ಸೌಂದರ್ಯಕ್ಕೆ ಸೋಲದವರು ಯಾರು ಹೇಳಿ. ಒಬ್ಬ ಗಂಡಾಗಲಿ ಅಥವಾ ಹೆಣ್ಣಾಗಲಿ ತಾನು ಸುಂದರವಾಗಿ ಕಾಣಬೇಕು, ತನ್ನ ಮುಖದ ಕಾಂತಿಗೆ ಎಲ್ಲರೂ ಆಕರ್ಷಿತರಾಗಬೇಕು ಎಂದು ಬಯಸುವುದು ಕಾಮನ್. ಈಗಿನ ಕಾಲದಲ್ಲಿ ಸೌಂದರ್ಯ ಇಲ್ಲದೆ ಇದ್ದರೆ ಅವರಿಗೆ ಬೆಲೆಯೇ ಇಲ್ಲ. ಹಾಗಾಗಿ ಹೆಣ್ಣುಮಕ್ಕಳು ಅದೇ ರೀತಿ ವಯಸ್ಸಿಗೆ ಬಂದ ಗಂಡುಮಕ್ಕಳು ತಮ್ಮ ಮುಖದಲ್ಲಿ ಮೊಡವೆ, ಅಥವಾ ಯಾವುದೇ ಕಲೆಗಳು ಉಂಟಾದರೆ ಮಾರುಕಟ್ಟೆಯಿಂದ ತರಹೇವಾರಿ ಸೌಂದರ್ಯವರ್ಧಕ ಗಳನ್ನು ತಂದು ಮುಖಕ್ಕೆ ಹಚ್ಚುತ್ತಾರೆ.
ಮಾರುಕಟ್ಟೆ ಯಲ್ಲಿ ಸಿಗುವ ದುಬಾರಿ ಕಾಸ್ಮೆಟಿಕ್ ತಂದು ಕೊನೆಗೆ ದುಬಾರಿ ಬೆಲೆಯೇ ತೆರಬೇಕಾಗುತ್ತದೆ. ಇದರಿಂದ ಸಮಸ್ಯೆ ಬಗೆಹರಿಯೋದು ಇರಲಿ ಮತ್ತಷ್ಟು ಸಮಸ್ಯೆಯನ್ನು ತಮ್ಮ ಮೈ ಮೇಲೆ ಎಳೆದುಕೊಂಡು ಬಿಡುತ್ತಾರೆ. ಈ ರೀತಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ಧಕ ಗಳನ್ನು ಬಳಸಿ ಮುಖವನ್ನು ಹಾಳು ಮಾಡಿಕೊಳ್ಳುವ ಬದಲು ನೀವು ಮನೆಯಲ್ಲಿ ಅದರಲ್ಲೂ ಅಡುಗೆಗೆ ಬಳಸುವಂತಹ ಪದಾರ್ಥಗಳನ್ನು ಬಳಸಿಕೊಂಡು ನಿಮ್ಮ ಮುಖದ ಕಾಂತಿ ಹೆಚ್ಚಿಸಬಹುದು.
ಅದು ಹೇಗೆ ಅನ್ನುವುದನ್ನು ನಾವಿವತ್ತು ಹೇಳುತ್ತೇವೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಡಲೆ ಹಿಟ್ಟು, ಅರಶಿನ ಹಾಗೂ ಮೊಸರು ಇದ್ದೇ ಇರುತ್ತದೆ. ಹಿಂದೆಲ್ಲಾ ಸ್ನಾನ ಮಾಡುವಾಗ, ಅಥವಾ ಮುಖ ತೊಳೆಯುವಾಗ ಕಡಲೆ ಹಿಟ್ಟನ್ನೇ ಹೆಚ್ಚು ಬಳಸುತ್ತಿದ್ದರು. ಕಡಲೆ ಹಿಟ್ಟನ್ನು ಯಾರು ಬೇಕಾದರೂ ಬಳಸಬಹುದು. ಕಡಲೆಹಿಟ್ಟಿನಲ್ಲಿ ಆಂಟಿಮೈಕ್ರೊಬಿಯಲ್ ಅಂಶ ಇರುವ ಕಾರಣ ಅದು ಚರ್ಮದ ಒಳಗಿನಿಂದ ಕೊಳಕು ಮತ್ತು ವಿಷವನ್ನು ತೆಗೆದುಹಾಕುತ್ತದೆ.
