ಸಾಮಾನ್ಯವಾಗಿ ಇಂದು ಮನುಷ್ಯ ಎದುರು ಬದುರಾಗಿ ಕುಳಿತು ಮಾತನಾಡುವುದಕ್ಕಿಂತಲೂ ಹೆಚ್ಚಾಗಿ ಮೊಬೈಲ್ ಫೋನ್ ನಲ್ಲಿ ಸೋಶಿಯಲ್ ಮೀಡಿಯಾದ ಮೂಲಕ ಅಥವಾ ಚಾಟ್ ಮಾಡುವುದರ ಮೂಲಕ ಮಾತನಾಡುವುದೇ ಹೆಚ್ಚು. ಅಕ್ಕಪಕ್ಕದಲ್ಲಿ ಕುಳಿತುಕೊಂಡು ಚಾಟ್ ಮಾಡುತ್ತಾ ಮಾತನಾಡುತ್ತಾರೆ ಹೊರತು ಮುಖಕ್ಕೆ ಮುಖ ಕೊಟ್ಟು ಮಾತನಾಡುವುದಿಲ್ಲ. ಇದೆಲ್ಲ ಸೋಶಿಯಲ್ ಮೀಡಿಯಾದ ಮಹಿಮೆ.
ಇಂದು ಕೈಯಲ್ಲಿ ಮೊಬೈಲ್ ಇದ್ರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಜನ ಮುಳುಗಿರುತ್ತಾರೆ ಊಟ ತಿಂಡಿ ನಿದ್ದೆ ಎಲ್ಲಾ ಬಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವರೇ ಹೆಚ್ಚು. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಎಲ್ಲರೂ ಇನ್ಟಾಗ್ರಾಮ್ ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಇಂದು ಕೆಲವು ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದರ ಮೂಲಕ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸುವುದಕ್ಕೂ ಕೂಡ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಂಥವರಲ್ಲಿ ವಿದ್ಯಾ ವಿದು ಕೂಡ ಒಬ್ಬರು.
ಹೌದು ಸಾಮಾಜಿಕ ಜಾಲತಾಣದಲ್ಲಿ ವಿದ್ಯಾ ವಿಧು ಎನ್ನುವ ಯುವತಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಇಂದು ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡಿರುವ ವಿದ್ಯಾ ಅವರಿಗೆ ಧಾರಾವಾಹಿಗಳಲ್ಲಿ ಅಭಿನಯಿಸುವುದಕ್ಕೂ ಕೂಡ ಅವಕಾಶಗಳು ಸಿಗುತ್ತಿವೆ. ಇನ್ನು ಸಿನಿಮಾದಲ್ಲಿ ನಟಿಸಬೇಕು ಎನ್ನುವ ಅಭಿಲಾಷೆ ಹೊಂದಿರುವ ವಿದ್ಯಾ ಅವರು ಸೋಶಿಯಲ್ ಮೀಡಿಯಾದ ಮೂಲಕವೇ ತಮ್ಮ ಮುಂದಿನ ಕರಿಯರ್ ಗೆ ಫ್ಲಾಟ್ ಫಾರ್ಮ್ ರೂಪಿಸಿಕೊಂಡಿದ್ದಾರೆ.
ನೀವು ಇನ್ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿದ್ದರೆ ಬಹುಶಃ ವಿದ್ಯಾ ವಿಧು ಅವರ ಪೋಸ್ಟ್ ಗಳನ್ನು ಕೂಡ ನೋಡಿರಬಹುದು ಸಾಕಷ್ಟು ಹಾಡುಗಳಿಗೆ ಅವರು ರೀಲ್ಸ್ ಮಾಡುತ್ತಾರೆ. ಇವರಿಗೆ ಸುಮಾರು 300ಕ್ಕೂ ಹೆಚ್ಚು ಪೋಸ್ಟ್ ಮಾಡಿದ್ದಾರೆ ವಿದ್ಯಾ. ವಿದ್ಯಾ ವಿದು ದಾವಣಗೆರೆ ಮೂಲದವರು ಈಗಾಗಲೇ ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದವರು.
ದಾವಣಗೆರೆಯ ವಿದ್ಯಾ, ಈ ಹಿಂದೆ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಇದೀಗ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಮಾಡುವುದರ ಮೂಲಕ ಸೂಶಿಯಲ್ ಮಿಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಇತ್ತಿಚಿಗೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳನ್ನೂ ಕೂಡ ಪಡೆದುಕೊಂಡಿದ್ದಾರೆ. ಹೌದು, ಸಿರಿ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಮರ ಮಧುರ ಪ್ರೇಮ ಎನ್ನುವ ಧಾರಾವಾಹಿಯಲ್ಲಿ ವಿದ್ಯಾ ಮಧುರ ಎನ್ನುವ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇತ್ತೀಚಿಗೆ ಎಸಿಎಫ್‌ಎ ಇಂಡಿಯನ್ ಐಕಾನ್ ಗೋಲ್ಡನ್ ಅಚೀವರ್ಸ್ ಅವಾರ್ಡ್ 2022 ನಲ್ಲಿ ’ಬೆಸ್ಟ್ ಆಸ್ಪೈರಿಂಗ್ ಆಕ್ಟ್ರೆಸ್ಸ್ ಆಫ್ ದಿ ಇಯರ್’ ಎನ್ನುವ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ವಿದ್ಯಾ.
ವಿದ್ಯಾ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಇತ್ತೀಚಿಗೆ ಕಾಂತರಾ ಸಿನಿಮಾದ ನಿರ್ದೇಶಕ ರಿಷಭ್ ಶೆಟ್ಟಿ ಅವರ ಜೊತೆಗೆ ಸಿಂಗಾರ ಸಿರಿಯೆ ಹಾಡಿಗೂ ಕೂಡ ನೃತ್ಯ ಮಾಡಿ ಇನ್ಸ್ಟಾ ಪೋಸ್ಟ್ ಮಾಡಿದ್ರು. ಅಭಿಮಾನಿಗಳ ಮೆಚ್ಚುಗೆ ಗಳಿಸಿಕೊಂಡಿದ್ದರು. ವಿದ್ಯಾ ಅವರಿಗೆ ಜೋಶ್ ಆಪ್ ನಲ್ಲಿಯೂ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ.
ಇತ್ತೀಚಿಗೆ ವಿದ್ಯಾ ಅವರು ಬಂಗಾರಿ ಯಾರೇ ನೀ ಬುಲ್ ಬುಲ್ ಎನ್ನುವ ಹಾಡಿನ ಮ್ಯೂಸಿಕ್ ಗೆ ಸ್ಟೆಪ್ಸ್ ಹಾಕಿದ್ದಾರೆ. ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ವಿದ್ಯಾ ಅವರನ್ನ ಬುಲ್ ಬುಲ್ ಅಂತ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಷ್ಟು ಹಾಟ್ ಆಗಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ವಿದ್ಯಾ. ಇವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾಕಷ್ಟು ಲೈಕ್ ಹಾಗೂ ಕಮೆಂಟ್ ಗಳು ಬಂದಿವೆ.
View this post on Instagram