ನಿರ್ಮಾಪಕರು ಎಷ್ಟೇ ಹಣ ಕೊಡ್ತೀವಿ ಅಂದರೂ, ನಟಿ ಸೌಂದರ್ಯ ಯಾವುದೇ ಕಾರಣಕ್ಕೂ ಮೈಮೇಲಿನ ಬಟ್ಟೆ ಕಡಿಮೆ ಹಾಕುತ್ತಿರಲಿಲ್ಲ ಯಾಕೆ ಗೊತ್ತಾ? ಇವರು ಕಣ್ರೀ ನಿಜವಾದ ನಟಿ ಅಂದ್ರೆ ನೋಡಿ!!

ಸುದ್ದಿ

ನಮ್ಮ ಕರ್ನಾಟಕದ ಮುಳು ಬಾಗಿಲಿನ ಪುಟ್ಟ ಗ್ರಾಮ ಒಂದರಲ್ಲಿ ಜನಿಸಿದಂತಹ ಸೌಂದರ್ಯ ಅವರು ಮುಂದೊಂದು ದಿನ ಸ್ಟಾರ್ ನಟಿಯಾಗಿ ಬೆಳೆಯುತ್ತಾರೆ ಎಂಬ ಸಣ್ಣ ಕಲ್ಪನೆಯು ಅವರಿಗೆ ಇರಲಿಲ್ಲ. ಕೇವಲ 32 ವರ್ಷಕ್ಕೆ ತಮ್ಮ ಬದುಕಿನ ಪಯಣವನ್ನು ನಿಲ್ಲಿಸಿದರು ಕೂಡ ಇಂದಿಗೂ ಅದೆಷ್ಟೋ ಕನ್ನಡಿಗರು ಸ್ಮರಿಸುವಂತಹ ಚಂದದ ನಟಿ ಎಂದರೆ ಅದು ಸೌಂದರ್ಯ. ಇಂತಹ ಅದ್ಭುತ ನಟಿಗೆ ಕನ್ನಡ ಮಾತ್ರವಲ್ಲದೆ ಪಂಚಭಾಷೆಗಳಿಂದಲೂ ಆಫರ್ ಬಂದರೂ ಯಾವುದೇ ಕಾರಣಕ್ಕೂ ತಮ್ಮ ದೇಹದ ಪ್ರದರ್ಶನವನ್ನು ತೆರೆಯ ಮೇಲೆ ಮಾಡುತ್ತಿರಲಿಲ್ಲ.

ಹೀಗೆ ಬಹಳ ಸಭ್ಯತೆ ಉಳ್ಳಂತಹ ಈ ನಟಿ ಬಹು ಮಡಿವಂತಿಕೆಯಿಂದ ಸಿನಿ ಪಯಣದಲ್ಲಿ ಮುಂದೆ ಸಾಗಿದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೆ ಹೆಸರಿಗೆ ತಕ್ಕಂತೆ ಸೌಂದರ್ಯವನ್ನು ಮೈಗೂಡಿಸಿಕೊಂಡಿದ್ದಂತಹ ಈ ನಟಿ ಯಾವ ಕಾರಣದಿಂದಾಗಿ ಸಿನಿಮಾರಂಗದಲ್ಲಿ ದೇಹದ ಪ್ರದರ್ಶನ ಮಾಡಲು ಇಷ್ಟಪಡುತ್ತಿರಲಿಲ್ಲ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ನಟಿ ಸೌಂದರ್ಯ ಅವರ ನಿಜವಾದ ಹೆಸರು ಸೌಮ್ಯ ಕೆ ಎಸ್ ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಆಸಕ್ತಿ ಹೊಂದಿದಂತಹ ಈಕೆ ಓದಿ ದೊಡ್ಡ ಆಫೀಸರ್ ಆಗಬೇಕು ಎಂಬ ಕನಸನ್ನು ಕಂಡು ಇರುತ್ತಾರೆ. ಆದರೆ ಅಚಾನಕ್ಕಾಗಿ ಸಿನಿಮಾ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿದರು. ಹೌದು ಕನ್ನಡ ಮಣ್ಣಿನ ದೇಸಿ ಪ್ರತಿಮೆಯಾಗಿದಂತಹ ಸೌಂದರ್ಯ ಅವರು ಗಂಧರ್ವ ಎಂಬ ಕನ್ನಡ ಸಿನಿಮಾ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಲು ಶುರು ಮಾಡುತ್ತಾರೆ.

ಆನಂತರ ನಿನ್ನೆ ಪ್ರೇಮಿಸ್ತಾ, ಅಮ್ಮೋರು, ಆಪ್ತಮಿತ್ರ, ಪವಿತ್ರ ಬಂಧಂ, ದ್ವೀಪ ಸೇರಿದಂತೆ ಕನ್ನಡ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡರು. ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿ ಬಹಳ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಆರತಿ, ಭಾರತಿ, ಕಲ್ಪನಾ ಎಲ್ಲರನ್ನೂ ತಮ್ಮ ಅತ್ಯದ್ಭುತ ಸಿನಿಮಾಗಳ ಮೂಲಕ ಹಿಂದಿಕ್ಕಿ ಅಗ್ರಸ್ಥಾನವನ್ನು ಏರಿದಂತಹ ನಟಿ ಎಂದರೆ ತಪ್ಪಾಗಲಾರದು.

