಿತ್ರ ತೂಕದ ದೇಹ ಇರುವ ಜನರ ಬಗ್ಗೆ ಹೊಸದೊಂದು ಅಭಿಪ್ರಾಯ ನೀಡುವುದಂತೂ ಸತ್ಯ. ನಿರ್ದೇಶಕ ಬಾಹುಬಲಿ ಎಂ ಆರ್ ಪಿ ಸಿನಿಮಾ ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಂ.ಡಿ ಶ್ರೀಧರ್, ಎ.ವಿ ಕೃಷ್ಣಕುಮಾರ್, ಮೋಹನ್ ಕುಮಾರ್, ಪ್ರೊಡಕ್ಷನ್ ಮ್ಯಾನೇಜರ್ ರಂಗಸ್ವಾಮಿ ಈ ಸಿನಿಮಾ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಇನ್ನು ದಡೂತಿ ದೇಹದಿಂದಲೇ ಜನರನ್ನ ಆಕರ್ಷಿಸಿ ಅತ್ಯುತ್ತಮ ಹಾಸ್ಯ ನಟ ಎನಿಸಿಕೊಂಡಿರುವ ಹರಿ ಈ ಚಿತ್ರದ ಕಥಾನಾಯಕ. ಜೊತೆಗೆ ಈ ಸಿನಿಮಾಕ್ಕೆ ನವರಸ ನಾಯಕ ಜಗ್ಗೇಶ್ ಅವರ ಧ್ವನಿ ಇದೆ. ಈ ಸಿನಿಮಾವನ್ನು ಬಹಳ ಮುತುವರ್ಜಿಯಿಂದ ನಿರ್ಮಿಸಲಾಗಿದ್ದು, ಚಿತ್ರತಂದದ ಎಫರ್ಟ್ ಟ್ರೈಲರ್ ನಲ್ಲಿಯೇ ಕಾಣಿಸುತ್ತದೆ. ಇನ್ನು ಎಮ್ ಆರ್ ಪಿ ಸಿನಿಮಾ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಗೀತ ನಿರ್ದೇಶಕ ಸಾಧು ಕೋಕಿಲ, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ವಸಿಷ್ಠ ಸೇರಿದಂತೆ ಹಲವು ಸಿನಿಮಾ ಸೆಲೆಬ್ರಿಟಿಗಳು ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಬಾಹುಬಲಿ ಅವರು ಅಪ್ಪುವನ್ನು ನೆನಪಿಸಿಕೊಂಡರು. ಸಿನಿಮಾವನ್ನು ನೋಡಿ ಅಂತ ಜನರನ್ನು ಕೇಳಿಕೊಂಡರು. ಜೊತೆಗೆ ನಾಯಕ ಹರಿ ಅವರು ಬಹಳ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇನೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಅಂತ ಕೇಳಿಕೊಂಡಿದ್ದಾರೆ. ಎಂ ಆರ್ ಪಿ ಸಿನಿಮಾದಲ್ಲಿ ಏನಿದೆ ಗೊತ್ತಾ; ಈ ಸಿನಿಮಾದ ಟ್ರೈಲರ್ ನೋಡಿದ್ರೆ ಕಥೆ ಏನು ಎಂಬುದು ಬಹುತೇಕ ಅರ್ಥವಾಗುತ್ತೆ.
ಒಬ್ಬ ಧಡೂತಿ ದೇಹದ ವ್ಯಕ್ತಿ ಏನೆಲ್ಲ ಕಷ್ಟ ಪಡುತ್ತಾನೆ ಎಂಬುದು ಈ ಸಿನಿಮಾದಲ್ಲಿ ಬಹಳ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಜೊತೆಗೆ ತನ್ನನ್ನು ಧಡೂತಿ ಅಂತ ತಮಾಷೆ ಮಾಡುವವರನ್ನು ಹೇಗೆ ತರಾಟೆಗೆ ತೆಗೆದುಕೊಳ್ಳುತ್ತಾನೆ ಎಂಬುದು ಕೂಡ ಈ ಸಿನಿಮಾದಲ್ಲಿ ಅನಾವರಣವಾಗಿದೆ. ಇವೆಲ್ಲವೂ ದೇಹದ ಅತಿ ಹೆಚ್ಚಿನ ತೂಕ ಹೊಂದಿರುವವರ ಕಥೆ ವ್ಯಥೆ. ಜೊತೆಗೆ ಅಂಥವರಿಗೆ ಮಾದರಿಯೂ ಕೂಡ ಹೌದು. ಇನ್ನೇನು ತೆರೆ ಕಾಣಲಿರುವ ಎಂ ಆರ್ ಪಿ ಸಿನಿಮಾವನ್ನು ನೋಡಿ ನೀವೆಲ್ಲರೂ ಹಾರೈಸಿ, ಹೊಸಬರನ್ನ ಪ್ರೋತ್ಸಾಹಿಸಿ.