ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಕನ್ನಡಿಗರಿಗೆ ದೊಡ್ಡ ಕ್ರೇಜ್. ಅವರ ಸಿನಿಮಾಗಳು ಬಿಡುಗಡೆಯಾಗುತ್ತದೆ ಅಂದ್ರೆ ಆ ದಿನಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಾರೆ. ಲಕ್ಷಗಟ್ಟಲೆ ಅಭಿಮಾನಿಗಳನ್ನ ಹೊಂದಿರುವ ಸ್ಯಾಂಡಲ್ವುಡ್ ನ ಸ್ಟಾರ್ ನಟ ದರ್ಶನ್. ಚಂದನವನದ ಬಹು ಬೇಡಿಕೆಯ ನಟ ಕೂಡ ಹೌದು. ವರ್ಷಕ್ಕೆ ಒಂದೆರಡು ಸಿನಿಮಾ ಮಾಡಿದ್ರು ದರ್ಶನ್ ಮಾಡುವ ಎಲ್ಲಾ ಸಿನಿಮಾಗಳು ಹಿಟ್ ಆಗುತ್ತವೆ.
ಅವರು ಅಷ್ಟು ಸರಿಯಾಗಿ ಆಯ್ಕೆ ಮಾಡಿ ಸಿನಿಮಾದಲ್ಲಿ ನಟಿಸುವುದರಿಂದ ಅವರ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರು ಸಿನಿಮಾ ವಿಷಯ ಆಗ್ಲಿ ಅಥವಾ ಅವರ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಆಗಲಿ ಜನರು ಆಗಾಗ ಚರ್ಚಿಸುತ್ತಾರೆ ವಿಡಿಯೋಗಳು ತುಂಬಾನೇ ವೈರಲ್ ಆಗುತ್ತವೆ.
ನಟ ದರ್ಶನ್ ಪತ್ನಿಯ ಜೊತೆ ಸುತ್ತಾಡಿರುವ ಕೆಲವು ಸಮಾರಂಭಗಳಿಗೆ ಭೇಟಿ ನೀಡುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ 2003ರಲ್ಲಿ ಮದುವೆಯಾದವರು. ಆದರೆ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಇವರಿಬ್ಬರ ನಡುವೆ ಮನಸ್ತಾಪ ಬಂದು ಆ ವಿಷಯ ತುಂಬಾನೇ ಸುದ್ದಿಯಾಗಿತ್ತು.
ಆದರೆ ಪ್ರೀತಿಯ ನಡುವೆ ಜಗಳ ಕ್ಷಣಿಕ ಎನ್ನುವಂತೆ ಮತ್ತೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಒಂದಾಗಿ ಜೀವನ ನಡೆಸುತ್ತಿದ್ದಾರೆ ಇವರಿಗೆ ವಿಹಾನ್ ಎನ್ನುವ ಮುದ್ದಾದ ಮಗ ಇದ್ದಾನೆ. ವಿಜಯಲಕ್ಷ್ಮಿ ದರ್ಶನ್ ಅವರ ಬ್ಯಾಕ್ ಬೋನ್ ನಂತೆಯೇ ಕಾರ್ಯ ನಿರ್ವಹಿಸುತ್ತಾರೆ. ದರ್ಶನ್ ಅವರ ಎಲ್ಲಾ ಸಿನಿಮಾಕ್ಕೂ ಸಪೋರ್ಟ್ ಮಾಡುತ್ತಾರೆ.
ಇಂದು ವಿಜಯಲಕ್ಷ್ಮಿ ಅವರ ಹುಟ್ಟಿದ ಹಬ್ಬ ಪತ್ನಿಯ ಹುಟ್ಟಿದ ಹಬ್ಬಕ್ಕೆ ನಟ ದರ್ಶನ್ ಕೊಟ್ಟಿರುವ ಬೃಹತ್ ಉಡುಗೊರೆ ಏನು ಗೊತ್ತಾ? ನಟ ದರ್ಶನ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ಜೊತೆ ಆಗಾಗ ಟೂರ್ ಕೂಡ ಹೋಗುತ್ತಾರೆ. ಈ ಮೂವರ ಸಾಕಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದರ್ಶನ್ ತನ್ನ ಅಭಿಮಾನಿಗಳಿಗೆ ಹಾಗೂ ಮನೆಯವರಿಗೆ ಸಮವಾಗಿ ಸಮಯವನ್ನು ಕೊಡುತ್ತಾರೆ.
ಸಿನಿಮಾದಲ್ಲಿ ಅಭಿನಯಿಸಿ ಉಳಿದ ಸಮಯದಲ್ಲಿ ಸ್ವಲ್ಪವಾದರೂ ಮನೆಯವರ ಜೊತೆಗೆ ಕಾಲ ಕಳೆಯುತ್ತಾರೆ. ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಬಹಳ ಗ್ರಾಂಡ್ ಆಗಿ ಆಚರಿಸುತ್ತಿರುವ ದರ್ಶನ್ ಪತ್ನಿಗೆ ಲ್ಯಾಂಬೋರ್ಗಿನಿ ಕಾರನ್ನು ಹುಡುಗುರಿಯಾಗಿ ನೀಡಿದ್ದಾರೆ. ದರ್ಶನ್ ಅವರಿಗೆ ಹೊಸ ಮಾಡೆಲ್ ಕಾರ್ ಅಂದರೆ ಬಹಳ ಇಷ್ಟ.
ಅವರು ದುಬಾರಿ ಕಾರುಗಳನ್ನ ಖರೀದಿಸುವುದು ಮಾತ್ರವಲ್ಲದೆ ಆಗಾಗ ತಮಗೆ ಬೇಕಾದ ಹಾಗೆ ಮಾಡಿಫೈ ಕೂಡ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ದುಬಾರಿಯಾದ ಲ್ಯಾಂಬೋರ್ಗಿನಿ ಕಾರನ್ನು ದರ್ಶನ ಖರೀದಿಸಿದ್ದು ಇದನ್ನು ಹೆಂಡತಿಗೆ ಬರ್ತಡೇ ಗಿಫ್ಟ್ ಆಗಿ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.