ಸೋಶಿಯಲ್ ಮೀಡಿಯಾಗಳಲ್ಲಿ ತಮಗೆ ಇಷ್ವವಾದ ಫೋಟೋಗಳನ್ನು ಅಪ್ಲೋಡ್ ಮಾಡುವುದು ಸೆಲೆಬ್ರಿಟಿಗಳು ಸದಾ ಮುಂದಿರ್ತಾರೆ. ಹೋಟೆಲ್ , ಜಿಮ್ , ಅಥವಾ ಬೇರೆ ಎಲ್ಲಾದರೂ ಸುತ್ತಾಡಲು ಹೋದರೆಂದರೆ ಸಾಲು ಸಾಲು ಫೋಟೋ ಕ್ಲಿಕ್ಕಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ತಮ್ಮ ನೆಚ್ಚಿನ ಸ್ಟಾರ್ ಗಳ ಫೋಟೊ ವಿಡಿಯೋ ಗಳನ್ನು ನೋಡಿದ ಅಭಿಮಾನಿಗಳಂತೂ ಫುಲ್ ಖುಷಿಯಾಗಿ ಬಿಡುತ್ತಾರೆ.
ಈ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರಲು ಸೋಶಿಯಲ್ ಮೀಡಿಯಾವೇ ಸೇತುವೆ. ಇದೇ ರೀತಿ ಇದೀಗ ಶೋಭಾ ಶೆಟ್ಟಿ ಸೂಪರ್ ಆಗಿರುವ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಸಾಮಾನ್ಯವಾಗಿ ಧಾರವಾಹಿ ನೋಡುವ ವೀಕ್ಷಕರಿಗೆ ಶೋಭಾ ಶೆಟ್ಟಿ ಗೊತ್ತಿರಲೇ ಬೇಕು. ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸನ್ನಿಧಿಯ ತಂಗಿಯಾಗಿ ತನು ಪಾತ್ರ ಮಾಡಿದ್ದರು.
ಆ ಧಾರವಾಹಿಯಿಂದ ಅರ್ಧಕ್ಕೆ ಅವರು ಕಾರಣಾಂತರಗಳಿಂದ ಹೊರಗೆ ಬಂದಿದ್ದರು. ಅದಾಗಿ ಬಿಗ್ ಬ್ರೇಕ್ ನಂತರ ಅವರು ಸ್ಟಾರ್ ಸುವರ್ಣದ ರುಕ್ಕು ಧಾರವಾಹಿಯಲ್ಲಿ ನಟಿಸಿದ್ದರು. ಆದರೆ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಧಾರವಾಹಿ ಅಂದರೆ ಅದು ಅಗ್ನಿಸಾಕ್ಷಿ. ಇನ್ನು ಶೋಭಾ ಶೆಟ್ಟಿಯವರು ಮೊದಲು ಹಾಸ್ಯ ಧಾರಾವಾಹಿಯಾದ ಪಡುವಾರಳ್ಳಿ ಪಡ್ಡೆಗಳು ಅನ್ನುವ ಧಾರವಾಹಿಯಲ್ಲಿ ನಟಿಸಿ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.
ಆ ನಂತರ ಪೌರಾಣಿಕ ಧಾರಾವಾಹಿಯಾದ ಶ್ರೀಗುರು ರಾಘವೇಂದ್ರ ವೈಭವ ದಲ್ಲಿ ಪಂಕಜಳಾಗಿ, ಕಾರ್ತಿಕ ದೀಪ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಅದಾದ ನಂತರ ದೀಪವೂ ನಿನ್ನದೇ ಗಾಳಿಯು ನಿನ್ನದೇ,ಹಾಗೂ ಗೃಹಲಕ್ಷ್ಮಿ ಧಾರವಾಹಿಯಲ್ಲಿ ವಿಲನ್ ಆಗಿ ನಟಿಸಿದ್ದರು, ಅದಾದ ನಂತರವೇ ಶೋಭಾ ಶೆಟ್ಟಿ ನಟಿಸಿದ್ದು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ.ಅದಾದ ನಂತರ ಸ್ವಲ್ಪ ದಿನ ನಾಪತ್ತೆಯಾಗಿದ್ದ ಇವರು ಸ್ಟಾರ್ ಸುವರ್ಣದಲ್ಲಿ ರುಕ್ಕು ಆಗಿ ರೀ ಎಂಟ್ರಿ ಕೊಟ್ಟಿದ್ದರು.
ಅದೇ ರೀತಿ ಡಾನ್ಸಿಂಗ್ ರಿಯಾಲಿಟಿ ಶೋನಲ್ಲೂ ಶೋಭಾ ಶೆಟ್ಟಿ ಕಾಣಿಸಿದ್ದರು. ಮೂಲತಃ ಮಂಗಳೂರಿನವರಾದ ಶೋಭಾ ಶೆಟ್ಟಿ ಯವರು ಇದೀಗ ತೆಲುಗು ರಂಗದಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಭಾಷೆಯ ಅನೇಕ ನಟಿಯರು ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ. ಬೇರೆ ರಾಜ್ಯದಲ್ಲಿ ಕರ್ನಾಟಕದ ಕಲಾವಿದರಿಗೆ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಹಾಗಾಗಿ ಕನ್ನಡದಲ್ಲಿ ಪೋಷಕ ಪಾತ್ರ, ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿದವರು ತೆಲುಗು, ತಮಿಳಿನಲ್ಲಿ ಲೀಡ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಅಲ್ಲಿ ಸಂಭಾವನೆ ಕೂಡ ಚೆನ್ನಾಗಿದೆಯಂತೆ. ಇಂತಹ ಕಾರಣಕ್ಕೆ ಕನ್ನಡದ ಕಲಾವಿದರು ಪರಭಾಷೆಗಳಲ್ಲಿಯೇ ಸಾಕಷ್ಟು ಬ್ಯುಸಿಯಾಗುತ್ತಿದ್ದಾರೆ. ಅದೇ ರೀತಿ ಶೋಭಾ ಶೆಟ್ಟಿ ಕೂಡ ತೆಲುಗು ಧಾರವಾಹಿ ಲೋಕಕ್ಕೆ ಎಂಟ್ರಿ ಕೊಟ್ಟು. ತೆಲುಗಿನಲ್ಲಿಯೇ ಅವರು ಸಕತ್ ಬ್ಯುಸಿಯಾಗಿದ್ದಾರೆ. ತೆಲುಗಿನ ‘ಲಹಿರಿ ಲಹಿರಿ ಲಹಿರಿಲೋ’ ಧಾರಾವಾಹಿಯಲ್ಲಿ ಅವರು ಲೀಡ್ ಪಾತ್ರದಲ್ಲಿ ಮಾಡಿದ್ದಾರೆ.
ಹೀಗೆ ಸಕ್ಸಸ್ ಫುಲ್ ಆಗಿ ಕನ್ನಡ ಹಾಗೂ ತೆಲುಗು ಧಾರವಾಹಿ ಲೋಕದಲ್ಲಿ ಮಿಂಚುತ್ತಿರುವ ಶೋಭಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆಕ್ಟೀವ್ ಆಗಿದ್ದಾರೆ. ಇನ್ನು ಇವರನ್ನು ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನೋಡಿರುವವರಿಗೆ ಈಗಿರುವ ಶೋಭಾ ಶೆಟ್ಟಿಯವರನ್ನು ನೋಡಿದರೆ ಅಚ್ಚರಿ ಆಗುತ್ತದೆ. ಕಾರಣ ಅವರ ಚೇಂಜಸ್. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ನಟಿಸುವಾಗ ಅವರು ಗುಂಡು ಗುಂಡಕ್ಕೆ ಇದ್ದರು.
ಆದರೆ ಇದೀಗ ಜಿಮ್ ವರ್ಕೌಟ್ ಅಂತ ಮಾಡಿ ತಮ್ಮ ದೇಹವನ್ನು ಸುಂದರವಾಗಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಶೋಭಾ ಶೆಟ್ಟಿ ರೀಲ್ಸ್ ಮಾಡುವುದರಲ್ಲಿ ಕೂಡ ಮುಂದು. ಯಾವುದಾದರೂ ಒಂದು ವಿಡಿಯೋ ಅಥವಾ ಫೋಟೋಗಳನ್ನು ಅವರು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅವುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತದೆ. ಅದೇ ರೀತಿ ಇದೀಗ ಅವರು ಶೇರ್ ಮಾಡಿರುವ ಹಾ-ಟ್ ಲುಕ್ ಫೋಟೋ ಕೂಡ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.