PhotoGrid Site 1668398660707

ಪುನೀತ್ ರಾಜಕುಮಾರ್ ಅವರು ಪೂಜೆ ಮಾಡುವಾಗ ಪೂಜಾರಿಯ ಬಳಿ ಹೇಳಿದ್ದೇನು ಗೊತ್ತಾ? ಸಿಕ್ಕಾಪಟ್ಟೆ ವೈರಲ್ ಆಯ್ತು ವಿಡಿಯೋ ನೋಡಿ!!

ಸುದ್ದಿ

ಅವರ ಸ್ಟಾರ್ ಪುನೀತ ರಾಜಕುಮಾರ ಅವರ ವ್ಯಕ್ತಿತ್ವವೇ ಹಾಗೆ. ಎಲ್ಲರೂ ಕೈ ಎತ್ತಿ ಮುಗಿಯುವಂಥದ್ದು. ದೊಡ್ಮನೆ ಕುಟುಂಬದ ಕುಡಿ ಪುನೀತ್ ರಾಜಕುಮಾರ್ ಅವರು ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ ಅವರು ನಿಜ ಜೀವನದಲ್ಲಿಯೂ ಕೂಡ ಒಬ್ಬ ನಾಯಕ. ಯಾಕಂದ್ರೆ ಅಷ್ಟು ಅದ್ಭುತ ವ್ಯಕ್ತಿತ್ವ ಅವರದ್ದಾಗಿತ್ತು. ತಾನು ಸ್ಟಾರ್ ನಟ ಎಂದು ಯಾವತ್ತೂ ಬೀಗಲಿಲ್ಲ.

ಬದಲಿಗೆ ಸಾಮಾನ್ಯರ ಜೊತೆ ಸಾಮಾನ್ಯರಾಗಿಯೇ ಇದ್ದು ಎಲ್ಲರಿಗೂ ಖುಷಿ ನೀಡುವಂತಹ ವ್ಯಕ್ತಿತ್ವ ಅವರದ್ದು. ಹೌದು, ಅಪ್ಪು ಅವರನ್ನು ಕಳೆದುಕೊಂಡ ನಾವು ನಿಜಕ್ಕೂ ದುರಾದೃಷ್ಟವಂತರೇ ಸರಿ. ಇನ್ನು ಅತಿಯಾಗಿ ಪ್ರೀತಿಸುವ ಪತಿಯನ್ನು ಕಳೆದುಕೊಂಡು ನೋವಿನ ನಡುವೆಯೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ಅವರ ಎಲ್ಲಾ ಜವಾಬ್ದಾರಿಗಳನ್ನು ವಿಭಾಯಿಸುತ್ತಿದ್ದಾರೆ.

ಅಪ್ಪು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ ನಮ್ಮ ಆಲೋಚನೆಗಳು, ನಾವು ಮಾಡುವ ಉತ್ತಮ ಕಾರ್ಯಗಳಲ್ಲಿಯೂ ಸದಾ ಜೀವಂತವಾಗಿರುತ್ತಾರೆ ಎಂದು ಅಶ್ವಿನಿ ಭಾವುಕರಾಗಿ ಪುನೀತ್ ಅವರ ಪುಣ್ಯ ಸ್ಮರಣೆಯ ಸಮಯದಲ್ಲಿ ಮಾತನಾಡಿದರು. ಅಪ್ಪು ಅವರಿಗೆ ನವೆಂಬರ್ ಒಂದರಂದು ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಲಾಗಿದೆ.

ಅಪ್ಪು ಅವರ ಪತ್ನಿ ಅಶ್ವಿನಿ ವಿಧಾನಸೌಧದ ಎದುರು ನೀಡಲಾಗಿದ್ದ ಈ ಗೌರವವನ್ನು ಪರವಾಗಿ ಸ್ವೀಕರಿಸಿದರು. ಹೌದು ಅಪ್ಪು ಇಂದು 10ನೆಯ ಕರ್ನಾಟಕ ರತ್ನ ಪ್ರಶಸ್ತಿ ಪಡೆದುಕೊಂಡ ಮಹಾನ ವ್ಯಕ್ತಿ. ಅಪ್ಪು ಫೋಟೋದ ಎದುರು ಈ ಪ್ರಶಸ್ತಿಯನ್ನು ಇಟ್ಟು ಅಶ್ವಿನಿ ಹಾಗೂ ಅವರ ಪುತ್ರಿ ವಂದಿತ ನಿಂತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇದು ಕೇವಲ ಭಾವಚಿತ್ರವಲ್ಲ ಭಾವನೆ ತುಂಬಿದ ಕನ್ನಡಿಯಂತೆ ಇತ್ತು. ವೈರಲ್ ಅದ ಈ ಫೋಟೋಕ್ಕೆ ಅಭಿಮಾನಿಗಳು ಸಾಕಷ್ಟು ಕಮೆಂಟ್ ಮಾಡಿದ್ದರು. ಅಪ್ಪು ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ಕೂಡ ಅವರು ಈ ಹಿಂದೆ ಹೇಗೆ ಇದ್ದರೂ ಎನ್ನುವುದನ್ನು ತೋರಿಸುವಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ದೊಡ್ಡವರಿಗೆ ಗೌರವ ಕೊಡಬೇಕು ಚಿಕ್ಕವರನ್ನ ಪ್ರೀತಿಸಬೇಕು ಎಂದು ಬಲವಾಗಿ ನಂಬಿದ ಪುನೀತ್ ರಾಜಕುಮಾರ್ ಅವರು ದೇವರನ್ನು ಕೂಡ ಅಷ್ಟೇ ಭಕ್ತಿಯಿಂದ ಪೂಜಿಸುತ್ತಿದ್ದರು. ಈ ಹಿಂದೆ ದೇವಸ್ಥಾನ ಒಂದರಲ್ಲಿ ತಮ್ಮ ಕುಟುಂಬದ ಹೆಸರಿನಲ್ಲಿ ಪೂಜೆ ಮಾಡಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ತನ್ನ ಹೆಂಡತಿ ಮಕ್ಕಳ ಆರೋಗ್ಯ ಆಯಸ್ಸಿಗಾಗಿ ಪೂಜೆ ಮಾಡಿಸಿದ ಪುನೀತ್ ಅವರು ಮಕ್ಕಳ ರಾಶಿಯ ನಕ್ಷತ್ರ ಎಲ್ಲವನ್ನು ಹೇಳಿ ಅವರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ದೊಡ್ಡ ಸ್ಟಾರ್ ನಟ ಆಗಿದ್ರು ಕೂಡ ಅಪ್ಪು ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಸರದಿಯಲ್ಲಿ ನಿಂತು ಅರ್ಚನೆ ಮಾಡಿಸಿದ ಪರಿ ಮನೋಜ್ಞವಾಗಿತ್ತು. ಅಪ್ಪು ಅವರ ಈ ವಿಡಿಯೋವನ್ನು ನೀವೆಲ್ಲಿ ನೋಡಬಹುದು. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *