ಹಲವು ನಟಿಯರು ಸ್ಟಾರ್ ಪೋಜೀಶನ್ ಗಳಿಸದೆ ಇದ್ರೂ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ಸಹಾಯದಿಂದಾಗಿ ನಟಿಯರು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇನ್ನು ಸಿನಿಮಾ ಕಿಂತಲೂ ಸೋಶಿಯಲ್ ಮೀಡಿಯಾದ ಮೂಲಕವೇ. ಬಹುಭಾಷಾ ನಟಿ ಎನಿಸಿರುವ ಶ್ರದ್ಧಾ ದಾಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳನ್ನು ಅಪ್ಲೋಡ್ ಮಾಡುವುದರ ಮೂಲಕ ಹಲ್ ಚಲ್ ಎಬ್ಬಿಸಿದ್ದಾರೆ.
ನಟಿ ಶ್ರದ್ಧಾ ದಾಸ್ ಮಹಾರಾಷ್ಟ್ರ ಮೂಲದವರು. ಇದೀಗ ಮುಂಬೈನಲ್ಲಿ ವಾಸವಾಗಿರುವ ಶ್ರದ್ಧಾ ಸಾಮಾಜಿಕ ಜಾಲತಾಣದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ನಟನಿಗೂ ಮೊದಲು ಮೋಡಲಿಂಗ್ ನಲ್ಲಿ ಹೆಸರು ಮಾಡಿದ ಶ್ರದ್ಧಾ ದಾಸ್ 2008ರಲ್ಲಿ ತೆಲುಗು ಸಿನಿಮಾದಲ್ಲಿ ನಟಿಸುವುದರ ಮೂಲಕ ನಟನಾ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಶ್ರದ್ದ ದಾಸ್ ತೆಲುಗು, ತಮಿಳು, ಕನ್ನಡ ಬೆಂಗಾಲಿ, ಹಿಂದಿ ಹೀಗೆ ಆರಕ್ಕೂ ಹೆಚ್ಚು ಭಾಷಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ರದ್ಧಾ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟಿವ್ ಆಗಿ ಇರುತ್ತಾರೆ ಸಾಕಷ್ಟು ಫೋಟೋ ಶೂಟ್ ಗಳನ್ನ ಮಾಡಿ ಅಪ್ಲೋಡ್ ಮಾಡುತ್ತಾರೆ. ಅದರಲ್ಲೂ ಸೀರೆಯಲ್ಲಿ ಬಹಳ ಮುದ್ದಾಗಿ ಕಾಣುವ ಶ್ರದ್ಧ ಅವರ ಫೋಟೋಗಳು ಪಡ್ಡೆ ಹೈಕಳ ಹಾರ್ಟ್ ಗೆ ಲಗ್ಗೆ ಇಟ್ಟಿವೆ. ಶ್ರದ್ಧಾ ದಾಸ್ ಕನ್ನಡ, ತೆಲುಗು ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿಯೂ ನಟಿಸಿದ್ದಾರೆ.
ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ’,`ಊಜಾ’,`ಕೋಟಿಗೊಬ್ಬ 3′ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎಸಿಸಿಕೊಂಡಿದ್ದಾರೆ. ಇನ್ನು ಶ್ರದ್ಧಾ ದಾಸ್ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಅವರ ಮಾದಕ ಮೈಮಾಟದಿಂದಲೇ ಹೆಚ್ಚು ಫೇಮಸ್ ಆಗಿದ್ದಾರೆ. ಇನ್ನು ಲಕ್ಷಾಂತರ ಅಭಿಮಾನಿಗಳನ್ನ ಕೂಡ ಕಳಿಸಿಕೊಂಡಿದ್ದಾರೆ ಶ್ರದ್ಧಾ.
ಇತ್ತೀಚಿಗೆ ತೆಲಗುವಿನ ಅರ್ಥಂ ಸಿನಿಮಾದಲ್ಲಿ ನಟಿಸಿದ್ದಾರೆ ಶ್ರದ್ದಾದಾಸ್. ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಆರಂಭಿಸಿರುವ ನಟಿ ಶುದ್ಧ ಅವರು ಈಗಲೇ ಅದಕ್ಕೆ ಸಂಬಂಧ ಪಟ್ಟ ಹಾಗೆ ಫೋಟೋಶೂಟ್ ಗಳನ್ನು ಕೂಡ ಮಾಡಿದ್ದಾರೆ. ಹಳದಿ ಬಣ್ಣದ ಸಿಂಗಲ್ ಡ್ರೆಸ್ ತೊಟ್ಟ ಶ್ರದ್ಧಾ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅರ್ಥಂ ಚಿತ್ರದ ಪೋಸ್ಟರ್ ಅನ್ನು ಕೂಡ ಶ್ರದ್ಧಾ ಅವರು ಹಂಚಿಕೊಂಡಿದ್ದಾರೆ.
ಇದನ್ನ ನೋಡಿದ್ರೆ ಹಾರರ್ ಥ್ರಿಲ್ಲರ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತೆ. ಅರ್ಥಂ ಸಿನಿಮಾದಲ್ಲಿ ಶ್ರದ್ಧಾ ದಾಸ್ ಬಹಳ ವಿಭಿನ್ನ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ, ಶ್ರದ್ಧಾದಾಸ್. ಮಾಡೆಲ್ ಕೂಡ ಆಗಿರುವ ಶ್ರದ್ಧಾ ದಾಸ್ ಎಲ್ಲಾ ರೀತಿಯ ಬಟ್ಟೆಗಳನ್ನು ಕೊಡುತ್ತಾರೆ ಅದರಲ್ಲೂ ಹೆಚ್ಚಾಗಿ ಬಿಕಿನಿ ಹಾಗೂ ಸೀರೆಗಳಲ್ಲಿ ಮೈಮಾಟ ಪ್ರದರ್ಶಿಸುವ ಶ್ರದ್ಧಾ ದಾಸ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ.
ಆಫ್ ಸ್ಕ್ರೀನ್ ಮೂಲಕವೇ ಹೆಚ್ಚು ರಂಜಿಸುತ್ತಿರುವ ಶ್ರದ್ಧಾ ದಾಸ್ ಅವರ ಬೋಲ್ಡ್ ನೇಚರ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಅಂದಹಾಗೆ ಶ್ರದ್ಧಾ ದಾಸ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ ಎರಡು ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಇದ್ದಾರೆ. 35 ವರ್ಷದ ಶ್ರದ್ಧಾ ಫಿಟ್ನೆಸ್ ಪ್ರೀಕ್. ಸದಾ ವರ್ಕೌಟ್, ಡಯಟ್ ನಲ್ಲಿ ತೊಡಗಿರುತ್ತಾರೆ. ಶ್ರದ್ಧಾ ದಾಸ್ ಅವರ ಫೋಟೋಗಳನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೋಡಬಹುದು.