PhotoGrid Site 1659941951357

ಪುನೀತ್ ರಾಜಕುಮಾರ್ ಸಾವು ದೊಡ್ಮನೆಗೆ ಮಾತ್ರ ಸೂತಕ ಅಲ್ಲ, ಅದು ನಮ್ಮ ಮನೆಗೂ ಕೂಡ ಸೂತಕ ಇದ್ದಹಾಗೆ ಎಂದ ನಟ ದರ್ಶನ್! ದೊಡ್ಮನೆ ಬಗ್ಗೆ ಜಗಮೆಚ್ಚುವ ಮಾತನಾಡಿದ ಡಿಬಾಸ್ ಅಸಲಿ ವಿಡಿಯೋ ಇಲ್ಲಿದೆ ನೋಡಿ!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅದೆಷ್ಟು ಸ್ಟಾರ್ ನಟರು ಇದ್ದರೂ ಕೂಡ ಎಲ್ಲರಿಗೂ ಇಷ್ಟವಾಗುವುದು ಹಾಗೂ ಮೊದಲಿಗೆ ನೆನಪಾಗೋದು ನಟ ದರ್ಶನ್ ಅವರ ಹೆಸರು. ತೆರೆ ಮೇಲೆ ಒಬ್ಬ ಹೀರೋ ಆಗಿ ಮಿಂಚುವುದು ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಕೂಡ ದರ್ಶನ್ ಅವರು ಒಬ್ಬ ನಾಯಕ. ಅವರ ಸರಳ ವ್ಯಕ್ತಿತ್ವ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಅಂದ್ರೆ ತಪ್ಪಾಗಲ್ಲ. ನೋಡೋದಕ್ಕೆ ರಫ್ ಅಂಡ್ ಟಫ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜಕ್ಕೂ ಮಗುವಿನ ಮನಸ್ಸು ಉಳ್ಳವರು.

ಎಲ್ಲರ ಬಗ್ಗೆ ಪ್ರೀತಿ, ವಿಶ್ವಾಸ ಬೆಳೆಸಿಕೊಂಡ ನಟ ದರ್ಶನ್ ಹಲವರಿಗೆ ಮಾದರಿಯೂ ಹೌದು. ಇಂದು ಅವರ ಎಲ್ಲ ಚಿತ್ರವು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದಕ್ಕೆ ಅವರ ರಾಜ ಗಾಂಭೀರ್ಯದ ಅಭಿನಯ, ನಡತೆಯೇ ಸಾಕ್ಷಿ. ಡಿ ಬಾಸ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಕನ್ನಡ ನಾಡಿನಲ್ಲಿ ಅವರಿಗೆ ವಿಶೇಷವಾದ ಗೌರವ ಪ್ರೀತಿ ಇದೆ ಅದರಲ್ಲೂ ದರ್ಶನ್ ಅಭಿಮಾನಿಗಳು ದರ್ಶನ್ ಅವರನ್ನು ಎಂತಹ ಸಂದರ್ಭದಲ್ಲಿ ಬಿಟ್ಟು ಕೊಡುವುದಿಲ್ಲ.

ಉದಾಹರಣೆಗೆ ದರ್ಶನ್ ಅವರ ಕ್ರಾಂತಿ ಸಿನಿಮಾ ಇನ್ನೇನು ತೆರೆ ಕಾಣಲಿದೆ ದೇಶ ವಿದೇಶಗಳಲ್ಲಿ ಚಿತ್ರೀಕರಣ ಮುಗಿಸಿ ಕ್ರಾಂತಿ ಸಿನಿಮಾ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನು ದರ್ಶನ್ ಅವರ ಸಿನಿಮಾವನ್ನು ನಾವು ಪ್ರಮೋಷನ್ ಮಾಡುವುದಿಲ್ಲ ಅಂತ ಹಲವು ಮಾಧ್ಯಮಗಳು ಹೇಳಿದ್ದವು. ಆದರೆ ಇದಕ್ಕೆಲ್ಲ ತಲೆ ಕೊಡಿಸಿಕೊಳ್ಳುವ ಜಾಯಮಾನ ದರ್ಶನ್ ಅಭಿಮಾನಿಗಳದ್ದಲ್ಲ. ಯಾವ ಮೀಡಿಯಾ ಇಲ್ಲದಿದ್ದರೆ ಏನು? ನಾವೇ ದರ್ಶನ್ ಅವರ ಸಿನಿಮಾವನ್ನ ಪ್ರಮೋಷನ್ ಮಾಡ್ತೀವಿ ಅಂತ ಟೊಂಕ ಕಟ್ಟಿ ನಿಂತಿದ್ದಾರೆ ದರ್ಶನ್ ಅಭಿಮಾನಿಗಳು.

