PhotoGrid Site 1659931958226

ಪ್ರಿತ್ಸೋದ್ ತಪ್ಪಾ ಹಾಡಿಗೆ ನವಿಲಿನ ಹಾಗೆ ನರ್ತನ ಮಾಡಿದ ಚೆಂದುಳ್ಳಿ ಚೆಲುವೆ ಭೂಮಿಕಾ ಬಸವರಾಜ್! ವಿಡಿಯೋ ನೋಡಿ ಕಣ್ಣರಳಿಸಿದ ನೆಟ್ಟಿಗರು ನೋಡಿ!!

ಸುದ್ದಿ

ಈ ಹಿಂದೆ ಸಿನಿಮಾ ನಟಿಯರು ಯಾವುದಾದ್ರೂ ಒಂದು ಫೋಟೋವನ್ನು ಅಥವಾ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ರೆ ಪಡ್ಡೆ ಹುಡುಗರ ನಿದ್ದೆಗೆಡುತ್ತಿತ್ತು. ಅಬ್ಬಾ ಬ್ಯೂಟಿ ಅಂತ ಸಾಕಷ್ಟು ಜನ ಕಮೆಂಟ್ ಮಾಡುತ್ತಿದ್ದರು. ಆದರೆ ಈಗ ಟ್ರೆಂಡ್ ಬದಲಾಗಿದೆ. ಸಿನಿಮಾ ಹೀರೋ ಹೀರೋಯಿನ್ ಗಳಿಗಿಂತ ಸೋಶಿಯಲ್ ಮೀಡಿಯಾದಲ್ಲಿ ಸಾಮಾನ್ಯ ಜನರೇ ಹೆಚ್ಚಾಗಿ ಮಿಂಚುತ್ತಿದ್ದಾರೆ ಅದರಲ್ಲಿ ಕೆಲವರು ಈಗಾಗಲೇ ಸೋಶಿಯಲ್ ಮೀಡಿಯಾ ಸ್ಟಾರ್ ಎನಿಸಿಕೊಂಡಿದ್ದಾರೆ.

ಹೌದು. ಇಂದು ಸೋಶಿಯಲ್ ಮೀಡಿಯಾಗಳ ಪ್ರಭಾವ ಜಾಸ್ತಿಯಾಗಿದೆ ಸಾಕಷ್ಟು ಹುಡುಗಿಯರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ ಮಾಡುವುದರ ಮೂಲಕ ಫೇಮಸ್ ಆಗುತ್ತಿದ್ದಾರೆ. ಅಂಥವರಲ್ಲಿ ಭೂಮಿಕಾ ಬಸವರಾಜ್ ಕೂಡ ಒಬ್ಬರು. ಭೂಮಿಕಾ ಬಸವರಾಜ್ ಲಿಪಿ ಸಿಂಕ್ ವಿಡಿಯೋಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಬೆಡಗಿ ಭೂಮಿಕಾ ಬಸವರಾಜ್ ಮಾಡ್ರನ್ ಡ್ರೆಸ್ ನಲ್ಲಿಯೂ ಟ್ರೆಡಿಷನಲ್ ಡ್ರೆಸ್ ನಲ್ಲಿಯೂ ಮಿಂಚುತ್ತಾರೆ. ಅದರಲ್ಲೂ ಸೀರೆ ಉಟ್ಟು ಕೆಲವು ಹಾಡುಗಳಿಗೆ ಅವರು ಸೊಂಟ ಬಳುಕಿಸುವ ಪರಿ ಪಡ್ಡೆ ಹೈಕ್ಳ ನಿದ್ದೆಗೆಡಿಸಿರುವುದಂತೂ ಸುಳ್ಳಲ್ಲ.

ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಭೂಮಿಕಾ ಬಸವರಾಜ್ ಅವರಿಗೆ ಇನ್ಸ್ಟಾಗ್ರಾಮ್ ನಲ್ಲಿ 944 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇನ್ನು ಭೂಮಿಕಾ ಬಸವರಾಜ್ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ನ್ನೂ ಕೂಡ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇದರಲ್ಲಿ ಸಾಕಷ್ಟು ಶಾರ್ಟ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ 27.7ಸಾವಿರ ಸಬ್‌ಸ್ಕ್ರೈಬರ್ಸ್ ಹೊಂದಿರುವ ಭೂಮಿಕಾ ಬಸವರಾಜ್.

ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡುವುದು ಮಾತ್ರವಲ್ಲದೇ, ಯೋಗ, ಪ್ರವಾಸ, ಬ್ಯೂಟಿ ಟಿಪ್ಸ್, ಡ್ಯಾನ್ಸ್ ಮೊದಲಾದ ವಿಡಿಯೋಗಳನ್ನೂ ಕೂಡ ಅಪ್ಲೋಡ್ ಮಾಡುತ್ತಾರೆ. ಈ ಮೂಲಕ ಭೂಮಿಕಾ ಬಸವರಾಜ್ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಭೂಮಿಕಾ ಬಸವರಾಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಆಗಿರುವುದು ಮಾತ್ರವಲ್ಲ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಸುವರ್ಣ ಸೂಪರ್ ಸ್ಟಾರ್’ ಎನ್ನುವ ಫೇಮಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.

ನೋಡುವುದಕ್ಕೆ ಅತ್ಯಂತ ಸುಂದರವಾಗಿರುವ ಭೂಮಿಕಾ ಬಸವರಾಜ್ ಸಿನಿಮಾ ಹಿರೋಯಿಲ್ ಮಟಿರಿಯಲ್ ಕೂಡ ಹೌದು. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿಯೇ ತಮ್ಮ ಛಾಪನ್ನು ಮೂಡಿಸಿದ್ದಾರೆ ಭೂಮಿಕಾ. ಯಾವ ಸಿನಿಮಾ ಹಿರೋಯಿನ್ ಗೂ ಕಮ್ಮಿ ಇಲ್ಲದ ರೀತಿಯಲ್ಲಿ ಅದ್ಭುತವಾಗಿ ನೃತ್ಯ ಮಾಡುವುದರ ಮೂಲಕ ಜನರ ಮನಗೆದ್ದಿದ್ದಾರೆ. ಸಾಕಷ್ಟು ಕನ್ನಡ ಹಾಡುಗಳು, ಹಿಂದಿ ಹಾಡುಗಳು ಹಾಗೂ ಟ್ರೆಂಡ್ ನಲ್ಲಿರುವ ಹಾಡುಗಳಿಗೆ ರೀಲ್ಸ್ ಮಾಡುತ್ಟಾರೆ ಭೂಮಿಕಾ ಬಸವರಾಜ್.

ಹಾಗೆಯೇ ಕೆಲವು ಉತ್ಪನ್ನಗಳ ಪ್ರಮೋಷನ್ ಕೂಡ ಮಾಡುತ್ತಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡವರು ಹೆಚ್ಚು ಹೆಚ್ಚು ಅನುಯಾಯಿಗಳನ್ನು ಹೊಂದಿರುವವರು ಸಾಮಾಜಿಕ ಜಾಲತಾಣದ ಮೂಲಕವೇ ಹಣವನ್ನೂ ಗಳಿಸುತ್ತಾರೆ ಎನ್ನುವುದು ನಿಮಗೆಲ್ಲರಿಗೂ ಗೊತ್ತು. ಇದಕ್ಕೆ ಭೂಮಿಕಾ ಬಸವರಾಜ್ ಕೂಡ ಹೊರತಾಗಿಲ್ಲ. ಸುಂದರವಾದ ಸೀರೆ, ಸೊಂಟಕ್ಕೊಂದು ಸರಪಳಿ ತೊಟ್ಟು ವಿವಿಧ ಭಂಗಿಯಲ್ಲಿ ಪೋಟೋ ತೆಗೆಸಿಕೊಳ್ಳುವುದು ಮಾತ್ರವಲ್ಲದೇ ಮಳೆಯಲ್ಲಿಯೂ ಅವರ ಡ್ಯಾನ್ಸ್ ಮಾಡುವ ರೀತಿಗೆ ಹಲವರು ಫಿದಾ ಆಗಿದ್ಡಾರೆ.

ಭೂಮಿಕಾ ಬಸವರಾಜ್ ಯಾವುದೇ ಪೋಸ್ಟ್ ಹಾಕಿದರೂ ಅದಕ್ಕೆ ಸಾವಿರಾರು ಲೈಕ್ ಗಳು, ಕಮೆಂಟ್ ಗಳು ಬರುತ್ತವೆ. ಇತ್ತೀಚಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ’ಪ್ರೀತ್ಸೋದ್ ತಪ್ಪಾ’ ಚಿತ್ರದ ’ಬಂಗಾರದಿಂದ’ ಹಾಡಿಗೆ ಸೂಪರ್ ಸ್ಟೆಪ್ ಹಾಗಿ ಸೊಂಟ ಬಳುಕಿಸಿರುವ ಭೂಮಿಕಾ ಬಸವರಾಜ್ ಅವರನ್ನ ನೋಡಿದ್ರೆ ಕಿಚ್ಚ ಸುದೀಪ್ ಅವರ ’ಸೀರೆಲಿ ಹುಡುಗಿರ ನೋಡಲೇ ಬಾರದು’ ಹಾಡು ನೆನಪಾಗದೇ ಇರೊಲ್ಲ. ಇನ್ನು ಬಿಗ್ ಬಾಸ್ ಮನೆಗೆ ಭೂಮಿಕಾ ಹೋಗುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೆ ಈ ಮಾತು ಸುಳ್ಳಾಗಿದೆ.

 

View this post on Instagram

 

A post shared by Bhumika (@bhumika_basavaraj)

Leave a Reply

Your email address will not be published. Required fields are marked *