ಇತ್ತೀಚಿಗೆ ಸ್ನೇಹಿತರು ಬಳಗ ಶವರ್ ಸಂದರ್ಭದಲ್ಲಿ ಅನುಪಮಾ ಗೌಡ ಅವರ ವಿಭಿನ್ನ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿದೆ. ನಟಿ ಅನುಪಮಾ ಗೌಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ಅವರು ಬಿಗ್ ಬಾಸ್ ಕನ್ನಡ ಸೀಸನ್ 5 ರಲ್ಲಿ ಒಬ್ಬ ಪ್ರಮುಖ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಅನುಪಮಾ ಗೌಡ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಧಾರಾವಾಹಿಯ ಮೂಲಕ ಗುರುತಿಸಿಕೊಂಡವರು.
ಈ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ಅನುಪಮ ಗೌಡ ನಟಿಸಿದ್ದರು. ಒಂದು ಪಾತ್ರದಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡರೆ ಇನ್ನೊಂದರಲ್ಲಿ ತುಂಬಾ ಮುಖ್ಯವಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಏಕಕಾಲದಲ್ಲಿ ಎರಡು ರೀತಿಯ ಪಾತ್ರವನ್ನು ನಿಭಾಯಿಸಿದ ಹೆಗ್ಗಳಿಕೆ ಅವರದ್ದು. ಇನ್ನು ಧಾರಾವಾಹಿ ಈ ಲೋಕದಲ್ಲಿ ಹೆಸರು ಮಾಡಿದ ಅನುಪಮಾ ಗೌಡ ಇದೀಗ ಧಾರಾವಾಹಿ ಗಿಂತಲೂ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ.
ವೆಬ್ ಸೀರೀಸ್ ನಲ್ಲಿ ಕೂಡ ಅನುಕುಮ ಗೌಡ ನಟಿಸಿದ್ದಾರೆ. ನಟ ಸುನಿಲ್ ರಾವ್ ಅವರ ಜೊತೆ ಲೂಸ್ ಕನೆಕ್ಷನ್ ಎನ್ನುವ ಸೀರೀಸ್ ಒಂದರಲ್ಲಿ ಅನುಪಮ ಗೌಡ ಬಣ್ಣ ಹಚ್ಚಿದ್ದಾರೆ. ಇನ್ನು ಸಿನಿಮಾ ಅಭಿನಯದಲ್ಲಿಯೂ ನಟಿ ಅನುಪಮಾ ಗೌಡ ಹಿಂದೆ ಉಳಿದಿಲ್ಲ. ಕನ್ನಡದಲ್ಲಿ ಲಂಕೇಶ್ ಪತ್ರಿಕೆ ಸಿನಿಮಾದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡ ನಿರೂಪಕಿಯಾಗಿದ್ದರು.
ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅನುಪಮಾ ಗೌಡ ನಿಧಾನವಾಗಿ ನಿರೂಪಣೆಯತ್ತ ಹೆಚ್ಚು ಗಮನ ವಹಿಸಿದರು ಹಾಗಾಗಿ ವಾಹಿನಿಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೂಡ ಅನುಪಮ ಗೌಡ ಕಾರ್ಯನಿರ್ವಹಿಸಿದ್ದಾರೆ. ಇನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿಯೂ ಕೂಡ ಅನುಪಮಾ ಗೌಡ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.
