ಮೇಘನಾ ರಾಜ್ ಅವರನ್ನು ಕನ್ನಡಿಗರು ಮನೆಮಗಳು ಎಂದೇ ಸ್ವೀಕರಿಸಿದ್ದಾರೆ ಅವರು ಇತರ ಭಾಷೆಗಳಲ್ಲಿ ಅಭಿನಯಿಸಿದರು ಕೂಡ ಕನ್ನಡದಲ್ಲಿ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿತು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರ ಸರಿದರು ಮೇಘನಾ ರಾಜ್. ಇದೀಗ ಬಹಳ ವರ್ಷಗಳ ನಂತರ ಮತ್ತೆ ಸಿನಿಮಾ ರಂಗದಲ್ಲಿ ಆಕ್ಟಿವ್ ಆಗಿದ್ದಾರೆ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಮೇಘನಾ ರಾಜ್ ಸದಾ ಸಕ್ರಿಯರಾಗಿರುತ್ತಾರೆ.
ಮೇಘನಾ ರಾಜ್ ಪ್ರಮೀಳಾ ಜೋಷಾಯ್ ಹಾಗೂ ಸುಂದರರಾಜ್ ಅವರ ಮಗಳು. ಕಲೆಯ ಫ್ಯಾಮಿಲಿ ಹಿನ್ನಲೆ ಹೊಂದಿದ್ದು ಮೇಘನಾ ರಾಜ್ ಕೂಡ ನಟನೆ ಗೀಳನ ಹಚ್ಚಿಕೊಂಡರು. ಮೇಘನಾ ರಾಜ್ ಮಲಯಾಳಂನಲ್ಲಿ ಮೊದಲು ಬಣ್ಣ ಹಚ್ಚಿದರು ಅದಾದ ನಂತರ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದಿ. ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರು ಪ್ರೀತಿಸಿ ಮದುವೆಯಾದರು.
ಮೇಘನಾ ರಾಜ್ ಪ್ರಗ್ನೆಂಟ್ ಆಗಿರುವಾಗಲೇ ಚಿರಂಜೀವಿ ಸರ್ಜಾ ತೀರಿಕೊಂಡಿದ್ದರು. ಮೇಘನಾ ರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು, ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಇದೀಗ ರಾಯನ್ ಅವರಿಗೆ ಎರಡು ವರ್ಷ ವಯಸ್ಸು. ತನ್ನ ಮಗನ ರೂಪದಲ್ಲಿ ಮತ್ತೆ ಚಿರುವೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಮೇಘನಾ ರಾಜ್ ಯಾವಾಗಲು ಹೇಳಿಕೊಳ್ಳುತ್ತಾರೆ. ಇನ್ನು ಚಿರು ನಿಧನರಾದ ಮೇಲೆ ಮೇಘನಾ ರಾಜು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಆದರೆ ಇದೀಗ ಮಗನಿಗೋಸ್ಕರ ಮತ್ತೆ ಸಿನಿಮಾರಂಗಕ್ಕೆ ಪ್ರವೇಶಿಸಿದ್ದಾರೆ ಇತ್ತೀಚಿಗೆ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿಯೂ ಕೂಡ ಮೇಘನಾ ರಾಜ್ ಕಾರ್ಯನಿರ್ವಹಿಸಿದ್ದರು. ಮೇಘನಾ ರಾಜ್ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಹೊಂದಿದ್ದು ಹೋಂ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣದಲ್ಲಿಯೂ ಕೂಡ ತೊಡಗಿಕೊಂಡಿದ್ದಾರೆ. ಇದೀಗ ಅವರೇ ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿಯು ಇದೆ.
ಇನ್ನು ನಟಿ ಮೇಘನಾ ರಾಜ್ ಸಾಕಷ್ಟು ಜಾಹೀರಾತುಗಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಜ್ಯುವೆಲ್ಸ್ ಆಫ್ ಇಂಡಿಯಾ ದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಜುವೆಲ್ಸ್ ಆಫ್ ಇಂಡಿಯಾದಲ್ಲಿ ಸಾಕಷ್ಟು ವಿಭಿನ್ನವಾದ ಚಿನ್ನ ಬಣ್ಣಗಳ ಕಲೆಕ್ಷನ್ ಇದ್ದು, ಸಾಕಷ್ಟು ಟ್ರೆಡಿಶನಲ್ ಚಿನ್ನಾಭರಣಗಳು ಇಲ್ಲಿ ಫೇಮಸ್. ಇದೀಗ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಅಕ್ಟೋಬರ್ 13ರಿಂದ 16ರ ವರೆಗೆ ಆಭರಣ ಮೇಳ ನಡೆಯಲಿದೆ.
ಈ ಸಮಾರಂಭದ ಉದ್ಘಾಟಕಿಯಾಗಿ ಜುವೆಲ್ಸ್ ಆಫ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಮೇಘನಾ ರಾಜ್ ಆಗಮಿಸಿದ್ದರು. ಇನ್ನು ಈ ಜ್ಯುವೆಲ್ಲರಿಯಾ ಸಾಕಷ್ಟು ಜಾಹೀರಾತುಗಳಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಚಿನ್ನಾಭರಣ ಮೇಳಕ್ಕೆ ಎಲ್ಲರೂ ಬನ್ನಿ ಎಂದು ಜನರನ್ನ ಸೋಶಿಯಲ್ ಮೀಡಿಯಾದ ಮೂಲಕ ಆಮಂತ್ರಿಸಿದ್ದರು.
ಇನ್ನು ಮೇಘನಾ ರಾಜ್ ಇನ್ಸ್ತಗ್ರಂನಲ್ಲಿ ಖಾತೆ ಹೊಂದಿದ್ದು ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ ಇದೀಗ ಜುವೆಲ್ಸ್ ಆಫ್ ಇಂಡಿಯಾ ಎಕ್ಸಿಬಿಷನ್ ಉದ್ಘಾಟನೆಗೆ ಚಿನ್ನದ ಬಣ್ಣದ ಸೀರೆ ಉಟ್ಟು ಮಿಂಚಿದ್ದರು ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೀವು ಕೂಡ ಮೇಘನಾ ರಾಜ್ ಅವರ ಹೊಸ ಹೊಸ ಫೋಟೋ ಶೂಟ್ ಗಳನ್ನ ಅವರ ಅಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು. ಇಡಿಗ ಮೂರು ದಿನಗಳ ಕಾಲ ನಡೆಯುವ ಚಿನ್ನಾಭರಣ ಮೇಳಕ್ಕೆ ಮೇಘನಾ ರಾಜ್ ಅವರ ಸಾಕಷ್ಟು ಅಭಿಮಾನಿಗಳೂ ಕೂಡ ಆಗಮಿಸುತ್ತಿದ್ದಾರೆ.