ಪುನೀತ್ ಅವರ ಮೂರ್ತಿಯನ್ನು ತನ್ನ ಆಫೀಸ್ ನಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡುವ ತೆಲುಗಿನ ದೊಡ್ಡ ಸ್ಟಾರ್ ನಟ ಯಾರು ಗೊತ್ತಾ? ಗ್ರೇಟ್ ಕಣ್ರೀ ನೋಡಿ!!

ಸುದ್ದಿ

ಕನ್ನಡ ಚಿತ್ರರಂಗ ಪುನೀತ್ ರಾಜಕುಮಾರ್ ಅಂತಹ ಅದ್ಭುತ ನಟನನ್ನು ಕಳೆದುಕೊಂಡು ನಿಜಕ್ಕೂ ಅನಾಥವಾಗಿದೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಕರುನಾಡೆ ಶೋಕದಲ್ಲಿ ಮುಳುಗಿದೆ. ಹೌದು ಇಂದು ನಾವು ಎಲ್ಲವನ್ನು ಮರೆತು ಮುಂದುವರೆಯುತ್ತಿದ್ದೇವೆ. ಆದರೂ ಪುನೀತ್ ಅವರ ನೆನಪು ಮಾತ್ರ ಶಾಶ್ವತವಾಗಿ ಉಳಿದಿರುತ್ತೆ. ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ, ಅವರ ಒಳ್ಳೆಯತನ, ಅವರ ಕೆಲಸ ಇವುಗಳ ಬಗ್ಗೆ ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಈಗಾಗಲೇ ಎಲ್ಲವೂ ನಿಮಗೆಲ್ಲರಿಗೂ ಗೊತ್ತಾಗಿದೆ.

ಪುನೀತ್ ರಾಜಕುಮಾರ್ ಅವರು ಕನ್ನಡದ ಕಣ್ಮಣಿ ಯುವ ರಾಜಕುಮಾರ ಎಂದೇ ಖ್ಯಾತರಾದವರು ಕೇವಲ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದು ಮಾತ್ರವಲ್ಲ ನಿಜ ಜೀವನದಲ್ಲಿ ಅದ್ಭುತ ಲೀಡರ್. ತಮ್ಮ ನಗು ಮುಖದಲ್ಲಿ ಎಲ್ಲರ ನೋವನ್ನು ಮರೆಸುವ ಶಕ್ತಿ ಪುನೀತ್ ಅವರಿಗಿತ್ತು. ಕನ್ನಡಿಗರು ಅಷ್ಟೇ ಅಲ್ಲ ಇತರ ಭಾಷಾ ಸಿನಿಪ್ರಿಯರು ಸೆಲೆಬ್ರಿಟಿಗಳು ಕೂಡ ಪುನೀತ್ ಅವರನ್ನು ಆರಾಧಿಸುತ್ತಾರೆ ಅಂದ್ರೆ ನೀವು ನಂಬಲೇಬೇಕು.

ಹೌದು ಪುನೀತ್ ಅವರಿಗೆ ಇದ್ದ ಸ್ನೇಹಿತರ ಬಳಗ ಅಷ್ಟಿಷ್ಟಲ್ಲ. ಲಕ್ಷಗಟ್ಟಲೆ ಅಭಿಮಾನಿಗಳು ಒಂದು ಕಡೆಯಾದರೆ ಪುನೀತ್ ಅವರನ್ನ ಫಾಲೋ ಮಾಡುತ್ತಿದ್ದ ಸೆಲೆಬ್ರಿಟಿಗಳು ಕೂಡ ಸಾಕಷ್ಟು ಮಂದಿ. ಅಪ್ಪು ಬೇರೆ ಭಾಷೆಯಲ್ಲಿ ಅಭಿನಯಿಸಲಿಲ್ಲ ನಿಜ. ಆದರೆ ಅವರನ್ನು ಬೇರೆ ಭಾಷೆಯ ಎಲ್ಲಾ ನಟರು ಕೂಡ ತುಂಬಾನೇ ಇಷ್ಟಪಡುತ್ತಿದ್ದರು. ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲಾ ಭಾಷೆಯ ಸ್ಟಾರ್ ನಟರ ಸ್ನೇಹ ಪುನೀತ್ ಅವರಿಗಿತ್ತು.

