ಇಂದು ಕಿರುತೆರೆಯ ಲೋಕ ಸಾಕಷ್ಟು ಫೇಮಸ್ ಆಗುತ್ತಿದೆ. ಜನರೂ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಇಂದು ಹೊಸ ಹೊಸ ಕಲಾವಿದರು ಧಾರವಾಹಿಗಳನ್ನ ಹೆಚ್ಚು ಫೇಮಸ್ ಮಾಡುತ್ತಿದ್ದಾರೆ ಅವರ ಅದ್ಭುತ ಅಭಿನಯ, ಸೂಪರ್ ಲುಕ್ ಜನರಿಗೆ ಹೆಚ್ಚು ಇಷ್ಟವಾಗುವಂತೆ ಮಾಡಿದೆ.
ಇನ್ನು ಧಾರಾವಾಹಿ ಅಂದ್ರೆ ಕೇವಲ ಕನ್ನಡದ ಸೀರಿಯಲ್ ಗಳು ಮಾತ್ರವಲ್ಲ ಇತರ ಭಾಷೆಯಲ್ಲಿಯೂ ಕೂಡ ಧಾರಾವಾಹಿಗಳ ಹವಾ ಹೆಚ್ಚಾಗಿದೆ. ಸಾಕಷ್ಟು ತಾರೆಯರು ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕವೇ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ಹಿಂದಿ ಸೀರಿಯಲ್ ನಲ್ಲಿ ಸಾಕಷ್ಟು ಕಲಾವಿದರು ಮಿಂಚುತ್ತಿದ್ದು ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಯಾವ ಸಿನಿಮಾ ತಾರೆಯರಿಗೂ ಕಮ್ಮಿ ಇಲ್ಲದ ರೀತಿಯಲ್ಲಿ ಧಾರಾವಾಹಿ ನಟಿಯರು ಕೂಡ ಇಂದು ಫಿಟ್ನೆಸ್ ವಿಚಾರದಲ್ಲಿಯೂ ಮುಂದಿದ್ದಾರೆ.
ಇನ್ನು ನಟನೆಯ ಬಗ್ಗೆ ಅಂತೂ ಕೇಳಲೇಬೇಡಿ. ಯುಕ್ತಿ ಕಪೂರ್ ಎನ್ನುವ ಧಾರಾವಾಹಿ ನಟಿಯ ಬಗ್ಗೆ ನೀವು ತಿಳಿದುಕೊಂಡರೆ ನೀವೇ ನಮ್ಮ ಮಾತು ನಿಜ ಎನ್ನುತೀರಿ. ಅಷ್ಟು ಪಕ್ವವಾದ ಅಭಿನಯ ಆಕೆಯದ್ದು. 29 ವರ್ಷದ ಯುಕ್ತಿ ಕಪೂರ್ ಜನಿಸಿದ್ದು ರಾಜಸ್ಥಾನದ ಜೈಪುರ್ ನಲ್ಲಿ. ನೃತ್ಯ ಹಾಗೂ ಸಂಗೀತವನ್ನು ಹೆಚ್ಚು ಇಷ್ಟಪಡುವ ಯುಕ್ತಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಗೂ ಯೂಟ್ಯೂಬ್ ಚಾನೆಲ್ ನಲ್ಲಿ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಯುಕ್ತಿ ಕಪೂರ್ ಅಭಿನಯಿಸಿದ ಧಾರಾವಾಹಿಗಳ ಹೆಸರು ತುಂಬಾನೇ ಫೇಮಸ್. ಕೆಲವನ್ನು ನೀವು ನೋಡಿರಲೂಬಹುದು. ಬಹಳ ಕಾಲ ಪ್ರಸಾರವಾಗಿದ್ದ ಸಿಯಾ ಕಿ ರಾಮ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರವನ್ನು ನಿಭಾಯಿಸಿದ ನಟಿ ಇವರು. ಅದಾದ ಬಳಿಕ ಎರಡು ವರ್ಷಗಳ ಕಾಲ ಅಗ್ನಿಫೆರ ಧಾರಾವಾಹಿಯಲ್ಲಿ ಮುಖ್ಯ ಭೂಮಿಗೆ ಕಾಣಿಸಿಕೊಂಡಿದ್ದರು.
