PhotoGrid Site 1661660371644

ಪ್ರತಿಯೊಬ್ಬರೂ ತಿಳಿಯಬೇಕಾದ ಸುದ್ದಿ, ಗಂಡು ಮಕ್ಕಳಿಗೆ ಕೆಳಗಡೆ ಎಷ್ಟು ಬೀಜಗಳಿವೆ ಎಂದು ಈಗಲೇ ಚೆಕ್ ಮಾಡಿ! ಒಂಟಿ ಬೀಜ ಇದ್ದರೆ ಎಂತಾ ಅಪಾಯ ಎದುರಾಗುತ್ತದೆ ನೋಡಿ!!

ಸುದ್ದಿ

ಜಗತ್ತಿನಲ್ಲಿ ದೇವರ ಸೃಷ್ಟಿ ನಿಯಮದ ಬಗ್ಗೆ ಸರಿಯಾಗಿ ಯಾರಿಗೂ ಊಹಿಸಲು ಸಾಧ್ಯವಿಲ್ಲ ಯಾಕಂದ್ರೆ ದೇಹದಲ್ಲಿ ಕೆಲವು ಎರಡು ಅಂಗಗಳು ಇರುತ್ತವೆ. ಅವುಗಳಲ್ಲಿ ಒಂದು ಇಲ್ಲವಾದರೂ ಸಹಜವಾಗಿಯೇ ಜೀವನ ನಡೆಸಬಹುದು ಉದಾಹರಣೆಗೆ ನಮಗೆ ಎರಡು ಕಣ್ಣಿದೆ. ಒಂದು ಕಣ್ಣು ಇಲ್ಲದೆ ಇದ್ದರೂ ಇರುವ ಒಂದೇ ಕಣ್ಣಿನಲ್ಲಿ ಪ್ರಪಂಚವನ್ನು ನೋಡಬಹುದು. ಅದೇ ರೀತಿ ಒಂದೇ ಕಿಡ್ನಿ ಇದ್ರೂ ಸಾಕಷ್ಟು ವರ್ಷ ಬದುಕಬಹುದು. ಇನ್ನು ಪುರುಷರ ವಿಷಯಕ್ಕೆ ಬಂದರೆ ಪುರುಷರಲ್ಲಿ ವೃಷಣ ಅಥವಾ ಬೀಜಗಳು ಕೂಡ ಬಹಳ ಮುಖ್ಯ ಆದ್ರೆ ಪುರುಷರಲ್ಲಿ ಇರುವ ವೃಷಣಗಳು ಎರಡು ಇರಬೇಕೇ! ಒಂದೇ ಇದ್ದಾರೆ ಸಾಕೆ ಎಂಬಿತ್ಯಾದಿ ಮಾಹಿತಿಗಳನ್ನ ಡಾಕ್ಟರ್ ಅಂಜನಪ್ಪ ನೀಡಿದ್ದಾರೆ.

ಹೌದು ಸಾಮಾನ್ಯವಾಗಿ ಇಂತಹ ವಿಚಾರಗಳ ಬಗ್ಗೆ ಯಾವ ವೈದ್ಯರು ಓಪನ್ ಆಗಿ ತಿಳಿಸುವುದಿಲ್ಲ ನಮಗೆ ಅಗತ್ಯವಿದ್ದರೆ ಅಥವಾ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದು ವೈದ್ಯರ ಬಳಿ ಹೋದರೆ ಮಾತ್ರ ಅವುಗಳ ಬಗ್ಗೆ ತಿಳಿದುಕೊಳ್ಳಬಹುದು ಆದರೆ ಕೆಲವು ವಿಷಯಗಳಲ್ಲಿ ಸಾಮಾನ್ಯ ಜ್ಞಾನ ಇರುವುದು ಬಹಳ ಅಗತ್ಯ. ಹೀಗೆ ಮನುಷ್ಯರ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ಮಾಹಿತಿಗಳನ್ನ ವಿಡಿಯೋ ಮಾಡಿ ತಿಳಿಸಿ ಕೊಡುವ ಡಾಕ್ಟರ್ ಅಂಜನಪ್ಪ.

ಇದೀಗ ಸಾಮಾನ್ಯರಿಗೆ ಗೊತ್ತೇ ಇಲ್ಲದ ಹಾಗೂ ಗೊತ್ತಿರಲೇಬೇಕಾದ ವಿಷಯ ಒಂದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಪುರುಷರಿಗೆ ವೃಷಣಗಳು ಅಥವಾ ಬೀಜಗಳು ಇರುತ್ತವೆ ಇದು ಇರಲೇಬೇಕಾದ ವಿಷಯ ಆದರೆ ಈ ಬೀಜಗಳು ಇಲ್ಲದೆ ಇದ್ದರೆ ಏನಾಗುತ್ತೆ ಪುರುಷರ ಆರೋಗ್ಯದಲ್ಲಿ ಯಾವ ರೀತಿಯ ಏರುಪೇರುಗಳು ಆಗಬಹುದು ಎನ್ನುವುದನ್ನು ಡಾಕ್ಟರ್ ಅಂಜನಪ್ಪ ತಿಳಿಸಿಕೊಟ್ಟಿದ್ದಾರೆ.

ಒಮ್ಮೆ ಒಬ್ಬ ಅಜ್ಜಿ ಅಂಜನಪ್ಪ ವೈದ್ಯರ ಬಳಿ ಬಂದು ವೈದ್ಯರೇ ನನ್ನ ಮಗನಿಗೆ ಒಂದೇ ಬೀಜ ಇದೆ ಇದರಿಂದ ಏನಾದರೂ ಸಮಸ್ಯೆನಾ ಅಂತ ಹಳ್ಳಿಯ ಭಾಷೆಯಲ್ಲಿ ಕೇಳುತ್ತಾರೆ. ಆದರೆ ಆತಂಕಗೊಂಡಿದ್ದ ಅಜ್ಜಿಯನ್ನು ವೈದ್ಯರು ಸಮಾಧಾನ ಮಾಡುತ್ತಾರೆ ಪುರುಷರಲ್ಲಿ ವೃಷಣಗಳು ಇದಿಯೋ ಇಲ್ವೋ ಎಷ್ಟಿದೆ ಎನ್ನುವುದರ ಬಗ್ಗೆ ಮಗುವಾಗಿರುವಾಗಲೇ ನೋಡಬೇಕು. ಸುಮಾರು ಆರು ವರ್ಷದ ಒಳಗಿನ ಮಗುವಿಗೆ ಇಂತಹ ಸಮಸ್ಯೆ ಇದ್ರೆ ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನ ಸರಿಪಡಿಸಬಹುದು ಕಾಮನ್ ಆದರೆ ಕೆಲವರಿಗೆ ಒಂದೇ ಬೀಜ ಇರುತ್ತೆ.

ವೈದ್ಯಕೀಯವಾಗಿ ಒಂದೇ ಬೀಜ ಇರುವವರು ಕೂಡ ಆರಾಮಾಗಿ ಜೀವನ ನಡೆಸಬಹುದು ಆದರೆ ಇನ್ನೊಂದು ವೃಷಣ ಎಲ್ಲಿದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೌದು, ಆರರಿಂದ ಕನಿಷ್ಠ 12 ವರ್ಷಗಳ ಒಳಗೆ ಮಕ್ಕಳಲ್ಲಿ ವೃಷಣಗಳ ಬೆಳವಣಿಗೆ ಸರಿಯಾಗಿ ಇದೆಯೇ ಇಲ್ಲವೇ ಎರಡು ವೃಷಣಗಳು ಇವೆ ಎಂಬುದನ್ನ ನೋಡಬೇಕು ಇಲ್ಲವಾದಲ್ಲಿ ಅದು ಹೊಟ್ಟೆಯ ಒಳಗೆ ಇದ್ದರೆ ಅದನ್ನ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯಬೇಕು.

ಇನ್ನು ದೊಡ್ಡವರಾದ ಮೇಲೆಯೂ ಕೂಡ ಅಂದರೆ ಪುರುಷರು ವಯಸ್ಕರಾದ ನಂತರ ಒಂದೇ ಬ್ರಶಣ ಇದ್ರೆ ಆಗ ಚಿಂತೆ ಮಾಡಬೇಕಾದಿತು. ಯಾಕಂದ್ರೆ ಬ್ರಷ್ ಅಣ್ಣ ಅಥವಾ ಬೀಜ ಒಂದು ಹೊರಗಿದ್ದು ಇನ್ನೊಂದು ಹೊಟ್ಟೆಯ ಒಳಗೆ ಇದ್ದರೆ ಅದನ್ನ ಹಾಗೆಯೇ ಬಿಟ್ಟರೆ ಅದು ಕ್ಯಾನ್ಸರ್ ಆಗಿ ರೂಪುಗೊಳ್ಳಬಹುದು ಹಾಗಾಗಿ ಇದನ್ನ ಕತ್ತರಿಸಿ ತೆಗೆಯಲಾಗುತ್ತದೆ.

ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಮುತುವರ್ಜಿ ವಹಿಸಬೇಕು. ಜನರು ಕೆಲವೊಮ್ಮೆ ಮುಜುಗರಕ್ಕೆ ಒಳಗಾಗಿ ತಮ್ಮ ಆರೋಗ್ಯದಲ್ಲಿನ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುವುದೇ ಇಲ್ಲ ಆದರೆ ಇಂತಹ ಕೆಲವು ಸೂಕ್ಷ್ಮ ವಿಚಾರಗಳಲ್ಲಿ ನಿರ್ಲಕ್ಷ್ಯ ಮಾಡಿದರೆ ಮುಂದೆ ಖಂಡಿತವಾಗಿಯೂ ಸಮಸ್ಯೆಯನ್ನು ಎದುರಿಸಬೇಕಾಗಿತ್ತು. ಹಾಗಾಗಿ ವೈದ್ಯರಾದ ಡಾ. ಅಂಜನಪ್ಪ ಮುಕ್ತವಾಗಿ ಇಂತಹ ವಿಷಯಗಳ ಬಗ್ಗೆ ಮಾತನಾಡುತ್ತಾರೆ.

Leave a Reply

Your email address will not be published. Required fields are marked *