ಇತ್ತೀಚಿಗೆ ಸಿನಿಮಾದಲ್ಲಿ ಹಾಗೂ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕೆಲವು ನಟರ ಅಗಲುವಿಕೆ ಅಭಿಮಾನಿಗಳಿಗೆ ಸಾಕಷ್ಟು ನೋವನ್ನು ತಂದಿದೆ. ಇದೀಗ ಸೂರ್ಯವಂಶಿ ಖ್ಯಾತಿಯ ನಟ ಸಿದ್ಧಾಂತ್ ನಿಧನರಾಗಿದ್ದಾರೆ. ಇವರದ್ದು ಸಾಯುವಷ್ಟು ವಯಸ್ಸೂ ಅಲ್ಲ, ಜೊತೆಗೆ ಯಾವ ಅನಾರೋಗ್ಯವೂ ಇರಲಿಲ್ಲ.. ಸಿದ್ಧಾಂತ್ ಅವರ ಈ ಆಕಸ್ಮಿಕ ಸಾವು ಚಿತ್ರರಂಗಕ್ಕೆ ನೋವನ್ನು ತಂದಿದೆ.
ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ, ಇಂದು ಅಂದರೆ ನವೆಂಬಎ 11ರಂದು ಹೃದಯಾಘಾತದಿಂದ ಮುಂಬೈನಲ್ಲಿ ನಿ-ಧನರಾಗಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಸಿದ್ಧಾಂತ್ ಅವರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದರು. ಆಯಾಸವಾಗಿರಬಹುದು ಎಂದು ಎಲ್ಲರೂ ಭಾವಿಸಿದರು. ಆದರೆ ಅವರಿಗೆ ಹೃದಯಾಘಾತವಾಗಿತ್ತು.
ಈ ವಿಷಾದನೀಯ ಸಂಗತಿಯನ್ನು ನಿರೂಪಕ ಜಯ್ ಭಾನ್ಶುಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು. ಸಿದ್ಧಾಂತ್ ಅವರ ನಿ-ಧನಕ್ಕೆ ಅತಿವ ಸಂತಾಪ ಸೂಚಿಸಿದ್ದಾರೆ. ನಿರೂಪಕ ಜಯ್ ಭಾನ್ಶುಲಿ ಅವರು ಸಿದ್ಧಾಂತ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಬೇಗ ನಮ್ಮನ್ನ ಬಿಟ್ಟು ಹೋದ್ರಿ’ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ಡಾರೆ.
ಸಾಕಷ್ಟು ಸೆಲೆಬ್ರಿಟಿಗಳು, ಕಲಾವಿದರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಿದ್ಧಾಂತ್ ಇಹಲೋಕ ತ್ಯಜಿಸಿದ್ದಕ್ಕೆ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾಂತ್ ಅವರಿಗೆ ಕೇವಲ 46 ವರ್ಷವಯಸ್ಸಾಗಿತ್ತು. ಒಬ್ಬ ನಟ ಮಾತ್ರವಲ್ಲದೇ ಮಾಡೆಲ್ ಕೂಡ ಆಗಿದ್ದ ಸಿದ್ಧಾಂತ್ ಸೂರ್ಯವಂಶಿ ಅವರು ಆನಂದ್ ಸೂರ್ಯವಂಶಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು.
ಸೂರ್ಯವಂಶಿಯವರು ಸಾಕಷ್ಟು ಧಾರಾವಾಹಿಗಳಲ್ಲಿ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ಡಾರೆ. ಕಸೂತಿ ಜಿಂದಗಿ ಕೇ, ಕೃಷ್ಣ ಅರ್ಜುನ್, ಕ್ಯಾ ದಿಲ್ ಮೇ ಹೇ ಈ ಮೊದಲಾದ ಖ್ಯಾತ ಧಾರಾವಾಹಿಗಳಲ್ಲಿ ಸಿದ್ಧಾಂತ್ ನಟಿಸಿದ್ದಾರೆ. ಕ್ಯೂ ರಿಸ್ತೋ ಮೇ ಕಟ್ಟಿ ಬಟ್ಟಿ, ಜಿದ್ದಿ ದಿಲ್ ಈ ಪ್ರಾಜೆಕ್ಟ್ ಗಳನ್ನು ಅರ್ಧದಲ್ಲಿಯೇ ಬಿಟ್ಟು ಸಿದ್ಧಾಂತ್ ಇಹಲೋಕ ತ್ಯಜಿಸಿದ್ದಾರೆ.
ಇನ್ನು ಸಿದ್ಧಾಂತ್ ವಯಕ್ತಿಕ ಬದುಕನ್ನು ನೋಡಿವುದಾದರೆ, 2015ರಲ್ಲಿ ಇರಾ ಎನ್ನುವವರ ಜೊತೆ ಸಿದ್ಧಾಂತ್ ಮದುವೆಯಾಗಿತ್ತು. ಆ ನಂತರದಲ್ಲಿ ಸಿದ್ದಾಂತ್ ಇರಾ ಇಂದ ವಿ-ಚ್ಛೇದನ ಪಡೆದಿದ್ದರು. ಬಳಿಕ 2017ರಲ್ಲಿ ಅಲೆಶಿಯಾ ಎನ್ನುವ ಹುಡುಗಿ ಜೊತೆ ಸಿದ್ಧಾಂತ್ ವಿವಾಹ ನೆರವೇರಿತ್ತು. ಮೊದಲ ಹೆಂಡತಿಗೆ ಒಬ್ಬಳು ಮಗಳಿದ್ದಾಳೆ. ಸಿದ್ಧಾಂತ್ ಎರಡನೇ ಪತ್ನಿ ಅಲೆಶಿಯಾಗೂ ಇದು ಎರಡನೇ ಮದುವೆ. ಅಲೆಶಿಯಾಗೂ ಕೂಡ ಮೊದಲ ಮದುವೆಯಾಗಿ ಒಬ್ಬ ಮಗ ಇದ್ದಾನೆ. ಇದೀಗ ತಮ್ಮ ಕುಟುಂಬದವರನ್ನು ಬಿಟ್ಟು ಸಿದ್ಧಾಂತ್ ಚಿರ ನಿದ್ದೆಗೆ ಜಾರಿದ್ದಾರೆ.