ಹಬ್ಬ ಹರಿ ದಿನಗಳು ಅಂದ್ರೆ ಎಲ್ಲರಿಗೂ ಖುಷಿ. ಅದರಲ್ಲೂ ವಿಜಯದಶಮಿಯ ದಿನ ಆಯುಧ ಪೂಜೆ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಈ ದಿನ ಸೆಲೆಬ್ರಿಟಿಗಳ ಮನೆಯ ಮುಂದೆ ಅಲಂಕಾರಗೊಂಡ ಕಾರುಗಳನ್ನ ನೋಡುವುದೇ ಚೆಂದ. ಚಂದನವನದ ಬಹುತೇಕ ಎಲ್ಲಾ ಸಿನಿಮಾ ಸ್ಟಾರ್ ನಟರ ಮನೆಯಲ್ಲಿಯೂ ಕೂಡ ಅತ್ಯಂತ ವಿಜ್ರಂಭಣೆಯಿಂದ ಆಯುಧ ಪೂಜೆ ನೆರವೇರಿಸಲಾಗಿದೆ. ಇದಕ್ಕೆ ಪುನೀತ್ ಅವರ ಮನೆಯು ಹೊರತಾಗಿಲ್ಲ.
ಕನ್ನಡದ ಕಣ್ಮಣಿ, ನಮ್ಮ ಹೆಮ್ಮೆಯ ಯುವ ರಾಜಕುಮಾರ ಪುನೀತ್ ಅವರನ್ನ ನಾವಿಂದು ಕಳೆದುಕೊಂಡಿದ್ದೇವೆ. ಅದೆಷ್ಟೋ ಸಲ ಅಪ್ಪು ನಮ್ಮ ಜೊತೆ ಇದ್ರೆ ಚೆನ್ನಾಗಿತ್ತು ಅಂತ ಪ್ರತಿಯೊಬ್ಬರಿಗೂ ಅನ್ನಿಸುತ್ತಲೆ ಇರುತ್ತೆ. ಇಂದು ನಾವು ಅಪ್ಪುವನ್ನ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಯಾಕಂದ್ರೆ ಪುನೀತ್ ಅವರು ಕೂಡ ಆಯುಧ ಪೂಜೆಯ ದಿನ ತಮ್ಮ ಬಳಿ ಇರುವ ವಾಹನಗಳಿಗೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರು.
ನಿಜಕ್ಕೂ ಅದನ್ನು ನೋಡುವುದೇ ಒಂದು ಸಂಭ್ರಮ. ಆದರೆ ಈ ವರ್ಷವೂ ಕೂಡ ಪುನೀತ್ ಅವರ ಆಸೆಯಂತೆ ಅವರ ಮನೆಯಲ್ಲಿ ಅವರ ಪತ್ನಿ ಅಶ್ವಿನಿ ಆಯುಧ ಪೂಜೆ ನೆರವೇರಿಸಿದ್ದಾರೆ. ಹೌದು ಪುನೀತ್ ಅವರ ಅನುಪಸ್ಥಿತಿಯಲ್ಲಿಯೂ ಕೂಡ ಅವರ ನೆಚ್ಚಿನ ವಾಹನಗಳಿಗೆ ಅಶ್ವಿನಿ ಅವರು ಪೂಜೆ ಸಲ್ಲಿಸಿದ್ದಾರೆ. ಬಹಳ ಪ್ರೀತಿಸುತ್ತಿದ್ದ ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದರೂ ಕೂಡ ಪುನೀತ್ ಅವರ ಸಾಕಷ್ಟು ಉಳಿತು ಹೋದ ಕನಸುಗಳನ್ನು ನನಸಾಗಿಸುವಲ್ಲಿ ಅಶ್ವಿನಿ ತೊಡಗಿದ್ದಾರೆ.
ಅದರಂತೆ ಅಪ್ಪು ಅವರ ಕಾರುಗಳಿಗೆ ಪೂಜೆ ಮಾಡುವುದರ ಮೂಲಕ ಅಪ್ಪುವಿನ ಆತ್ಮಕ್ಕೆ ಸಂತಸವನ್ನು ನೀಡಿದ್ದಾರೆ ಅಶ್ವಿನಿ. ಪುನೀತ್ ಅವರು ಕಾರ್ ಪ್ರಿಯರು. ಹೊಸದಾದ ಯಾವುದೇ ಮಾಡಲು ಕಾರು ಅಥವಾ ಬೈಕ್ ಬಂದರು ಅದನ್ನ ಒಮ್ಮೆ ಓಡಿಸಿ ನೋಡಿ ಇಷ್ಟವಾದರೆ ಅದನ್ನು ಖರೀದಿ ಮಾಡುತ್ತಿದ್ದರಂತೆ. ಅದೆಷ್ಟು ಹೊಸ ಮಾದರಿಯ ಕಾರ್ ಗಳು ಬಿಡುಗಡೆಯಾದ ಕೂಡಲೇ ಮೊದಲು ಅಪ್ರೋಚ್ ಆಗುತ್ತಿದ್ದಂತೆ ಪುನೀತ್ ಅವರನ್ನು.