ಅಷ್ಟರ ಮಟ್ಟಿಗೆ ದರ್ಶನ್ ಕನ್ನಡಿಗರ ನಡುವೆ ಬೆರೆತು ಹೋಗಿದ್ದಾರೆ. ಇನ್ನು ದಾಸ ದರ್ಶನ್ ಎಲ್ಲರಿಗೂ ಸಮಾನವಾದ ಮರ್ಯಾದೆ ಗೌರವವನ್ನು ನೀಡುತ್ತಾರೆ ಅವರ ದೃಷ್ಟಿಯಲ್ಲಿ ಕಲಾವಿದರು ಎಲ್ಲರೂ ಒಂದೇ ಅವನು ಹೆಚ್ಚು ಅವನು ಕಡಿಮೆ ಎನ್ನುವುದೇ ಇಲ್ಲ. ಪುನೀತ್ ರಾಜಕುಮಾರ್ ಹಾಗೂ ದರ್ಶನ್ ಅವರ ನಡುವೆ ಅತ್ಯಂತ ಉತ್ತಮವಾದ ಬಾಂಧವ್ಯವಿತ್ತು ಪುನೀತ್ ರಾಜಕುಮಾರ್ ನಮನ ಅಗಲಿದಾಗ ಹೆಚ್ಚು ದುಃಖ ಪಟ್ಟವರಲ್ಲಿ ದರ್ಶನ್ ಕೂಡ ಒಬ್ಬರು.

ಪುನೀತ್ ಅವರ ವಿಷಯ ಗೊತ್ತಾಗುತ್ತಿದ್ದ ಹಾಗೆ ಎಲ್ಲಿಂದಲೂ ಓಡೋಡಿ ಬಂದ ದರ್ಶನ್ ಕಣ್ಣೀರಿಟ್ಟರು ಸಾಕಷ್ಟು ಸಮಯ ಸ್ಥಳದಲ್ಲೇ ಇದ್ದು ದರ್ಶನ್, ಪುನೀತ್ ಅವರ ಮನೆಯವರಿಗೆ ಸಾಂತ್ವನವನ್ನು ಹೇಳಿದರು. ಅಷ್ಟೇ ಅಲ್ಲ ಸ್ನೇಹಿತರೆ, ದೊಡ್ಮನೆ ಬಗ್ಗೆ ದರ್ಶನ್ ಅವರಿಗೆ ಎಂತಹ ಅಭಿಮಾನ ಇದೆ ಅನ್ನೋದನ್ನ ನಾವು ನಿಮಗೆ ತಿಳಿಸ್ತೀವಿ. ಪುನೀತ್ ರಾಜಕುಮಾರ್ ತೀರಿಕೊಂಡಾಗ ದರ್ಶನ್ ಅವರು ಕ್ರಾಂತಿ ಶೂಟಿಂಗ್ ನಲ್ಲಿ ಇದ್ದರು.

ಬೇರೆಯವರಾಗಿದ್ದರೆ ಪುನೀತ್ ರಾಜಕುಮಾರ್ ಅವರ ತೀರಿಕೊಂಡ ನಂತರ ಕಣ್ಣೀರು ಹಾಕಿ ಮತ್ತೆ ಪುನಃ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರೋ ಏನೋ! ಆದರೆ ದರ್ಶನ್ ಹಾಗೆ ಮಾಡಲಿಲ್ಲ ‘ದೊಡ್ಮನೆ ನಮ್ಮನ್ನ ಬೆಳೆಸಿದೆ ಹಾಗಾಗಿ ದೊಡ್ಡಮನೆಗೆ ಸೂತಕ ಅಂದ್ರೆ ನಮಗೂ ಸೂತಕವೇ. ಹಾಗಾಗಿ 11 ದಿನಗಳ ಕಾಲ ಯಾವುದೇ ಚಿತ್ರೀಕರಣವನ್ನು ಮಾಡುವುದು ಬೇಡ ನಿಲ್ಲಿಸಿ’ ಅಂತ ಚಿತ್ರತಂಡಕ್ಕೆ ಹೇಳಿದ್ದರೂ ದರ್ಶನ್. ಇದೆ ಅಲ್ವೇ ಒಬ್ಬ ಕಲಾವಿದನಲ್ಲಿ ಇರಬೇಕಾದ ಗುಣ.

ಇದರಿಂದಲೇ ದರ್ಶನ್ ಅವರ ಸ್ವಭಾವ ಗೊತ್ತಾಗುತ್ತೆ ಇನ್ನೊಬ್ಬ ಕಲಾವಿದನಿಗೆ ಯಾವ ರೀತಿ ಗೌರವವನ್ನು ಸೂಚಿಸಬೇಕು ಅನ್ನೋದು ದರ್ಶನ್ ಅವರಿಗೆ ಚೆನ್ನಾಗಿ ಗೊತ್ತು ಅದರಲ್ಲೂ ಅತ್ಯಂತ ಪ್ರೀತಿಯ ಗೆಳೆಯನಾಗಿದ್ದ ಪುನೀತ್ ರಾಜಕುಮಾರ್ ಅವರು ತೀರಿಕೊಂಡಾಗ ದರ್ಶನ್ ತಮ್ಮ ಕೆಲಸವನ್ನೇ ನಿಲ್ಲಿಸಿ, ಅವರ ಬಗ್ಗೆ ಇರುವ ಪ್ರೀತಿಯನ್ನು, ಗೌರವವನ್ನು ತೋರಿಸಿದ್ದಾರೆ. ದರ್ಶನ್ ಅವರು ಮತ್ತೆ ಮತ್ತೆ ಇಷ್ಟವಾಗುವುದಕ್ಕೆ ಇಂತಹ ಘಟನೆಗಳು ನಿಜಕ್ಕೂ ಪುಷ್ಟಿ ನೀಡುತ್ತವೆ.

Leave a Reply

Your email address will not be published. Required fields are marked *