ಆದರೆ ರಾಜ ರಾಣಿ ಸೀಸನ್ 2 ಮತ್ತೆ ಪ್ರಸಾರವಾಗುತ್ತಿದೆ ಆದರೆ ಇದಕ್ಕೆ ನಿರೂಪಕಿಯಾಗಿ ಮಾತ್ರ ಅನುಪಮಾ ಗೌಡ ಇಲ್ಲ. ಅನುಪಮಾ ಗೌಡ ಯಾಕೆ ಈ ಶೋ ಮಾಡುವುದನ್ನ ನಿಲ್ಲಿಸಿದ್ರು ಅನ್ನುವ ಚರ್ಚೆ ಜೋರಾಗಿತ್ತು ಆದರೆ ಇದಕ್ಕೆಲ್ಲ ಅನುಪಮಾ ಗೌಡ ಸ್ಪಷ್ಟನೆಯನ್ನು ನೀಡಿದರು. ನನಗೆ ನಿರೂಪಣೆಗೆ ಮತ್ತೆ ವಾಹಿನಿ ಕಡೆಯಿಂದ ಕರೆ ಬಂದಿಲ್ಲ ಬಂದರೆ ಖಂಡಿತವಾಗಿಯೂ ಮಾಡುತ್ತಿದ್ದೆ ಇದೀಗ ಇನ್ನೂ ಉತ್ತಮವಾದ ಕಾರ್ಯಕ್ರಮದೊಂದಿಗೆ ಮತ್ತೆ ಬರುತ್ತೇನೆ ಅಂತ ಅನುಪಮಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ಹಿಂದೆ ಹಳ್ಳಿ ದುನಿಯಾ ಎನ್ನುವ ರಿಯಾಲಿಟಿ ಶೋ ದಲ್ಲಿಯೂ ಕೂಡ ಅನುಪಮ ಗೌಡ ಸ್ಪರ್ಧೆಯಾಗಿ ಭಾಗವಹಿಸಿದ್ದು ಹಲವರಿಗೆ ನೆನಪಿರಬಹುದು. ಕನ್ನಡದ ಕೋಗಿಲೆ ಮಜಾ ಭಾರತ ಮೊದಲ ರಿಯಾಲಿಟಿ ಶೋ ಗಳಲ್ಲಿಯೂ ಕೂಡ ನಟಿ ಅನುಪಮಾ ಗೌಡ ಅತ್ಯುತ್ತಮ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ನಟಿ ಅನುಪಮಾ ಗೌಡ ಇನ್‌ಸ್ಟಾಗ್ರಾಮಲ್ಲಿಯೂ ಕೂಡ ತುಂಬಾನೆ ಆಕ್ಟಿವ್ ಆಗಿರುತ್ತಾರೆ ಈಗಾಗಲೇ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ.
ಟ್ರಾವೆಲ್ ಪ್ರಿಯರೂ ಆಗಿರುವ ಅನುಪಮಾ ಗೌಡ ಸಾಕಷ್ಟು ಬಾರಿ ಸೋಲೋ ಟ್ರಿಪ್ ಕೂಡ ಹೋಗಿದ್ದಾರೆ. ಇತ್ತೀಚಿಗೆ ಅನುಪಮಾ ಗೌಡ ಅವರ ಸ್ನೇಹಿತೆಯ ಬೇಬಿ ಶವರನಲ್ಲಿ ಇತರ ಸ್ನೇಹಿತೆಯರೊಂದಿಗೆ ಪಾಲ್ಗೊಂಡಿದ್ದರು. ತಾವು ಕೂಡ ಗರ್ಭಿಣಿಯಾದಂತೆ, ಗರ್ಭಿಣಿ ಸ್ನೇಹಿತೆಯ ಜೊತೆ ನಿಂತು ಫೋಟೋ ಶೂಟ್ ಮಾಡಿಸಿದ್ದರು. ಈ ಫೋಟೋ ಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮದುವೆಯಾಗಿದ್ದಾರೆ ಅಂತಹ ಹಲವರು ಪ್ರಶ್ನೆಯನ್ನು ಮಾಡಿದ್ದಾರೆ. ಆದರೆ ಇದು ಕೇವಲ ತಮಾಷೆಗೋಸ್ಕರ ಮಾಡಿರುವ ಫೋಟೋಶೂಟ್ ಆಗಿದ್ದು ಅನುಪಮಾ ಗೌಡ ಸ್ನೇಹಿತರ ಜೊತೆ ಸೇರಿ ಈ ಸಂದರ್ಭವನ್ನು ಎಂಜಾಯ್ ಮಾಡಿದ್ದಾರೆ.