PhotoGrid Site 1660714832759

ಪಬ್ಲಿಕ್ ನಲ್ಲಿ ಬಿಗಿಯಾದ ಬಟ್ಟೆ ತೊಟ್ಟು ಪೋಸ್ ನೀಡಲು ಹೋಗಿ ಯಾರ್ರಾ ಬಿರ್ರಿ ಟ್ರೋಲ್ ಆದ ನಟಿ ರಕುಲ್ ಪ್ರೀತ್! ವಿಡಿಯೋ ನೋಡಿ ಇದ್ಯಾವ ಸೀಮೆ ಬಟ್ಟೆ ಎಂದ ಅಭಿಮಾನಿಗಳು!!

ಸುದ್ದಿ

ಕನ್ನಡ ಸಿನಿಮಾ ಇಂಡಸ್ಟ್ರಿಯ ಮೂಲಕ ನಟನಿಗೆ ಪಾದಾರ್ಪಣೆ ಮಾಡಿ ನಂತರ ಇತರ ಭಾಷೆಯ ಸಿನಿಮಾದಲ್ಲಿ ನಟಿಸಿ ಹೆಚ್ಚು ಫೇಮಸ್ ಆಗಿರುವ ನಟಿಯರ ಪೈಕಿ ರಕುಲ್ ಪ್ರೀತಿ ಸಿಂಗ್ ಕೂಡ ಒಬ್ಬರು. 2009ರಲ್ಲಿ ತೆರೆಕಂಡ ಕನ್ನಡದ ಗಿಲ್ಲಿ ಸಿನಿಮಾದಲ್ಲಿ ನಟಿಸಿ ರಕುಲ್ ಪೂರ್ಣ ಪ್ರಮಾಣದ ನಾಯಕಿ ನಟಿ ಯಾಗಿ ಅಭಿನಯಿಸಲು ಆರಂಭಿಸಿದರು. ಈ ಸಿನಿಮಾ ನಟನಿಗೆ ಇವರಿಗೆ ಕೆಲವು ಪ್ರಶಸ್ತಿಗಳು ಕೂಡ ಲಭಿಸಿವೆ. ನಟಿ ರಕುಲ್ ಪ್ರೀತ್ ಸಿಂಗ್ ಸ್ಟಾರ್ ನಟಿಯಾಗಿ ಗುರುತಿಸಿಕೊಳ್ಳುವುದಕ್ಕೆ ಕನ್ನಡ ಸಿನಿಮಾ ಗಿಲ್ಲಿ ನಾಂದಿಯಾಯ್ತು ಅಂದ್ರೆ ತಪ್ಪಾಗಲ್ಲ.

ರಕುಲ್ ಪ್ರೀತ್ ಸಿಂಗ್ ಕನ್ನಡದಲ್ಲಿ ಒಂದೇ ಸಿನಿಮಾದಲ್ಲಿ ನಟಿಸಿದರೂ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ತೆಲುಗು ಹಾಗೂ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ. ಇನ್ನು ಹಿಂದಿಯಲ್ಲಿಯೂ ಕೂಡ ರಕುಲ್ ತಮ್ಮದೇ ಆದ ನಟನೆಯ ಮೂಲಕ ಶಹಬ್ಬಾಷ್ ಗೆಟ್ಟಿಸಿಕೊಂಡಿದ್ದಾರೆ. ಸದಾ ಬ್ಯುಸಿಯಾಗಿರುವ ನಟಿ ರಕುಲ್ ಪ್ರೀತ್ ಸಿಂಗ್ ಸಿನಿಮಾ ನಟನೆಯ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ತುಂಬಾನೇ ಆಕ್ಟಿವ್ ಆಗಿರುತ್ತಾರೆ.

ಸಿನಿಮಾದಲ್ಲಿ ನಟಿಸುತ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಅಂತೂ ಆಗಾಗ ಫೋಟೋ ಶೂಟ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಇತ್ತೀಚೆಗೆ ರಕುಲ್ ಪ್ರೀತ್ ಸಿಂಗ್ ತಮ್ಮ ಭಾವಿಪತಿ ಜಾಕಿ ಭಗ್ನಾನಿ ಜೊತೆ ಮಾಲ್ಡೀವ್ಸ್ ಪ್ರವಾಸವನ್ನು ಕೂಡ ಕೈಗೊಂಡಿದ್ದರು. ಈ ಫೋಟೋಗಳು ಕೂಡ ಸಿಕ್ಕಾಪಟ್ತೆ ವೈರಲ್ ಆಗಿದ್ದವು. ಇನ್ನು ರಕುಲ್ ಹಾಗೂ ಬಾಲಿವುಡ್ ನಟ ಹಾಗೂ ನಿರ್ಮಾಪಕ ಜಾಕಿ ಮದುವೆಯಾದರೆ ರಕುಲ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಾಳೆ ಎಂದು ಜ್ಯೋತಿಷಿ ಒಬ್ಬರು ಹೇಳಿದ್ದು ಸಿಕ್ಕಾಪಟ್ಟೆ ಸುದ್ದಿ ಆಗಿತ್ತು.

ನೋಡುವುದಕ್ಕೆ ಸಿಕ್ಕಾಪಟ್ಟೆ ಮುದ್ದಾಗಿರುವ. ರಕುಲ್ ಪ್ರೀತಿ ಸಿಂಗ್ ಈ ವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಅದರಲ್ಲೂ ಈ ವರ್ಷ ಅಟ್ಯಾಕ್, ರನ್ ವೆ 34 ಮೊದಲಾದ ಸಿನಿಮಾಗಳು ಯಶಸ್ಸನ್ನು ಕಂಡಿವೆ. ರಕುಲ್ ಪ್ರೀತ್ ಸಿಂಗ್ ಅಜಯ್ ದೇವಗನ್ ಅವರ ಜೊತೆಗೆ ದೇದೇ ಪ್ಯಾರ್ ದೇ ಸಿನಿಮಾದಲ್ಲಿಯೂ ಅಭಿನಯಿಸಿದ ನಂತರ ರನ್ ವೇ 34 ಚಿತ್ರದಲ್ಲಿಯೂ ದೇವಗನ್ ಜೊತೆ ಅಭಿನಯಿಸಿದ್ದಾರೆ. ರಕುಲ್ ಪ್ರೀತ್ ಸಿಂಗ್ ಅವರ ಇತರ ಸಿನಿಮಾಗಳಾದ ಸರೈನೋಡು, ಜಯ ಜಾನಕಿ ನಾಯಕ, ಯಾರಿಯಾನ್, ಸ್ಪೈಡರ್, ನಾನು ಪ್ರೇಮತೋ, ಎನ್ ಜಿಕೆ ವಿನ್ನರ್, ಚೆಕ್ ಮೊದಲಾದ ಸಿನಿಮಾಗಳು ರಕುಲ್ ಅವರಿಗೆ ಹೆಸರನ್ನ ತಂದುಕೊಟ್ಟಿವೆ.

ರಕುಲ್ ಪ್ರೀತ್ ಸಿಂಗ್ ಅವರ ಕೈನಲ್ಲಿ ಸಾಕಷ್ಟು ಪ್ರಾಜೆಕ್ಟ್ ಗಳು ಇರುವ ಹಿನ್ನೆಲೆಯಲ್ಲಿ ಮದುವೆಗೆ ಟೈಮ್ ಕೊಡಲು ಆಗುತ್ತಿಲ್ಲವಂತೆ. ಹಾಗಾಗಿ ರಕುಲ್ ಹಾಗೂ ಅವರ ಗೆಳೆಯ ಜಾಕಿ ಯಾವಾಗ ಮದುವೆಯಾಗುತ್ತಾರೆ ಎನ್ನುವ ವಿಷಯ ಇನ್ನೂ ಬಹಿರಂಗವಾಗಿಲ್ಲ. ಈ ವರ್ಷದ ಅಂತ್ಯದಲ್ಲಿ ರಕುಲ್ ಹಸೆಮಣೆ ಏರಬಹುದು ಎನ್ನುವ ನಿರೀಕ್ಷೆಯಿದೆ. ನಟಿ ರಕುಲ್ ಪ್ರೀತ್ ಸಿಂಗ್ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 22 ಮಿಲಿಯನ್ ಗಳಿಗೂ ಹೆಚ್ಚು ಫಾಲೋವರ್ ಗಳು ಇದ್ದಾರೆ.

ಹಾಗಾಗಿ ಅವರು ಹಾಕುವ ಪ್ರತಿಯೊಂದು ಪೋಸ್ಟ್ ಲಕ್ಷಗಟ್ಟಲೆ ಲೈಕ್ ಪಡೆದುಕೊಳ್ಳುತ್ತದೆ. ಸಾವಿರಗಟ್ತಲೇ ಕಮೆಂಟ್ ಬರುತ್ತೆ. ಇತ್ತೀಚಿಗೆ ಕಡು ಕೆಂಪು ಬಣ್ಣದ ಬಟ್ಟೆ ಧರಿಸಿ ಹಾಟ್ ಫೋಟೋ ಶೂಟ್ ಮಾಡಿಸಿದ್ದಾರೆ ರಕುಲ್. ಈ ಫೋಟೋಗಳಿಗೆ 8 ಲಕ್ಷಕ್ಕೂ ಅಧಿಕ ಲೈಕ್ ಗಳು ಬಂದಿದ್ದು ಅದೆಷ್ಟು ಪದ್ಯ ಹುಡುಗರ ನಿದ್ದೆಗೆಟ್ಟಿದಿಯೋ ದೇವರೆ ಬಲ್ಲ.

 

View this post on Instagram

 

A post shared by FilmyPrincess (@filmyprincess)

Leave a Reply

Your email address will not be published. Required fields are marked *