ಭೋಜಪುರಿ ಸಿನಿಮಾದಲ್ಲಿಯೂ ಅಭಿನಯಿಸಿದ ಯುಕ್ತಿ ಕಪೂರ್ ಇದೀಗ 2020 ರಿಂದ ಪ್ರಸಾರವಾಗುತ್ತಿರುವ ಮೇಡಂ ಸರ್ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಸಾಮಾನ್ಯವಾಗಿ ಹಿಂದಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಮೇಡಂ ಸರ್ ಎಂದು ಗೌರವ ನೀಡಲಾಗುತ್ತೆ. ಇದೇ ಹೆಸರನ್ನು ಇಟ್ಟುಕೊಂಡು ಈ ಧಾರಾವಾಹಿ ಮಾಡಲಾಗಿದ್ದು ಯುಕ್ತಿ ಕಪೂರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಧಾರವಾಹಿಯಲ್ಲಿ ಯುಕ್ತಿ ಕಪೂರ್ ಅವರದ್ದು ಡಬಲ್ ರೋಲ್. ಸೋನಿ ಸಾಬ್ ಹಾಗೂ ಕರಿಷ್ಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ದ್ವಿಪಾತ್ರವನ್ನು ಜನ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಯುಕ್ತಿ ಕಪೂರ್ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟಿವ್ ಆಗಿರುತ್ತಾರೆ. ಅವರಿಗೆ ಸಾಕಷ್ಟು ಫಾಲೋವರ್ಸ್ ಇದ್ದು, ಅವರ ವಿಡಿಯೋಗಳಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತದೆ.
ಇತ್ತೀಚಿಗೆ ಮೇಡಂ ಸರ್ ಧಾರಾವಾಹಿ ಚಿತ್ರೀಕರಣದ ಸಮಯದಲ್ಲಿ ತನ್ನ ಕೋ ಆರ್ಟಿಸ್ಟ್ ಜೊತೆಗೆ ಯುಕ್ತಿ ಕಪೂರ್ ಹೂ ಅಂಟಾವಾ ಮಾಮಾ ಊಹೂಂ ಅಂಟಾವಾ ಎನ್ನುವ ಹಾಡಿನ ಮ್ಯೂಸಿಕ್ ಗೆ ಹೆಜ್ಜೆ ಹಾಕಿದ್ದಾರೆ. ಯುಕ್ತಿ ಕಪೂರ್ ಜೊತೆ ಗುಲ್ಕಿ ಜೋಷಿ ಹಾಗೂ ಕವಿತಾ ಕೌಶಿಕ್ ಕೂಡ ಮೇಡಂ ಸರ್ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು ಚಿತ್ರೀಕರಣದ ವೇಳೆ ಈ ಮೂವರು ಸೇರಿ ನೃತ್ಯ ಮಾಡಿದ್ದಾರೆ.
ಇದರ ಶಾರ್ಟ್ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಯುಕ್ತಿ ಕಪೂರ್ ಹಂಚಿಕೊಂಡಿದ್ದು ಈಗಾಗಲೇ ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಸೌಂಡ್ ಮಾಡುತ್ತಿದೆ ಈ ವಿಡಿಯೋ. ಯುಕ್ತಿ ಕಪೂರ್ ಅವರ ಯುಕ್ತಿಸ್ ಬ್ಯೂಟಿಫುಲ್ ವರ್ಲ್ಡ್ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಅವರ ಇಂತಹ ಸಾಕಷ್ಟು ವಿಡಿಯೋಗಳನ್ನು ನೀವು ನೋಡಬಹುದು.