ಸ್ನೇಹಿತರೆ, ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ವರ್ಷ ಕಳೆದರೂ ಎಲ್ಲಿಯೇ ಹೋದರು ಅವರ ನೆನಪುಗಳೆ ನಮ್ಮನ್ನ ಆವರಿಸಿಕೊಂಡು ಬಿಡುತ್ತವೆ. ಇಂದು ರಾಜ್ಯದ ಬೀದಿ ಬೀದಿಗಳಲ್ಲಿಯೂ ಪುನೀತ್ ಅವರ ಫೋಟೋಗಳನ್ನು ನೋಡಬಹುದು. ಫೋಟೋಗಳಲ್ಲಿ, ಪೋಸ್ಟರ್ ಗಳಲ್ಲಿ ನಗುವ ಆ ಮುಖವನ್ನು ನೋಡಿದರೆ ಎಲ್ಲರೂ ಭಾವ ಪರವಶರಾಗುತ್ತಾರೆ.
ಅಪ್ಪು ಇದ್ದಿದ್ರೆ ಇಂದು ಅದೆಷ್ಟು ಕಾರ್ಯಕ್ರಮಗಳಿಗೆ ಅವರನ್ನೇ ಅತಿಥಿಯಾಗಿ ಕರೆಸಲಾಗುತ್ತಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಇಂದು ಹಲವು ಕಾರ್ಯಕ್ರಮಗಳಿಗೆ ಅಶ್ವಿನಿ ಅವರು ಹೋಗಿ ಆ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟು ಬರುತ್ತಾರೆ. ಹೌದು, ಸಿನಿಮಾ ರಂಗದಲ್ಲೂ ಅಪ್ಪು ಅವರಿಗೆ ಎಷ್ಟು ಗೌರವ ಸ್ಥಾನಮಾನ ನೀಡುತ್ತಿದ್ದರೋ ಅಷ್ಟೇ ಅಶ್ವಿನಿ ಅವರನ್ನು ಕೂಡ ಬಹಳ ಗೌರವದಿಂದ ನೋಡಿಕೊಳ್ಳಲಾಗುತ್ತಿದೆ.
ಬಹುತೇಕ ಎಲ್ಲಾ ಸಿನಿಮಾ ಇವೆಂಟ್ ಗಳಲ್ಲಿಯೂ ಕೂಡ ಅಪ್ಪು ಅವರ ಪತ್ನಿ ಅಶ್ವಿನಿ ಅವರನ್ನು ಕರೆಯಿಸಲಾಗುತ್ತೆ. ಅಲ್ಲದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಯೂ ಅಶ್ವಿನಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರು ಮಾಡಬೇಕಾಗಿದ್ದ ಎಲ್ಲಾ ಕರ್ತವ್ಯಗಳನ್ನು ಅಶ್ವಿನಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಜವಾಬ್ದಾರಿಯುತವಾಗಿ ಆ ಕೆಲಸಗಳನ್ನು ಮಾಡುತ್ತಿದ್ದಾರೆ.
ಇತ್ತೀಚಿಗೆ ಡಯಾಗ್ನೋಸ್ಟಿಕ್ ಸೆಂಟರ್ ಅಂದರೆ ಉದ್ಘಾಟನೆಯಲ್ಲಿ ಅಶ್ವಿನಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶಾಸಕ ಆರ್ ಅಶೋಕ್ ಕೂಡ ಉಪಸ್ಥಿತರಿದ್ದರು. ಹೌದು, ಇತ್ತೀಚಿಗೆ ಸಾಯಿ ಸಂಗಮ ಡಯಾಗ್ನೋಸ್ಟಿಕ್ ಮತ್ತು ಹೆಲ್ತ್ ಸೆಂಟರ್ ನ ಉದ್ಘಾಟನೆಯನ್ನು ಆರ್ ಅಶೋಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಅಶ್ವಿನಿ ಮೇಡಂ ಕೂಡ ಜೊತೆಯಲ್ಲಿಯೇ ಇದ್ದರು. ಇನ್ನು ಉದ್ಘಾಟನೆಯ ನಂತರವೂ ಆರ್ ಅಶೋಕ್ ಅಶ್ವಿನಿ ಅವರ ಬಳಿ ಮಾತನಾಡಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಪ್ರಮುಖ ವಿಷಯವನ್ನು ಅಶ್ವಿನಿ ಅವರ ಜೊತೆ ಚರ್ಚೆ ಮಾಡಿದ್ದಾರೆ ಆ ವಿಷಯ ಏನು ಗೊತ್ತಾ?
ಹೌದು, ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ರಾಜ್ಯಾದ್ಯಂತ ಸಾಕಷ್ಟು ಕೆಲಸಗಳು ನಡೆಯುತ್ತಿವೆ ಅದೇ ರೀತಿ ಈಗ ರಸ್ತೆ ಒಂದಕ್ಕೆ ಪುನೀತ ರಾಜಕುಮಾರ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ ಹಾಗಾಗಿ ಇದರ ಉದ್ಘಾಟನೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕರೆಸುವುದಾಗಿ ಆರ್ ಅಶೋಕ್ ಹೇಳಿದ್ದಾರೆ.
ಇದಕ್ಕೆ ಅಶ್ವಿನಿ ಅವರು ಕೂಡ, ನಿಮಗೆ ಯಾರು ಸರಿ ಅನಿಸುತ್ತೋ ಅವರನ್ನ ಕರೆಸಿ, ನನಗೇನು ಸಮಸ್ಯೆ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಆರ್ ಅಶೋಕ್ ಪುನೀತ್ ರಾಜಕುಮಾರ್ ಅವರ ಹೆಸರಿರುವ ರೋಡ್ ನ ಉದ್ಘಾಟನೆಯನ್ನು ಬಹಳ ಅದ್ದೂರಿಯಾಗಿ ಮಾಡೋಣ ಎಂದು ಅಶ್ವಿನಿ ಅವರ ಬಳಿ ಹೇಳಿದ್ದಾರೆ. ಇದು ಪುನೀತ್ ಅವರ ಮೇಲಿನ ಅಭಿಮಾನವನ್ನು ತೋರಿಸುತ್ತದೆ. ಅಪ್ಪು ಎನ್ನುವ ವ್ಯಕ್ತಿತ್ವವೇ ಅಂತದ್ದು. ಎಲ್ಲರೂ ಅವರನ್ನ ಅಷ್ಟು ಪ್ರೀತಿ ಗೌರವದಿಂದ ಕಾಣುತ್ತಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.