ಸದ್ಯ ನಟ ಪವನ್ ಕಲ್ಯಾಣ್ ಹಾಗೂ ಆಂಧ್ರಪ್ರದೇಶದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವ ಅಭಿವೃದ್ಧಿ ಸಚಿವೆ ರೋಜಾ ಅವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಆದರೆ ಇದು ಯಾವ ಸಿನಿಮಾಕೆ ಸಂಬಂಧಪಟ್ಟ ಜಗಳವಲ್ಲ, ರಾಜಕೀಯಕ್ಕೆ ಸಂಬಂಧಪಟ್ಟ ಹಾಗೆ ಪವನ್ ಕಲ್ಯಾಣ್ ಅವರ ಬಗ್ಗೆ ರೋಜಾ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಅದರಲ್ಲೂ ಜಗನ್ ಪರವಾಗಿ ನಿಂತಿರುವ ರೋಜಾ ಅವರು ಪವನ್ ಕಲ್ಯಾಣ್ ಬಗ್ಗೆ ಹೇಳಿದ್ದೇನು ಗೊತ್ತಾ.
ಜಗನ್, ಸರ್ಕಾರದ ವಿರುದ್ಧ ಪವನ್ ಕಲ್ಯಾಣ್ ಈಗಾಗಲೇ ಗರಂ ಆಗಿದ್ದಾರೆ. ಸಾಕಷ್ಟು ವಿಷಯಗಳಿಗೆ ತಕರಾರು ಮಾಡಿದ್ದಾರೆ. ಗ್ರಾಮದ ನಡುವೆ ಹಾದುಹೋಗುವ ಹೈವೇ ವಿಚಾರದ ಕುರಿತಾಗಿ ಪವನ್ ಕಲ್ಯಾಣ್ ಧ್ವನಿ ಎತ್ತಿದರು. ಇದೀಗ ರೋಜಾ ಪವನ್ ಕಲ್ಯಾಣ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ‘ ಪವನ್ ಕಲ್ಯಾಣ್ ಜಗನ್ ಅವರ ಕಾಲಿನ ಕಿರು ಬೆರಳಿನ ಕೂದಲನ್ನು ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲ.
ಪವನ್ ಕಲ್ಯಾಣ್ ಏನೇ ಆರಾಚಾಡಿದರು ಜಗನ್ ಅವರಿಗೆ ಏನು ಮಾಡಲು ಸಾಧ್ಯವಿಲ್ಲ. ಪವನ್ ಕಲ್ಯಾಣ್ ನಾಲಿಗೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಅವರು ಜಗನ್ ಬಗ್ಗೆ ಮಾತನಾಡುವುದು ಇರಲಿ ಅವರ ಕೂದಲನ್ನು ಕೂಡ ಕಿತ್ತುಕೊಳ್ಳಲು ಸಾಧ್ಯವಿಲ್ಲ ಅಂತ ಶಾಸಕಿ ರೋಜಾ ಗರಂ ಆಗಿ ಸ್ಟೇಟ್ಮೆಂಟ್ ನೀಡಿದ್ದಾರೆ.
ಇಪ್ಪಟಂ ಗ್ರಾಮದಲ್ಲಿ ಹೈವೆ ಬರುವ ವಿಚಾರವಾಗಿ ನಟ ಪವನ್ ಕಲ್ಯಾಣ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಆಗಾಗ ಆ ಗ್ರಾಮದ ರೈತರ ಪರವಾಗಿ ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಈ ಹೋರಾಟದಿಂದ ಜಗನ್ ಸರಕಾರ ಪೇಚಿಗೆ ಸಿಲುಕಿದಂತೆ ಆಗಿದೆ. ಇದೀಗ ಶಾಸಕಿ ರೋಜಾ ಅವರು, ತಮ್ಮ ಸರಕಾರದ ಬಗ್ಗೆ ಪವನ್ ಕಲ್ಯಾಣ್ ಇಲ್ಲ ಸಲ್ಲದ ಆರೋಪವನ್ನ ಮಾಡುತ್ತಿದ್ದಾರೆ.
ಎನ್ನುವ ಕಾರಣಕ್ಕಾಗಿ ಅವರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಸದ್ಯ ಆಂದ್ರಪ್ರದೇಶದ ರಾಜಕೀಯದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು ಜಗನ್ ಸರ್ಕಾರಕ್ಕೆ ಕಂಟಕವಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ರೆ ತಪ್ಪದೇ ನಮಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡುವುದರ ಮೂಲಕ ತಿಳಿಸಿ.