ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುವ ಕಲಾವಿದರ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ಕುತೂಹಲ ಇರುತ್ತೆ. ಅದರಲ್ಲೂ ನಟಿಯರು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ದೈನಂದಿನ ಚಟುವಟಿಕೆಗಳಿಂದ ಹಿಡಿದು ವಿಶೇಷ ಸಂದರ್ಭಗಳ ಬಗ್ಗೆಯೂ ಶೇರ್ ಮಾಡುತ್ತಾರೆ. ಅದೇ ರೀತಿ ದಿಶಾ ಮದನ್ ಕೂಡ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ದಿಶಾ ಮದನ್ ಗಂಡ ಹಾಗೂ ಮಕ್ಕಳ ಜೊತೆ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.
ಇತ್ತೀಚಿಗೆ ತಮ್ಮ ಎರಡನೆಯ ಮಗಳ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದ ದಿಶಾ ಮದನ್ ಇನ್ಸ್ಟಾಗ್ರಾಮ್ ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ದಿಶಾ ಮದನ್ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದವರು. ದಿಶಾ ಇತ್ತೀಚಿಗೆ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಪತ್ರಕರ್ತೆಯ ಪಾತ್ರ ನಿಭಾಯಿಸಿದ್ದರು. ಕುಲವಧು ಧಾರವಾಹಿಯಲ್ಲಿ ದಿಶಾ ಉತ್ತಮ ಪಾತ್ರ ನಿಭಾಯಿಸಿದ್ದಾರೆ.
2013ರಲ್ಲಿ ಹಿಂದಿ ವಾಹಿನಿಯ ಜಿ ಟಿವಿಯಲ್ಲಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋ ದಲ್ಲಿ ಭಾಗವಹಿಸಿದ್ದರು. ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಕರ್ನಾಟಕದಾದ್ಯಂತ ಗುರುತಿಸಿಕೊಂಡ ನಟಿ ಇವರು. ಕುಲವಧು ಧಾರವಾಹಿಯ ಮೂಲಕ ಕನ್ನಡಿಗರ ಪ್ರೀತಿ ಗಳಿಸಿದರು. ಹಂಬಲ್ ಪೊಲಿಟಿಷಿಯನ್ ನೊಘರಾಜ್ ಚಿತ್ರದಲ್ಲಿ ದಿಶಾ ಮದನ್ ಪತ್ರಕರ್ತೆಯಾಗಿ ಅಭಿನಯಿಸಿದ್ದಾರೆ.
ದಿಶಾ ಮಗನ ಅವರು 2017ರಲ್ಲಿ ಶಶಾಂಕ್ ಎಂಬ ಉದ್ಯಮಿ ಜೊತೆ ಮದುವೆ ಆಗಿದ್ದಾರೆ. ಬಹಳ ಸಣ್ಣ ವಯಸ್ಸಿನಿಂದಲೇ ಉದ್ಯೋಗ ಮಾಡಲು ಆರಂಭಿಸಿದ ಶಶಾಂಕ್ ಇಂದು ಅತ್ಯುತ್ತಮ ಹುದ್ದೆಯಲ್ಲಿ ಇದ್ದಾರೆ. 2018 ರಲ್ಲಿ ದಿಶಾ ಅವರಿಗೆ ಮೊದಲ ಗಂಡು ಮಗು ಆಗಿತ್ತು. ಮಗನಿಗೆ ವಿಹಾನ್ ಎಂದು ಹೆಸರಿಟ್ಟಿದ್ದಾರೆ 2021 ರಲ್ಲಿ ಇನ್ನೊಂದು ಹೆಣ್ಣು ಮಗುವಿಗೆ ದಿಶಾ ಜನ್ಮ ನೀಡಿದ್ದು ಅವಿರಾ ಎಂದು ಹೆಸರಿಟ್ಟಿದ್ದಾರೆ.
ದಿಶಾ ಹಾಗೂ ಆಕೆಯ ಪ್ರತಿ ಶಶಾಂಕ್ ಇಬ್ಬರೂ ಈ ಸ್ಮಾರ್ಟ್ ಜೋಡಿಗೆ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸಿದ್ದಾರೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ವರ್ಷ ಪ್ರಸಾರವಾಗಿದ್ದ ಇಸ್ಮಾರ್ಟ್ ಜೋಡಿ ಎಲ್ಲಿ ದಿಶಾ ಹಾಗೂ ಶಶಾಂಕ ಕೂಡ ಗಮನ ಸೆಳೆದಿದ್ದರು. ಈ ಸಮಯದಲ್ಲಿ ಸಾಕಷ್ಟು ವಿಚಾರಗಳನ್ನು ದಿಶಾ ಹಂಚಿಕೊಂಡಿದ್ದರು. ದಿಶಾ ಹಾಗೂ ಶಶಾಂಕ ಇಬ್ಬರು ಪ್ರೀತಿಸಿ ಮದುವೆಯಾದವರು ಶಶಾಂಕ್ ದೇಶ ಅವರನ್ನ ಮದುವೆ ಆಗುವುದಕ್ಕೂ ಮುಂಚೆ ದಿನವೂ ಒಂದು ಗುಲಾಬಿ ಹೂವನ್ನ ನೀಡುತ್ತಿದ್ದರಂತೆ.
ಶಶಾಂಕ್ ನೀಡಿದ ಎಲ್ಲಾ ಹೂಗಳನ್ನ ದೇಶ ಕಲೆಕ್ಟ್ ಮಾಡಿ ಈಗಲೂ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಇಂದು ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿರುವ ದಿಶಾ ಅವರ ಪತಿ ಶಶಾಂಕ್ ಹೆಂಡತಿ ಹಾಗೂ ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದು ದಿಶಾ ಹೇಳಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಆಗಿರುವ ದಿಶಾ ಅವರು ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ.
ಒಂದಲ್ಲ ಒಂದು ರೀತಿಯ ಪೋಸ್ಟ್ ಹಂಚಿಕೊಳ್ಳುತ್ತಾರೆ ಇತ್ತೀಚಿಗೆ ದಿಶಾ ಮದನ್ ಫ್ಯಾಮಿಲಿ ಫೋಟೋಶೂಟ್ ಮಾಡಿಸಿದ್ದರು. ವೈಟ್ ಅಂಡ್ ಕ್ರೀಮ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ದಿಶಾ ಮದನ್ ಪತಿ ಶಶಾಂಕ್ ಹಾಗೂ ಇಬ್ಬರ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿದ್ದು ಬಹಳ ಹಾ-ಟ್ ಆಗಿ ಕಾಣಿಸುತ್ತಾರೆ. ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ನೀವು ಇಬ್ಬರ ಮಕ್ಕಳ ತಾಯಿ ಎಂದು ಅನಿಸುವುದೇ ಇಲ್ಲ. ಈಗಲೂ ನಿಮ್ಮ ಫೋಟೋ ನೋಡಿದ್ರೆ ನಿಮ್ಮನ್ನೇ ನೋಡಬೇಕು ಅನ್ನಿಸುತ್ತದೆ ಅಂತ ಕಮೆಂಟ್ ಮಾಡಿದ್ದಾರೆ.