ಹೀಗೆ ಎಷ್ಟೇ ಅವಕಾಶಗಳ ಸುರಿಮಳೆ ಇದ್ದರೂ ನಟಿ ಸೌಂದರ್ಯ ಮಾತ್ರ ಎಂದಿಗೂ ಸಿನಿಮಾದಲ್ಲಿ ತಮ್ಮ ಮೈಮಾಟದ ಪ್ರದರ್ಶನ ಮಾಡುತ್ತಿರಲಿಲ್ಲ. ಹೌದು ಗೆಳೆಯರೇ ಬಹಳ ಸಿಂಪಲ್ ಆದ ಸೀರೆ ರವಿಕೆ, ಲಂಗ ದಾವಣಿ ಇಂತಹ ಉಡುಪುಗಳನ್ನು ತೊಡುತಿದ್ದರೇ, ಹೊರತು ಯಾವುದೇ ಮಾಡ್ರನ್ ಬಟ್ಟೆಯನ್ನು ಸೌಂದರ್ಯ ಹಾಕಿರುವುದನ್ನು ನೋಡಲು ಸಾಧ್ಯವಿಲ್ಲ.

ನಿರ್ದೇಶಕ ನಿರ್ಮಾಪಕರು ಎಷ್ಟೇ ಸಂಭಾವನೆಯ ಆಫರ್ ನೀಡಿದರು ಸಹ ಸೌಂದರ್ಯ ಇಂತಹ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೂ ಇರಲಿಲ್ಲ. ಹೀಗೆ ಸೌಂದರ್ಯವರು ಯಾಕೆ ಎಕ್ಸ್ಪೋಸಿಂಗ್ ಇಷ್ಟಪಡುತ್ತಿರಲಿಲ್ಲ ಎಂಬ ಪ್ರಶ್ನೆಗೆ ತೆಲುವಿನ ಖ್ಯಾತ ನಟಿ ಆಮಾನಿ ಉತ್ತರಿಸಿದ್ದಾರೆ ಸೌಂದರ್ಯ ಮತ್ತು ಆಮಾನಿಯವರು ಸಿನಿಮಾ ಕ್ಷೇತ್ರದ ಅತ್ಯದ್ಭುತ ಸ್ನೇಹಿತರು. ಅಮಾನಿಯವರು ಕನ್ನಡದ ದಾದಾ ವಿಷ್ಣುವರ್ಧನ್ ಅವರೊಡನೆ ಅಪ್ಪಾಜಿ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ನಟಿ ಇಂಟರ್ವ್ಯೂ ಒಂದರಲ್ಲಿ ಸೌಂದರ್ಯ ಅವರ ಕುರಿತು ಮಾತನಾಡಿದರು. “ನಾನು ಹೀಗೆ ಒಮ್ಮೆ ಕ್ಯಾಶುಯಲ್ ಆಗಿ ಮಾತನಾಡುವಾಗ ಸೌಂದರ್ಯ ಅವರನ್ನು ನೀನು ಯಾಕೆ ಸಿನಿಮಾದಲ್ಲಿ ಎಕ್ಸ್ಪೋಸಿಂಗ್ ಅನ್ನು ಇಷ್ಟಪಡುವುದಿಲ್ಲ? ಎಂದು ಕೇಳಿದೆ ಅದಕ್ಕೆ ಅವರು ಈಗ ನಾನು ಹಣಕ್ಕಾಗಿ ಆ ರೀತಿ ಉಡುಪನ್ನು ತೊಟ್ಟು ಎಕ್ಸ್ಪೋಸ್ ಮಾಡಿದರೆ, ಮುಂದೊಂದು ದಿನ ನನ್ನ ನಿಜ ಜೀವನದಲ್ಲಿ ನಾನು ಬೇರೆ ಯಾರನ್ನಾದರೂ ಮದುವೆಯಾಗುತ್ತೇನೆ.

ಆಗ ನನ್ನ ಗಂಡ ಯಾಕೆ ಆತರ ಮಾಡಿದ್ದೀಯಾ ಎಂದು ಕೇಳಿದರೆ ನಾನು ಏನೆಂದು ಉತ್ತರಿಸಲಿ? ಹೀಗಾಗಿ ನಾನು ಯಾವುದೇ ಕಾರಣಕ್ಕೂ ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೂ ಆ ರೀತಿ ಮಾಡುವುದಿಲ್ಲ” ಎಂದಿದ್ದರಂತೆ. ಸೌಂದರ್ಯ ಅವರು ತಮ್ಮ ಗಂಡ ಹಾಗೂ ಕುಟುಂಬವನ್ನು ಬಹಳನೇ ಇಷ್ಟ ಪಡುತ್ತಿದ್ದರು. ಅಲ್ಲದೆ ಅ-ಪಘಾತವಾಗುವ ಕೆಲವು ವರ್ಷಗಳ ಹಿಂದಷ್ಟೇ ರಘು ಎಂಬುವವರೊಂದಿಗೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬಹಳ ಸಂತೋಷವಾಗಿ ಜೀವನ ನಡೆಸಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದರು. ಆದರೆ ವಿ’ಧಿ ತನ್ನ ಕ್ರೌ’ರ್ಯತೆಯನ್ನು ಮೆರೆದು ಅತಿ ಚಿಕ್ಕ ವಯಸ್ಸಿಗೆ ಉದ್ಯೋನ್ಮುಖ ನಟಿಯಾಗ ಹೊರಟಿದ್ದ ಸೌಂದರ್ಯ ಅವರನ್ನು ತನ್ನೆಡೆಗೆ ಕರೆದುಕೊಂಡು ಬಿಟ್ಟಿತು. ನೀವು ಕೂಡ ಸೌಂದರ್ಯವರ ಅಭಿಮಾನಿಯಾಗಿದ್ದಲ್ಲಿ ತಪ್ಪದೆ ನಮಗೆ ಅವರ ಸಿನಿಮಾದ ಹೆಸರನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *