PhotoGrid Site 1667882945853

ಪ್ರತಿದಿನ ರಾತ್ರಿ 2.30ಕ್ಕೆ ಎದ್ದು ಈ ಯುವಕ ಬೆಳಿಗ್ಗೆ 5.30ರ ವರೆಗೆ ಏನು ಮಾಡುತ್ತಾನೆ ಗೊತ್ತಾ? ಶಾಕ್ ಆದ ವಿಜಯ್ ಪ್ರಕಾಶ್, ಬಾಯಿ ತೆರೆದ ಅನುಶ್ರೀ, ಅಬ್ಬಾ ಇಷ್ಟು ಚಿಕ್ಕ ವಯಸ್ಸಿಗೆ ಎಂತಾ ಸಾಧನೆ ನೋಡಿ!!

ಸುದ್ದಿ

ಜೀ ಕನ್ನಡದಲ್ಲಿ ಈವರಿಗೆ 18 ಸೀಜನ್ ಕಂಡಿರುವ ಸರಿಗಮಪ ಲಿಟ್ಲ್ ಚಾಂಪ್ಸ್ 19ನೇ ಸೀಸನ್ ಈಗಾಗಲೇ ಆರಂಭವಾಗಿದೆ. ಪ್ರತಿ ಸೀಸನ್ ನಂತೆ ಈ ಬಾರಿಯೂ ಕೂಡ ಅದ್ಭುತ ಪ್ರತಿಭೆಗಳು ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದಾರೆ. ಈ ಪುಟ್ಟ ಮಕ್ಕಳ ಗಾಯನ ಕೇಳುವುದೇ ಒಂದು ಖುಷಿ. ಆ ಹಾಡುಗಳು ಕಿವಿಗೆ ಎಷ್ಟು ಇಂಪು ಕೊಡುತ್ತೇ ಅಲ್ವಾ? ಹಾಗಾಗಿಯೇ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ಇಷ್ಟು ವರ್ಷ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ.

ಹೌದು ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು ಹಿಟ್ ಆದ ಶೋ ಅಂದ್ರೆ ಅದು ಸರಿಗಮಪ. ಇಲ್ಲಿ ಯುವಕರಿಂದ ಹಿಡಿದು ಪುಟ್ಟ ಮಕ್ಕಳ ವರೆಗೆ ಎಲ್ಲಾ ವಯಸ್ಸಿನ ಹಾಡುಗಾರರೂ ಕೂಡ ಬಂದು ಸರಿಗಮಪ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಂಡಿದ್ಡಾರೆ. ಇನ್ನು ಸರಿಗಪಮ ಕಾರ್ಯಕ್ರಮದ ತೀರ್ಪುಗಾರರಾದ ಸಂಗೀತ ನಿರ್ದೇಶಕ ಅರುಣ್ ಜನ್ಯ, ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ವೇದಿಕೆಯ ಮೆಲೆ ಒಂದು ಹಾಡುವ ಎಲ್ಲಾ ಸ್ಪರ್ಧಿಗಳಿಗೂ ಸ್ಫೂರ್ತಿ ನೀಡಿದ್ದಾರೆ.

ಇನ್ನು ಸಂಚಿತ್ ಹೆಗ್ಡೆಯಂತಹ ಹಿನ್ನೆಲೆ ಗಾಯಕರು ಹುಟ್ಟಿಕೊಂಡಿದ್ಡೇ ಈ ವೇದಿಕೆಯ ಮೇಲೆ. ಇಂತಹ ಗಾಯಕರನ್ನು ಹುಟ್ತುಹಾಕಿ ಅವರಿಗೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಮಾಡಿಕೊಟ್ಟ ಕೀರ್ತಿ ಮಾತ್ರ ಅರ್ಜುನ್ ಜನ್ಯ ಅವರಿಗೇ ಸೇರಬೇಕು. ಈವರೆಗೆ ಸಾಕಷ್ಟು ಯುವ ಗಾಯಕರನ್ನು ಬೆಳೆಸಿದವರು ಅರ್ಜುನ್ ಜನ್ಯ. ಸರಿಗಮಪ ಸೀಸನ್ 19 ಈಗ ತುಂಬಾ ಸೌಂಡ್ ಮಾಡುತ್ತಿದೆ.

ಈ ಬಾರಿ ರಾಜ್ಯದ ಬೇರೆ ಬೇರೆ ಭಾಗದಿಂದ, ಪ್ರದೇಶದಿಂದ ಪುಟಾಣಿ ಪ್ರತಿಭೆಗಳು ಹಾಡಲು ಬಂದಿವೆ. ಅದರಲ್ಲಿ ಕೆಲವರಂತೂ ಅತೀ ಸಣ್ಣ ವಯಸ್ಸಿನಲ್ಲಿಯೇ ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂದವರು. ಆರು ವರ್ಷದ ಹುಡುಗನಿಂದ 14 ವರ್ಷದ ಮಕ್ಕಳ ವರೆಗೆ ಎಲ್ಲರೂ ಸುಶ್ರಾವ್ಯವಾಗಿ ಹಾಡುತ್ತಾರೆ.

ಅವರಲ್ಲಿ ಉತ್ತರ ಕನ್ನಡದ ಒಂದು ಪ್ರತಿಭೆ ನಿಜಕ್ಕೂ ಬಹಳ ವಿಭಿನ್ನ ಎನ್ನಿಸುತ್ತೆ. ಹೌದು, ಈ ಬಾರಿಯ ಸರಿಗಮಪ ವೇದಿಕೆ ವೈಶಿಷ್ಟ್ಯಗಳಿಂದ ತುಂಬಿದೆ. ಅದರಲ್ಲಿ ಉತ್ತರ ಕನ್ನಡದ ಜಿಲ್ಲೆಯ ಸಿರ್ಸಿಯ ನಿವಾಸಿ ಪ್ರವೀಣ್ ಶೇಟ್ ಸುಶ್ರಾವ್ಯವಾಗಿ ಹಾಡುವುದು ಮಾತ್ರವಲ್ಲದೇ, ಈಗಲೇ ಆಧ್ಯಾತ್ಮದ ಬಗ್ಗೆ ಸಾಕಷ್ಟು ಅನುಭವಿ ಮಾತುಗಳನ್ನು ಆಡುತ್ತಾನೆ.

ಅಷ್ಟೇ ಅಲ್ಲ, ಆತನಿಗೆ 12 ವರ್ಷ ವಯಸ್ಸು. ಆಗಲೇ ಧ್ಯಾನ ಮೊದಲಾದವುಗಳ ಬಗ್ಗೆ ಚೆನ್ನಾಗಿ ಅರಿತಿದ್ದಾನೆ. ಸರಿಗಮಪ ವೇದಿಕೆಗೆ ಹಾಡಲು ಬಂದ ಪ್ರವೀಣ್ ನ ದಿನಚರಿಯ ಬಗ್ಗೆ ಕೇಳಿ ವೇದಿಕೆಯಲ್ಲಿದ್ದವರೆಲ್ಲರೂ ದಂಗಾಗಿ ಬಿಟ್ಟಿದ್ದಾರೆ. ಸರಿಗಮಪ ವೇದಿಕೆಯಲ್ಲಿ ಆಂಕರ್ ಅನುಶ್ರೀಯವರು ಪ್ರವೀಣ್ ಅವರ ಬಳಿ ನಿಮ್ಮ ದಿನಚರಿ ಏನು ಎಂದು ಕೇಳುತ್ತಾರೆ. ಅದಕ್ಕೆ ಆ ಹುಡುಗ ತಾನು ಎರಡುವರೆ ಗಂಟೆಗೆ ಎದ್ದೇಳುವುದಾಗಿ ಹೇಳುತ್ತಾನೆ.

ಏಳುವರೆ ಗಂಟೆಗಾ ಎಂದು ಅನುಶ್ರೀ ಆಶ್ಚರ್ಯದಿಂದ ಕೇಳುತ್ತಾರೆ. ಆದರೆ ಇಲ್ಲ ಎರಡು ವರೆಗಂಟೆಗೆ ಏಳುತ್ತೇನೆ. ಬೆಳಗಿನ ಜಾವ ಐದು ಗಂಟೆಯವರೆಗೂ ಧ್ಯಾನ ಮಾಡುತ್ತೇನೆ. ಎಂದು ಹೇಳಿದ್ದಾನೆ. ಜೊತೆಗೆ ಆತ್ಮಪರಮಾತ್ಮಗಳ ಬಗ್ಗೆ, ಜೀವನದ ಸಾರ ಮುಕ್ತಿಯಲ್ಲಿದೆ ಎನ್ನುವಂತಹ ಮಾತುಗಳೂ ಕೂಡ ಎಲ್ಲರನ್ನೂ ದಂಗಾಗಿಸಿದ್ದವು. ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಜ್ಞಾನ ಸಂಪಾದನೆ ಮಾಡುವತ್ತ ಚಿತ್ತ ನೆಟ್ಟಿರುವ ಪ್ರವೀಣ್ ನಿಜಕ್ಕೂ ಜೀವನದಲ್ಲಿ ತುಂಬಾ ಸಾಧಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *