ಬಿಗ್ ಬಾಸ್ ಸೀಸನ್ 9 ಘಟಾನುಘಟಿಗಳಿಂದ ತುಂಬಿದೆ. ಮನೋರಂಜನೆಯಿಂದ ಹಿಡಿದು ಟಾಸ್ಕ್ ಕಂಪ್ಲೀಟ್ ಮಾಡುವವರೆಗೆ ಈ ಬಾರಿ ಎಲ್ಲಾ ಸ್ಪರ್ಧಿಗಳು ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಅದರಲ್ಲೂ ಬಿಗ್ ಬಾಸ್ ಮನೆಗೆ ಈಗಾಗಲೇ ಒಮ್ಮೆ ಹೋಗಿ ಅನುಭವ ಇರುವ ಒಂಬತ್ತು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇರುವುದು ಅವರಿಗೂ ಹಾಗೂ ಹೊಸದಾಗಿ ಬಿಗ್ ಬಾಸ್ ಮನೆಗೆ ತೆರಳಿದವರಿಗೂ ಕೂಡ ಅನುಕೂಲವಾಗುತ್ತಿದೆ.
ಯಾಕೆಂದರೆ ಬಿಗ್ ಬಾಸ್ ಮನೆ ಸದ್ಯ ಎಲ್ಲರಿಗೂ ಹೋಮ್ಲಿ ಫೀಲಿಂಗ್ ಕೊಡುತ್ತಿದೆ. ಇನ್ನು ಬಿಗ್ ಬಾಸ್ ಸ್ಪರ್ಧೆ ಪ್ರಶಾಂತ್ ಸಂಬರ್ಗಿ ಬಗ್ಗೆ ನಿಮಗೆ ಗೊತ್ತೇ ಇದೆ. ಈ ಹಿಂದೆಯೂ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಪ್ರಶಾಂತ್ ಸಂಬರ್ಗಿ ಹಲವು ಕಾರಣಗಳಿಗೆ ಸುದ್ದಿಯಾದವರು. ಹೊರ ಪ್ರಪಂಚದಲ್ಲಿಯೂ ಸಾಕಷ್ಟು ವಿಷಯಗಳ ಬಗ್ಗೆ ಧ್ವನಿ ಎತ್ತುವ ಪ್ರಶಾಂತ ಸಂಬರ್ಗಿ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಜಗಳ ಮಾತು ನಗು ಎಲ್ಲವನ್ನ ಶೇರ್ ಮಾಡುತ್ತಾರೆ.
ಇನ್ನು ಸಾಮಾನ್ಯವಾಗಿ ಪ್ರಶಾಂತ ಸಂಬರ್ಗಿಗೆ ಅವರ ಹತ್ತಿರ ವಾದ ಮಾಡಿ ಗೆಲ್ಲೋದು ಕಷ್ಟ. ಆದರೆ ಪ್ರಶಾಂತ್ ಅವರು ಉಳಿದ ಸ್ಪರ್ಧಿಗಳ ಅಚ್ಚುಮೆಚ್ಚಿನ ವ್ಯಕ್ತಿ ಕೂಡ ಹೌದು ಎಲ್ಲರ ಜೊತೆಗೆ ಪ್ರಶಾಂತ ಸಂಬರ್ಗಿ ಚೆನ್ನಾಗಿ ಬೆಳೆಯುತ್ತಾರೆ ಎನ್ನುವುದು ಸ್ಪರ್ಧಿಗಳ ಅಭಿಮತ. ಇನ್ನು ಈ ಬಾರಿಯ ಕಿಚ್ಚ ಸುದೀಪ್ ಅವರ ಪಂಚಾಯಿತಿ ಕಟ್ಟೆಯಲ್ಲಿ ಪ್ರಶಾಂತ್ ಸಂಬರ್ಗಿ ಅವರ ಬಗ್ಗೆ ಎಸ್ ಆರ್ ನೋ ರೌಂಡ್ ನಲ್ಲಿ ಒಂದು ಪ್ರಶ್ನೆ ಕೇಳಲಾಗಿತ್ತು.
ಕಿಚ್ಚ ಸುದೀಪ್ ಬೋರ್ಡ್ ಹಿಡಿದು ಕುಳಿತಿದ್ದ ಸ್ಪರ್ಧೆಗಳಿಗೆ ಈ ಪ್ರಶ್ನೆಯನ್ನು ಕೇಳುತ್ತಾರೆ ‘ಪ್ರಶಾಂತ್ ಸಂಬರ್ಗಿ ಖುಷಿಯಾದಾಗ ಮಹಿಳಾ ಸ್ಪರ್ಧೆಗಳನ್ನು ತಬ್ಬಿಕೊಳ್ಳುತ್ತಾರೆ’. ಈ ಪ್ರಶ್ನೆ ಕೇಳುತ್ತಿದ್ದ ಹಾಗೆ ಎಲ್ಲಾ ಸ್ಪರ್ಧಿಗಳು ಎಸ್ ಎಂದು ಬೋರ್ಡ್ ತೋರಿಸಿದ್ದಾರೆ ಇದಕ್ಕೆ ಸ್ಪರ್ಧಿಗಳ ಅಭಿಪ್ರಾಯವನ್ನು ಕೂಡ ಸುದೀಪ್ ಕಲೆ ಹಾಕಿದ್ದಾರೆ. ಆರ್ಯವರ್ಧನ್ ಗುರೂಜಿ ಅವರು ನಾನು ಅವರ ಜಾತಕ ನೋಡಿದ್ದೇನೆ ರಾಹು ಗುರು ಒಂದೇ ಮನೆಯಲ್ಲಿದ್ದು ಇವರಿಗೆ ಹೆಣ್ಣು ಮಕ್ಕಳನ್ನು ತಬ್ಬಿ ಕೊಳ್ಳುವ ಗುಣ ಇದೆ ಅಂತ ಹೇಳಿದ್ದಾರೆ.
ಇನ್ನು ಕಾವ್ಯ ಗೌಡ ಪ್ರಶಾಂತ ಸಂಬರ್ಗಿಗೆ ತಬ್ಬಿಕೊಳ್ಳುವುದು ಮಾತ್ರವಲ್ಲದೆ ಖುಷಿಯಾದಾಗ ಎತ್ತಿಕೊಳ್ಳುತ್ತಾರೆ ಅಂತ ಅಭಿಪ್ರಾಯ ಸೂಚಿಸಿದ್ದಾರೆ. ಇನ್ನು ದೀಪಿಕಾ ದಾಸ್ ಅವರು ನಾನು ಅಷ್ಟಾಗಿ ಯಾರನ್ನು ಟಚ್ ಮಾಡಿಸಿಕೊಳ್ಳುವುದಿಲ್ಲ. ಆದರೆ ಪ್ರಶಾಂತ್ ಸಂಬರ್ಗಿ ಬಹಳ ಪ್ರೀತಿಯಿಂದ ಹಗ್ ಮಾಡುತ್ತಾರೆ ಅಂತ ಹೇಳಿದ್ದಾರೆ. ದಿವ್ಯ ಉರುಡುಗ ಪ್ರಶಾಂತ್ ಸರ್ ಹಗ್ ಮಾಡಿದ್ರೆ ವಾರ್ಮ್ ಫೀಲ್ ಆಗುತ್ತೆ ಅಂತ ಹೇಳಿದ್ರೆ.
ಅನುಪಮಾ ಗೌಡ ಅವರು ಪ್ರಶಾಂತ ಸಂಬರ್ಗಿ ತಬ್ಬಿಕೊಂಡು ಇನ್ನೂ ಖುಷಿಯಾದ್ರೆ ಕೈಗೆ ಮುತ್ತು ಕೊಡುತ್ತಾರೆ ಅಂತ ಹೇಳಿದ್ದಾರೆ. ಈ ಎಲ್ಲರ ಅಭಿಪ್ರಾಯವನ್ನು ಕೇಳಿದ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿ ಅವರ ಬಳಿ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ದಾರೆ. ಪ್ರಶಾಂತ್ ಸಂಬರ್ಗಿ, ಸರ್, ನಾನು ಬಹಳ ಎಮೋಷನಲ್ ವ್ಯಕ್ತಿ ಇದು ಒಂದು ಪ್ರಪಂಚ ಇಲ್ಲಿ ಎಲ್ಲರೂ ನನಗೆ ಆಪ್ತರು. ಹೆಣ್ಣು ಮಕ್ಕಳನ್ನು ಮಾತ್ರ ಅಲ್ಲ ಗಂಡು ಮಕ್ಕಳನ್ನು ಕೂಡ ತಬ್ಬಿ ಕೊಳ್ಳುತ್ತೇನೆ’ ಅಂತ ಹೇಳಿದ್ದಾರೆ. ಹಾಗಾದ್ರೆ ಕ್ಯಾಮರಾ ನೋಡುವ ಹಾಗೆ ತಬ್ಬಿ ಕೊಳ್ಳಿ ಅಂತ ಕಿಚ್ಚ ಸುದೀಪ್ ಹಾಸ್ಯ ಚಟಾಕಿ ಹಾರಿಸಿದರು.