ಪೈಲ್ವಾನ್ ಗಳ ಜೊತೆ ಕುಸ್ತಿಗೆ ಇಳಿದ ಆರ್ಯವರ್ಧನ್ ಗುರೂಜಿಯನ್ನು ಎತ್ತಿ ಹೊರಗೆ ಹಾಕಿದ ಪೈಲ್ವಾನ್ ಗಳು! ಬೆಚ್ಚಿಬಿದ್ದ ಪ್ರೇಕ್ಷಕರು!!

ಸುದ್ದಿ

ಬಿಗ್ ಬಾಸ್ ಸೀಸನ್ 9ರ 2ನೇ ವಾರ ನಡೆಯುತ್ತಿದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಇರುವ ಎಲ್ಲಾ ಸ್ಪರ್ಧಿಗಳು ವಿಶೇಷ ಟ್ಯಾಲೆಂಟ್ ಹೊಂದಿದ್ದಾರೆ ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಮನೋರಂಜನೆಗೆ ಕೊರತೆ ಇಲ್ಲ ಇನ್ನು ಬಿಗ್ ಬಾಸ್ ಮನೆ ಅಂದ್ರೆ ಅಲ್ಲಿ ಹೆಚ್ಚಿನ ಆಕರ್ಷಣೆ ಹಾಗೂ ಶಕ್ತಿ ಇರುವುದು ಅಡುಗೆ ಮನೆಯಲ್ಲಿ. ಅಡುಗೆಯನ್ನು ಯಾರು ಚೆನ್ನಾಗಿ ಮಾಡಿ ಹಾಕುತ್ತಾರೋ ಅವರು ಜಾಸ್ತಿ ದಿನ ಮನೆಯಲ್ಲಿ ಉಳಿದುಕೊಳ್ಳುತ್ತಾರೆ ಎನ್ನುವುದು ಬಿಗ್ ಬಾಸ್ ಮನೆಯ ಸಂಪ್ರದಾಯವೇ ಆಗಿಬಿಟ್ಟಿದೆ.

ಇದೀಗ ಅಡುಗೆ ಮನೆಯ ಚಾರ್ಜ್ ತೆಗೆದುಕೊಂಡಿರುವುದು ಆರ್ಯವರ್ಧನ್ ಗುರೂಜಿ. ಹೌದು, ದೊಡ್ಮನೆಯಲ್ಲಿ ಎಲ್ಲರಿಗೂ ಅಡುಗೆ ಮಾಡಿ ಕೊಡುತ್ತಾ ಎಲ್ಲರ ಪ್ರಶಂಸೆ ಗಿಟ್ಟಿಸಿಕೊಳ್ಳುವಲ್ಲಿ ಆರ್ಯವರ್ಧನ್ ಗುರೂಜಿ ಯಶಸ್ವಿಯಾಗಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ಅಡುಗೆ ಎಲ್ಲಾ ಸ್ಪರ್ಧಿಗಳಿಗೂ ಬಹಳ ಹಿಡಿಸುತ್ತೆ. ಎಲ್ಲಾ ಪದಾರ್ಥಗಳು ಇಲ್ಲದೆ ಇದ್ದರೂ ಇದ್ದುದರಲ್ಲಿಯೇ ಅಚ್ಚುಕಟ್ಟಾಗಿ ಆರ್ಯವರ್ಧನ ಅವರು ಅಡುಗೆ ಮಾಡುತ್ತಿದ್ದಾರೆ.

ಅನ್ನ ಸಾಂಬಾರ್ ಇಲ್ಲದೇ ಇದ್ರೆ ನಾನು ಊಟವನ್ನೇ ಮಾಡಲ್ಲ ಅಂತ ಆರ್ಯವರ್ಧನ್ ಕುಳಿತಿದ್ದಾಗ ಅವರನ್ನು ರಾಕೇಶ್ ಊಟಕ್ಕೆ ಕರೆದುಕೊಂಡು ಬಂದಿದ್ದಾರೆ ಇನ್ನೊಂದು ಕಡೆ ಆರ್ಯವರ್ಧನ್ ಅವರು ಎಗ್ ರೈಸ್ ಮಾಡಿ ಮನೆಯವರನ್ನ ಇಂಪ್ರೆಸ್ ಮಾಡಿದ್ದಾರೆ. ವೆಜ್ ತಿನ್ನುವ ಆರ್ಯವರ್ಧನ್ ಅವರು ಎಗ್ ರೈಸ್ ಮಾಡಿದ್ರಾ ಅಂತ ನಿಮಗೆ ಆಶ್ಚರ್ಯವಾಗಬಹುದು ಹೌದು ಅವರು ಎಗ್ ರೈಸ್ ಮಾಡಿದ್ದಾರೆ ಆದರೆ ಇದರಲ್ಲಿ ಎಗ್ ಇರಲಿಲ್ಲ.