ಇನ್ನು ಪುನೀತ್ ಅವರ ಕಾರ್ಯಕ್ಕೆ ಪ್ರಶಾಂತ್ ಸಂಬರ್ಗಿ ಕೂಡ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಯಾವುದೇ ಹೊಸ ಮಾದರಿಯ ಕಾರಣ ನೋಡಿದರೂ ಕೂಡ ಪುನೀತ್ ಅದರನ್ನು ಓಡಿಸಲು ಇಷ್ಟಪಡುತ್ತಿದ್ದರು ಅಂತ ಸಂಬರ್ಗಿ ಹೇಳಿಕೊಂಡಿದ್ದಾರೆ. ಪುನೀತ್ ಅವರ ಬಳಿ ಬಹಳ ದುಬಾರಿಯ ಕಾರ್ ಕಲೆಕ್ಷನ್ ಇವೆ. ಹೋಂಡಾ, ಆಡಿ ಕಾರ್ ಗಳು ಮೊದಲಾದ ದುಬಾರಿ ಕಾರುಗಳನ್ನ ಪುನೀತ್ ಹೊಂದಿದ್ದರು.
ಇನ್ನು ಪುನೀತ್ ಅವರ ನೆಚ್ಚಿನ ಕಾರ್ ಒಂದನ್ನು ಪುನೀತ್ ಅವರ ಪತ್ನಿ ಅಶ್ವಿನಿ ಮುಂಬೈಗೆ ಕಳುಹಿಸಿದ್ದಾರೆ. ತನ್ನ ತಮ್ಮನಿಗೆ ಪುನೀತ್ ಅವರ ಕಾರನ್ನು ಅಶ್ವಿನಿ ನೀಡಿದ್ದಾರೆ. ಈ ವರ್ಷದ ಆಯುಧ ಪೂಜೆಯ ದಿನ ಪುನೀತ್ ಇಲ್ಲದ ಇದ್ದರೂ ಕೂಡ ಅವರ ಬಳಿ ಇದ್ದ ಎಲ್ಲಾ ಕಾರ್ ಹಾಗೂ ಬೈಕುಗಳಿಗೆ ಅಶ್ವಿನಿ ಪೂಜೆ ಸಲ್ಲಿಸಿದ್ದು ನಿಜಕ್ಕೂ ವಿಶೇಷವಾಗಿತ್ತು. ಪುನೀತ್ ಅವರು ಲಕ್ಕಿಮಾನ್ ಸಿನಿಮಾದಲ್ಲಿ ದೇವರ ಪಾತ್ರದಲ್ಲಿ ಅಭಿನಯಿಸಿ ನಿಜಕ್ಕೂ ಅಭಿಮಾನಿಗಳಿಗೆ ಮತ್ತೆ ದೇವರು ಎನಿಸಿದ್ದಾರೆ.
ಇನ್ನು ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಗಂಧದಗುಡಿ ಡಾಕ್ಯುಮೆಂಟರಿ ಕೂಡ ಇನ್ನೇನು ಸಿನಿಮಾದಂತೆಯೆ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಇಲ್ಲಿಯೂ ಕೂಡ ಅಶ್ವಿನಿ ಅವರು ಬಹಳ ಮುತುವರ್ಜಿ ವಹಿಸಿ ಚಿತ್ರ ತಂಡದೊಂದಿಗೆ ಸಮಾಲೋಚನೆ ನಡೆಸಿ ಪುನೀತ್ ಅವರ ಕನಸನ್ನ ನನಸು ಮಾಡಲು ಹೊರಟಿದ್ದಾರೆ. ಈಗಲೂ ಪುನೀತ್ ಅವರ ಆಸೆ ಕನಸುಗಳನ್ನು ಈಡೇರಿಸುವಲ್ಲಿ ತೊಡಗಿಕೊಂಡಿರುವ ಅಶ್ವಿನಿ ಅವರಿಗೆ ನಿಜಕ್ಕೂ ಕೈಮುಗಿಯಲೇಬೇಕು.