ಇಂದು ಯಾವುದೇ ವೇದಿಕೆಯಲ್ಲಿ ಯಾವುದೇ ಕಾರ್ಯಕ್ರಮ ಆರಂಭವಾಗುವ ಮೊದಲು ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಾರೆ ಇದು ಕನ್ನಡನಾಡಿಗೆ ಮಾತ್ರ ಸೀಮಿತವಾಗಿಲ್ಲ ಟಾಲಿವುಡ್ ನಲ್ಲಿಯೂ ಕೂಡ ಪುನೀತ್ ಅವರನ್ನು ಆರಾಧಿಸುವ ಅದೆಷ್ಟೋ ಜನರಿದ್ದಾರೆ. ಅವರು ಕೂಡ ಪುನೀತ್ ಅವರನ್ನ ತುಂಬಾನೇ ಪ್ರೀತಿಸುತ್ತಾರೆ.

ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಚಿರಂಜೀವಿ ಮೊದಲದ ಇತರ ಭಾಷಾ ಸ್ಟಾರ್ ನಟರು ಕೂಡ ಪುನೀತ್ ಅವರ ಸ್ನೇಹಿತರಾಗಿದ್ದು ಪುನೀತ್ ತೀರಿಕೊಂಡಾಗ ಅವರ ಸಮಾಧಿಯುತ್ತ ಎಲ್ಲರೂ ದೌಡಾಗಿದ್ದರು. ಇದೀಗ ಪುನೀತ್ ಅವರ ಅತ್ಯುತ್ತಮ ಸ್ನೇಹಿತರಾಗಿರುವ ಪ್ರಾಣ ದಗ್ಗುಬಾಟಿ ಒಂದು ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ ಈ ಮೂಲಕ ತನ್ನ ಸ್ನೇಹಿತನ ನೆನಪುಗಳನ್ನು ಶಾಶ್ವತವಾಗಿಸಿದ್ದಾರೆ.

ಹೌದು, ಬಾಹುಬಲಿ ಖ್ಯಾತಿಯ ರಾಣಾ ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಅತ್ಯುತ್ತಮ ನಟ ಎನಿಸಿಕೊಂಡಿದ್ದು ಇದೀಗ ಬಹು ಬೇಡಿಕೆಯ ನಟ ಕೂಡ ಹೌದು. ಇವರು ಪುನೀತ್ ಅವರ ಅಪ್ಪಟ ಸ್ನೇಹಿತ. ಇದೀಗ ರಾಣಾ ದಗ್ಗುಬಾಟಿ ಪುನೀತ್ ಅವರ ಸ್ಮರಣೆಗಾಗಿ ತಮ್ಮ ಕಚೇರಿಯಲ್ಲಿ ಪುನೀತ್ ರಾಜಕುಮಾರ್ ಅವರ ಸುಂದರವಾದ ಪುತ್ಥಳಿಯನ್ನು ಇಟ್ಟಿದ್ದಾರೆ. ಈ ಬಗ್ಗೆ ಸಂತೋಷದಿಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನನ್ನ ಕಚೇರಿಗೆ ಸುಂದರವಾದ ಸ್ಮರಣಕ್ಕೆ ಒಂದು ಬಂದು ತಲುಪಿದೆ ಮಿಸ್ ಯು ಮೈ ಫ್ರೆಂಡ್ ಪುನೀತ್ ರಾಜಕುಮಾರ್ ಎಂದು ಬರೆದುಕೊಂಡಿದ್ದು ಪುನೀತ್ ರಾಜಕುಮಾರ್ ಅವರ ಪುತ್ಥಳಿಯ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಪುನೀತ್ ಅವರ ವ್ಯಕ್ತಿತ್ವವೇ ಅಂತದ್ದು ಯಾರೇ ಆದರೂ ಪುನೀತರನ್ನ ಪ್ರೀತಿಸುತ್ತಿದ್ದರೆ ಹೊರತು ಅವರನ್ನು ದ್ವೇಷ ಮಾಡುವವರು ಯಾರು ಇರಲಿಲ್ಲ.

ಇದು ದೊಡ್ಮನೆ ಕುಟುಂಬದ ಸಂಸ್ಕಾರ ಕೂಡ ಹೌದು. ಈಗಲೂ ಡಾಕ್ಟರ್ ರಾಜಕುಮಾರ್ ಅವರನ್ನು ನಾವು ಹೇಗೆ ಆರಾಧಿಸುತ್ತೇವೆಯೋ ಹಾಗೆ ಪುನೀತ್ ರಾಜಕುಮಾರ್ ಅವರನ್ನ ಕೂಡ ಅಭಿಮಾನಿಗಳು ದೇವರು ಎಂದೇ ಪೂಜಿಸುತ್ತಾರೆ. ಇಂತಹ ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡು ನಿಜಕ್ಕೂ ನಾವು ಇಂದು ಅನಾಥರಾಗಿದ್ದೇವೆ ಅಂದರೆ ಅತಿಶಯೋಕ್ತಿಯಲ್ಲ.

Leave a Reply

Your email address will not be published. Required fields are marked *