ಕನ್ನಡ ಸಿನಿಮಾ ರಂಗದಲ್ಲಿ ಅದೆಷ್ಟು ತಾರೆಯರು ಬಂದು ಹೋಗಿದ್ದಾರೋ ಲೆಕ್ಕವಿಲ್ಲ. ಕೆಲವು ನಟಿಯರು ಇಲ್ಲಿ ಉಳಿದುಕೊಂಡರೆ ಇನ್ನು ಕೆಲವರು ಪರಭಾಷಾ ಸಿನಿಮಾಗಳನ್ನು ಅರಸಿ ಹೊರಟಿದ್ದಾರೆ ಹಾಗೆಯೇ ಇನ್ನು ಕೆಲವು ನಟಿಯರು ಮದುವೆಯಾದ ನಂತರ ಸಿನಿಮಾ ರಂಗದಿಂದ ದೂರ ಉಳಿಯುತ್ತಾರೆ. ಆದರೆ ಕನ್ನಡತಿ ಆಗಿರುವ ನಟಿ ಶ್ವೇತಾ ಶ್ರೀವಾತ್ಸವ ಮಾತ್ರ ತಮ್ಮ ಅಭಿಮಾನಿಗಳಿಗೆ ಯಾವತ್ತೂ ನಿರಾಸೆ ಮಾಡಿಲ್ಲ ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ಕನ್ನಡದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ನಟಿ ಶ್ವೇತಾ ಶ್ರೀವಾತ್ಸವ್ ಅವರ ಬೋಲ್ಡ್ ನಟನಿಗೆ ಫಿದಾ ಆಗದವರೆ ಇಲ್ಲ. ಶ್ವೇತಾ ಶ್ರೀವಾತ್ಸವ ಅವರಿಗೆ ಮದುವೆಯಾಗಿ ಒಬ್ಬ ಮುದ್ದಾದ ಮಗಳು ಇದ್ದಾಳೆ. ಮಗಳನ್ನು ಅತಿಯಾಗಿ ಪ್ರೀತಿಸುವ ಶ್ವೇತಾ ಆಗಾಗ ಮಗಳ ಜೊತೆ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ.
ಇನ್ನು ಫಿಟ್ನೆಸ್ ಫ್ರೀಕ್ ಆಗಿರುವ ಶ್ವೇತಾ ಶ್ರೀವಾತ್ಸವ್ ಸಾಕಷ್ಟು ವರ್ಕೌಟ್ ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಹಾಟ್ ಫೋಟೋಶೂಟ್ ಮಾಡಿಸುವುದರಲ್ಲಿ ಶ್ವೇತಾ ಅವರು ಎತ್ತಿದ ಕೈ. ಸೀರೆಯುಟ್ಟು ಟ್ರೆಡಿಶನಲ್ ಲುಕ್ ನಲ್ಲಿ ಮಿಂಚುವುದು ಮಾತ್ರವಲ್ಲದೆ, ಆಧುನಿಕ ಉಡುಗೆಯಲ್ಲಿ ಹಾಟ್ ಲುಕ್ ನಲ್ಲಿಯೂ ಕೂಡ ಅಭಿಮಾನಿಗಳ ಹಾರ್ಟ್ ಸೂರೆಗೊಳ್ಳುತ್ತಾರೆ ಸಿಂಪಲ್ ಹುಡುಗಿ.
ನಟಿ ಶ್ವೇತಾ ಶ್ರೀವಾತ್ಸವ್ ಜನಿಸಿದ್ದು 1987 ಸೆಪ್ಟೆಂಬರ್ 4ರಂದು. ಬೆಂಗಳೂರಿನಲ್ಲಿಯೇ ಜನಿಸಿದ ಇವರು ವಿದ್ಯಾಭ್ಯಾಸಂಭಿಸಿದ್ದು ಕೂಡ ಇಲ್ಲಿಯೇ. ಮಾಧ್ಯಮದ ಬಗ್ಗೆ ಅಧ್ಯಯನ ಮಾಡಿದ ಶ್ವೇತಾ ಅವರು ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕೆಲಸ ನಿರ್ವಹಿಸಿದ್ದರು. ಮೊದಲು ಒಬ್ಬ ಥಿಯೇಟರ್ ಆರ್ಟಿಸ್ಟ್ ಆಗಿ ತಮ್ಮ ಅಭಿನಯ ಆರಂಭಿಸಿದ ಶ್ವೇತಾ ಶ್ರೀವಾತ್ಸವ್ ಕನ್ನಡ ಮಾತ್ರವಲ್ಲದೆ ತೆಲುಗು ಧಾರಾವಾಹಿಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ ಅವರಿಗೆ ದೊಡ್ಡ ಬ್ರೇಕ್ ನೀಡಿದ ಸಿನಿಮಾ ಅಂದ್ರೆ 2013ರಲ್ಲಿ ತೆರೆಕಂಡ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಚಿತ್ರ. ನಟ ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಶ್ರೀವಾತ್ಸವ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಚಿತ್ರ ಕನ್ನಡಿಗರ ಮನಸ್ಸು ಸೂರೆಗೊಂಡಿತ್ತು. ಮದುವೆಯ ನಂತರ ಸ್ವಲ್ಪ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ಸಿಂಪಲ್ ಸುಂದರಿ ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಶ್ವೇತಾ ಶ್ರೀವಾತ್ಸವ್ ಹೋಪ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದು ಇತ್ತೀಚೆಗೆ ಅದು ತೆರೆಕಂಡು ಉತ್ತಮ ಸಕ್ಸಸ್ ಪಡೆದಿದೆ.
ಇನ್ನು ಶ್ವೇತಾ ಅವರ ನಟನೆಯ ಚಿಕ್ಕಿಯ ಮೂಗುತಿ, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನು ಶ್ವೇತಾ ಶ್ರೀವಾತ್ಸವ ಅವರ ಮಾದಕ ಮೈಮಾಟ ಜನರನ್ನ ಮನ ಮರೆಯುವಂತೆ ಮಾಡುತ್ತದೆ. ಸಾಕಷ್ಟು ಬೋಲ್ಡ್ ಅಭಿನಯ ಮಾಡುವ ಶ್ವೇತಾ ಅವರು ಈ ಹಿಂದೆ ಕಿರಿಯೂರಿನ ಗಯ್ಯಾಳಿಗಳು ಸಿನಿಮಾದಲ್ಲಿ ಅದ್ಭುತ ನಟನೆಗೆ ಪ್ರಶಸ್ತಿಗಳನ್ನು ಕೂಡ ಗಳಿಸಿದ್ದಾರೆ.
ನೋಡುವುದಕ್ಕೂ ರಫ್ ಅಂಡ್ ಟಫ್ ಆಗಿರುವ ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯುತ್ತಮ ಹೆಸರು ಗಳಿಸಿದ್ದಾರೆ. ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲಾವರ್ಸ್ ನ್ನು ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹೊಂದಿರುವ ನಟಿ ಶ್ವೇತಾ ಅವರ ಇತ್ತಿಚಿನ ಚೆಂಜ್ ಓವರ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
View this post on Instagram