ಅದಕ್ಕಾಗಿಯೇ ಬಹುಶಃ ಮದುವೆ ಸಮಾರಂಭಗಳಲ್ಲಿ ವಧುವಿಗೆ ಆಕೆಯ ಸೌಂದರ್ಯವನ್ನು ಹೆಚ್ಚಿಸಲು ಮತ್ತು ತ್ವಚೆ ಹೊಳೆಯುವಂತೆ ಮಾಡಲು ಕಡಲೆಹಿಟ್ಟನ್ನು ಬಳಸುತ್ತಾರೆ. ಅದೇ ರೀತಿ ಅರಶಿಣ ಕೂಡ ಅನೇಕ ಗುಣಗಳನ್ನು ಹೊಂದಿದೆ. ಅರಶಿನ ಅಡುಗೆಗೆ ಎಷ್ಟು ಮುಖ್ಯವೋ ಅದೇ ರೀತಿ ಚರ್ಮದ ಕಾಂತಿ ಹೆಚ್ಚಿಸಲು ಕೂಡ ಪ್ರಮುಖವಾಗಿದೆ. ಔಷಧಿ ಗುಣಗಳಿಗೆ ಹೆಸರುವಾಸಿಯಾಗಿರುವ ಈ ಅರಿಶಿಣದಲ್ಲಿ ಇರುವ ಕರ್ಕ್ಯುಮಿನ್ ರಾಸಾಯನಿಕ ಅಂಶವು ಮೊಡವೆ ಮತ್ತು ಪಿಗ್ಮೆಂಟೇಶನ್ ನಂತಹ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ.
ಚರ್ಮದ ಮೇಲಿನ ಸುಕ್ಕುಗಳ ವಿರುದ್ಧ ಹೋರಾಡುವುದರಲ್ಲಿ ಅರಿಶಿನ ಉತ್ತಮ ಕೆಲಸ ಮಾಡುತ್ತದೆ. ಅದೇ ರೀತಿ ಚರ್ಮದ ಮೇಲೆ ಯಾವುದೇ ಗಾಯಗಳು ಅಥವಾ ದದ್ದುಗಳಿದ್ದರೆ ಅದನ್ನು ಶಮನ ಮಾಡುತ್ತದೆ. ಅದೇ ರೀತಿ ಮೊಸರು ಸೇವಿಸಿದರೆ ಎಷ್ಟು ಹಿತ ಆಗುತ್ತದೋ ಅದೇ ರೀತಿ ಚರ್ಮಕ್ಕೂ ಅಷ್ಟೇ ಹಿತ ನೀಡುತ್ತದೆ. ಮೊಸರಿನಲ್ಲಿ ಕ್ಯಾಲ್ಸಿಯಂ, ಲ್ಯಾಕ್ಟಿಕ್ ಆಮ್ಲ, ವಿಟಮಿನ್ ಬಿ ಹೀಗೆ ಹಲವಾರು ಪೋಷಕಾಂಶಗಳು ಇರುವ ಕಾರಣ ಅದು ತ್ವಚೆಗೆ ಉತ್ತಮವಾದ ಪೋಷಣೆ ನೀಡುತ್ತದೆ.
ಇದು ತ್ವಚೆಯನ್ನು ತೇವಾಂಶ ಗೊಳಿಸುವುದಲ್ಲದೇ, ಹೊಳೆಯುವಂತೆ ಮಾಡುತ್ತದೆ. ಬಿಸಿಲುಗಂದಿಗೆ, ಚರ್ಮ ವ್ಯಾಧಿಗಳನ್ನು ಶಮನ ಮಾಡಿ, ಕಣ್ಣಿನ ಕಪ್ಪು ವಲಯವನ್ನು ತೊಲಗಿಸಲು ಸಹಾಯ ಮಾಡುತ್ತದೆ. ಈ ಮೂರನ್ನು ಬಳಸಿ ಒಂದು ಫೇಸ್ ಪ್ಯಾಕ್ ರೆಡಿ ಮಾಡಿ ಹಚ್ಚಿದರೆ ಸಾಕು ನಿಮ್ಮ ತ್ವಚೆ ಚಂದಿರನಂತೆ ಹೊಳೆಯುತ್ತದೆ. ಅದಕ್ಕಾಗಿ ನೀವು ಶುದ್ಧವಾದ ಒಂದು ಸ್ಪೂನ್ ಕಡಲೆ ಹಿಟ್ಟಿಗೆ, ಶುದ್ಧವಾದ ಕಾಲು ಸ್ಪೂನ್ ಅರಶಿನ ಅದೇ ರೀತಿ ಒಂದು ಸ್ಪೂನ್ ಮೊಸರು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು.
ನಂತರ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುತ್ತಾ ಬಂದರೆ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ. ಆದರೆ ಇದನ್ನು ಹಚ್ಚಿ ತೊಳೆದ ನಾಲ್ಕು ಗಂಟೆಯ ಒಳಗೆ ನೀವು ಸೋಪು ಅಥವಾ ಯಾವುದೇ ಕ್ರೀಂ ಹಚ್ಚುವಂತಿಲ್ಲ. ಈ ಮಾಹಿತಿ ಕುರಿತಾಗಿ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.