ಹೌದು ಮೊಟ್ಟೆ ಇಲ್ಲದೆ ಎಗ್ ರೈಸ್ ಮಾಡಿದ ಮೊದಲ ವ್ಯಕ್ತಿ ಆರ್ಯವರ್ಧನ್ ಗುರೂಜಿ ಅಂತ ಮನೆಯ ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ಈ ರೆಸಿಪಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಾನಿಯಾ ಅಯ್ಯರ್, ಎಗ್ ಇಲ್ಲದೆ ಎಗ್ ರೈಸ್ ಮಾಡಿದ ಏಕೈಕ ವ್ಯಕ್ತಿ ಅಂದ್ರೆ ಅದು ಮೊಟ್ಟೆವರ್ಧನ ಅಂತ ತಮಾಷೆ ಮಾಡಿದ್ದಾರೆ. ಇದಕ್ಕೆ ತನ್ನ ಬೋಳು ತಲೆಯನ್ನು ಸವರಿ ಕೊಳ್ಳುತ್ತಾ ಆರ್ಯವರ್ಧನ್ ಗುರೂಜಿ ಕೂಡ ನಕ್ಕಿದ್ದಾರೆ.

ಇನ್ನು ರಾಕೇಶ್ ಕೂಡ ಇಲ್ಲದೆ ಜಗತ್ತಿನಲ್ಲಿ ಯಾರಾದರೂ ಮಾಡುತ್ತಾರೆ ಅಂದರೆ ಅದರಲ್ಲೂ ಅವರು ಬದುಕಿದ್ದಾರೆ ಅಂದ್ರೆ ಅದು ಕೇವಲ ಆರ್ಯವರ್ಧನ್ ಗುರೂಜಿ ಅಂತ ಜೋರಾಗಿ ಹೇಳಿದ್ದಾರೆ. ಇನ್ನು ರೆಸಿಪಿಯನ್ನು ಕೂಡ ಆರ್ಯವರ್ಧನ್ ಗುರೂಜಿ ಹಂಚಿಕೊಂಡಿದ್ದಾರೆ. ಉದುರುದುರಾಗಿ, ಹದವಾದ ಅನ್ನ ಮಾಡಿಕೊಳ್ಳಬೇಕು. ಅದಕ್ಕೆ ಪೆಪ್ಪರ್ ಪೌಡರ್ ಹಾಕಬೇಕು ಅಂತ ಉದ್ದವಾದ ರೆಸಿಪಿಯನ್ನೇ ಹೇಳಿದ್ದಾರೆ.

ಇನ್ನು ಆರ್ಯವರ್ಧನ್ ಅವರು ರೂಪೇಶ್ ಅವರಿಗೆ ಮಗನ ಸ್ಥಾನವನ್ನು ಕೊಟ್ಟಿದ್ದಾರೆ. ಅಡುಗೆಯಲ್ಲಿ ಮಗನ ಪ್ರೀತಿಯನ್ನೂ ಬೆರೆಸಿ ರುಚಿಕರವಾಗಿ ತಯಾರಿಸಿದ್ದೇನೆ ಅಂತ ಗುರೂಜಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಟಾಸ್ಕ್ ಗಳಲ್ಲಿ ಹೆಚ್ಚು ಪರ್ಫಾರ್ಮೆನ್ಸ್ ನೀಡದೇ ಇದ್ದರೂ ಕೂಡ ಆರ್ಯವರ್ಧನ ಗುರೂಜಿ ಅವರು ತಮ್ಮ ಅಡುಗೆ ಮನೆಯಲ್ಲಿನ ಕೈಚಳಕದಿಂದಲೇ ಸ್ಪರ್ಧಿಗಳ ಅಭಿಮಾನ ಗಿಟ್ಟಿಸಿಕೊಂಡಿದ್ದಾರೆ.

ಬಿಗ್ ಬಾಸ್ ಒಟಿಟಿ ಕನ್ನಡ ವರ್ಷನ್ ನಲ್ಲಿ ಭಾಗವಹಿಸಿ, ಒಂದು ತಿಂಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು, ಟಾಪ್ 4ನಲ್ಲಿ ಕಾಣಿಸಿಕೊಂಡ ಆರ್ಯವರ್ಧನ್ ಗುರುಜೀ ಈಗ ಮತ್ತೆ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ. ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರುವ ಆರ್ಯವರ್ಧನ್ ಗುರೂಜಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *