ಕನ್ನಡ ಸಿನಿಮಾ ಇಂಡಸ್ಟ್ರಿ ಎನ್ನುವ ಮಹಾಸಾಗರದಲ್ಲಿ ದಡ ಸೇರಿದ ಕಲಾವಿದರು ಅದೆಷ್ಟೋ! ಇಲ್ಲಿ ಪರಭಾಷೆಯಾಗಲಿ ಅಥವಾ ಕನ್ನಡಿಗರೇ ಆಗಲಿ ಅವಕಾಶಗಳು ಸಿಗುತ್ತವೆ. ಆದರೆ ಅದನ್ನ ಸರಿಯಾಗಿ ಬಳಸಿಕೊಂಡು ಹೋಗುವುದು ಅವರವರ ಪ್ರತಿಭೆಗೆ ಬಿಟ್ಟಿದ್ದು. ಹೀಗೆ ಚಿತ್ರರಂಗಕ್ಕೆ ಬಂದ ಅತಿ ಕಡಿಮೆ ಸಮಯದಲ್ಲಿ ಗುರುತಿಸಿಕೊಂಡ ನಟಿಯರಲ್ಲಿ ನಿಶ್ವಿಕ ನಾಯ್ಡು ಕೂಡ ಒಬ್ಬರು. ಮಾಡಿರುವ ಕೆಲವೇ ಸಿನಿಮಾ ಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ನಿಶ್ವಿಕ ನಾಯ್ಡು.
ನಿಶ್ವಿಕ ನಾಯ್ಡು ಜನಿಸಿದ್ದು 1996 ಮೇ 19. ಬೆಂಗಳೂರಿನಲ್ಲಿಯೇ ನಟಿಸಿದ ನಿಶ್ವಿಕಾ ನಾಯ್ಡು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶ್ಯಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ. ನಿಶ್ವಿಕ ನಾಯ್ಡು ಮಾಡೆಲಿಂಗ್ ಕ್ಷೇತ್ರದಲ್ಲಿ ಮೊದಲು ಗುರುತಿಸಿಕೊಂಡು ನಂತರ ಚಿತ್ರರಂಗಕ್ಕೆ ಪ್ರವೇಶಿಸಿದವರು. ಇವರ ಮೊದಲ ಚಿತ್ರ ‘ವಾಸು ನಾನು ಪಕ್ಕಾ ಕಮರ್ಷಿಯಲ್’ ವಿಶೇಷ ಅಂದ್ರೆ ಇವರ ಮೊದಲ ಚಿತ್ರ ಬಿಡುಗಡೆಗೂ ಮೊದಲೇ ಎರಡನೆಯ ಚಿತ್ರವಾದ ಅಮ್ಮ ಐ ಲವ್ ಯು ಎನ್ನುವ ಸಿನಿಮಾ ಬಿಡುಗಡೆ ಕಂಡು ಪ್ರಶಂಸೆ ಗಳಿಸಿಕೊಂಡಿದೆ.
ಇನ್ನು ಅಮ್ಮ ಐ ಲವ್ ಯು ಚಿತ್ರವನ್ನು ಎಲ್ಲರೂ ನೆನಪಿಟ್ಟುಕೊಳ್ಳುತ್ತಾರೆ ಯಾಕೆಂದರೆ ಇದು ಚಿರಂಜೀವಿ ಸರ್ಜಾ ನಟನೆಯ ಸಿನಿಮಾ. ಇನ್ನು ನಿಶ್ವಿಕ ನಾಯ್ಡು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ಅನುಷ್ ಅವರ ಜೊತೆ ರಾಮಾಜುನ ಕಾಳಿದಾಸ ಕನ್ನಡ ಮೇಷ್ಟ್ರು ಗಾಳಿಪಟ ಟು ಪಡ್ಡೆ ಹುಲಿ, ಗುರು ಶಿಷ್ಯರು, ದಿಲ್ ಪಸಂದ್ ಹೀಗೆ ಮೊದಲಾದ ಸಿನಿಮಾಗಳಲ್ಲಿ ನಿಶ್ವಿಕ ಅಭಿನಯಿಸಿ ಉದಯ ಮುಖ ನಟಿ ಎನಿಸಿದ್ದಾರೆ. ಈಗಲೂ ಕೈಯಲ್ಲಿ ಕೆಲವು ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡಿರುವ ನಿಷ್ವಿಕ ನಾಯ್ಡು ಅವರಿಗೆ ಒಂದು ಸಣ್ಣ ಮಚ್ಚೆಯೇ ಭೂಷಣ.
ಇದರಿಂದಾಗಿ ನಿಶ್ವಿತಾ ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. 26ರ ಹರೆಯದ ನಿಷ್ವಿಕ ನಾಯ್ಡು ಮಾಡರ್ನ್ ಹಾಗೂ ಟ್ರೆಡಿಶನ್ ಎರಡು ಲುಕ್ ನಲ್ಲಿಯು ಬಹಳ ವಿಶೇಷವಾಗಿ ಕಾಣಿಸಿಕೊಳ್ಳುತ್ತಾರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ ಅವರ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈಗಾಗಲೇ ಲಕ್ಷಾಂತರ ಜನ ಫಾಲೋವರ್ಸ್ ಇದ್ದಾರೆ. ತರಾವರಿ ಫೋಟೋಶೂಟ್ ಗಳನ್ನ ಮಾಡಿಸಿ ಅಪ್ಲೋಡ್ ಮಾಡುವ ನಿಶ್ವಿಕಾ ನಾಯ್ಡು ಅವರ ಪ್ರತಿ ಪೋಸ್ಟ್ ಲಕ್ಷಾಂತರ ಲೈಕ್ ಗಳನ್ನು ಪಡೆದುಕೊಳ್ಳುತ್ತದೆ.
ಇನ್ನು ನಿಶ್ವಿಕ ನಾಯ್ಡು ಫಿಟ್ನೆಸ್ ಫ್ರೀಕ್ ಅಂತ ಹೇಳಬಹುದು. ಮೊದಲೇ ಮಾಡಲಿಂಗ್ ಕ್ಷೇತ್ರದಲ್ಲಿ ಇದ್ದವರು ಹಾಗಾಗಿ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಇರುತ್ತೆ. ಇದೀಗ ಸಿನಿಮಾಗಳಲ್ಲಿ ನಟಿಸುವವರು ಮಾತ್ರವಲ್ಲ ಸಾಮಾನ್ಯರು ಕೂಡ ಫಿಟ್ನೆಸ್ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಯಾವ ಕೆಲಸ ತಪ್ಪಿಸಿದ್ರು ಜಿಮ್ ಹೋಗುವುದನ್ನು ಮಾತ್ರ ತಪ್ಪಿಸುವುದಿಲ್ಲವಂತೆ. ನಿಶ್ವಿಕ ನಾಯ್ಡು ಇತ್ತೀಚಿಗೆ ವಿಭಿನ್ನ ಬಗೆಯ ವರ್ಕೌಟ್ ಮಾಡಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿಶ್ವಿಕ ನಾಯ್ಡು ಅವರ ಜಿಮ್ ಟ್ರೈನರ್ ಶುಭಂ ರಾವ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಶ್ವಿಕ ಮಾಡಿರುವ ವರ್ಕೌಟ್ ವಿಡಿಯೋ ವನ್ನು ಪೋಸ್ಟ್ ಮಾಡಿರುವ ಶುಭಂ ಇದು ನೋಡುವುದಕ್ಕೆ ಸುಲಭ ಹಾಗೂ ಫ್ಯಾನ್ಸಿ ಆಗಿದೆ. ಆದರೆ ಹುಡುಗರೆ ಖಂಡಿತ ಇದು ನಿಮ್ಮ ಎನರ್ಜಿಗೆ ಒಂದು ಸವಾಲು ಎನ್ನುವಂತೆ ಪೋಸ್ಟ್ ಕೆಳಗೆ ಬರೆದುಕೊಂಡಿದ್ದಾರೆ. ಹೌದು ಸುಮಾರು ಒಂದು ನಿಮಿಷಗಳ ವರೆಗೆ ಬಿಡದೆ ವಿವಿಧ ರೀತಿಯ ಭಂಗಿಗಳಲ್ಲಿ ನಿಶ್ವಿಕ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.
View this post on Instagram