ಸಿನಿಮಾ ಅಂದ್ರೆನೇ ಕ್ರೇಜ್ ಅದರಲ್ಲೂ ಸಿನಿಮಾದಲ್ಲಿ ನಟಿಸುವ ನಟ ನಟಿಯರ ಬಗ್ಗೆ ಜನರಿಗೆ ಸಾಕಷ್ಟು ಕುತೂಹಲ ಇರುತ್ತೆ ಅದರಲ್ಲೂ ತಮ್ಮ ನೆಚ್ಚಿನ ಸ್ಟಾರ್ ನಟ ನಟಿಯರ ಜೀವನದ ಬಗ್ಗೆ ತಿಳಿದುಕೊಳ್ಳಲು ಕೂಡ ಬಹಳ ಆಸಕ್ತಿ ಹೊಂದಿರುತ್ತಾರೆ. ಇಂದು ಎಲ್ಲಾ ಸಿನಿಮಾ ನಟಿಯರು ಹೆಚ್ಚಾಗಿ ಇನ್ಸ್ಟಾಗ್ರಾಮ್ ನಲ್ಲಿ ತಮ್ಮದೇ ಖಾತೆಯನ್ನು ಹೊಂದಿದ್ದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಲ್ಲಿ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ ಲಕ್ಷಾಂತರ ಜನ ಹೊಂದಿರುತ್ತಾರೆ ಸಿನಿಮಾ ತಾರೆಯರು.
ಸಿನಿಮಾದಲ್ಲಿ ನಟಿಸುವ ನಿಮ್ಮ ಮೆಚ್ಚಿನ ನಟಿಯರು ಜೀವನದಲ್ಲಿ ನಡೆಯುವ ಹಲವಾರು ವಿಷಯಗಳನ್ನ ಹಂಚಿಕೊಳ್ಳುತ್ತಾರೆ. ಆದರೆ ಅದಕ್ಕೂ ಮೀರಿ ಅವರ ವೈಯಕ್ತಿಕ ಜೀವನದ ಬಗ್ಗೆ ಇನ್ನೂ ಹಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಜನರಿಗೆ ಕುತೂಹಲ ಇರುತ್ತೆ. ಸಿನಿಮಾ ನಟಿಯರ ಊರು ಜಾತಿ, ಧರ್ಮ ಮೊದಲಾದ ಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ನಿಮಗೂ ಇದ್ದರೆ ಕೆಲವು ನಟಿಯರ ಜಾತಿ ಧರ್ಮದ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ಕೊಡುತ್ತಿದ್ದೇವೆ.
ಮೊದಲನೆಯದಾಗಿ ಕನ್ನಡದ ಮೆಚ್ಚಿನ ನಟಿ ರಾಧಿಕಾ ಪಂಡಿತ್. ಇದೀಗ ಸಿನಿಮಾದಿಂದ ದೂರ ಉಳಿದರು ರಾಧಿಕಾ ಪಂಡಿತ್ ಅವರ ಬಗೆಗಿನ ಅಭಿಮಾನ ಪ್ರೀತಿ ಮಾತ್ರ ಜನರಿಗೆ ಕಡಿಮೆ ಆಗಿಲ್ಲ. ಇನ್ನು ನಮ್ಮ ನಿಮ್ಮೆಲ್ಲರ ಪ್ರೀತಿಯ ರಾಧಿಕಾ ಪಂಡಿತ್ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮೂಲಕ ಸಿನಿಮಾ ಜಗತ್ತಿಗೆ ಕಾಲಿಟ್ಟ ರಾಧಿಕಾ ಅವರು ಬ್ರಾಹ್ಮಣರು.
ಅದೇ ರೀತಿ ಲೂಸಿಯಾ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟ ಬಹುಭಾಷಾ ನಟಿ ಶ್ರುತಿ ಹರಿಹರನ್, ಕಿರಿಕ್ ಪಾರ್ಟಿಯಲ್ಲಿ ನಟಿಸಿ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ನಟಿ ಸಂಯುಕ್ತಾ ಹೆಗಡೆ ಕೂಡ ಬ್ರಾಹ್ಮಣರು ಇನ್ನು ಪಂಚಭಾಷೆಯಲ್ಲಿ ನಟಿಸಿರುವ ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡಿರುವ ಬಹು ಬೇಡಿಕೆಯ ನಟಿ ಪ್ರಿಯಾಮಣಿಿ.
ಪುನೀತ್ ರಾಜಕುಮಾರ್ ಅವರ ಒಟ್ಟಿಗೆ ರಾಜಕುಮಾರ ಹಾಗೂ ಜೇಮ್ಸ್ ಚಿತ್ರದಲ್ಲಿ ಅಭಿನಯಿಸಿದ ಪ್ರಿಯ ಆನಂದ್, ಅಪ್ಪು ಜೊತೆ ಮಿಲನ ಸಿನಿಮಾದಲ್ಲಿ ನಟಿಸಿ ಕನ್ನಡದಲ್ಲಿ ಖ್ಯಾತಿ ಗಳಿಸಿದ ಪಾರ್ವತಿ ಮೆನನ್, ಕೆಂಡಸಂಪಿಗೆಯಲ್ಲಿ ನಟನಾ ಕಂಪು ಹೊರಸೋಸಿದ ನಟಿ ಮಾನ್ವಿತ ಹರೀಶ್, ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಕನ್ನಡದ ಬಹು ಬೇಡಿಕೆಯ ನಟಿ ಶಾನ್ವಿ ಶ್ರೀವಾತ್ಸವ್ ಹಾಗೂ ಅಪ್ಪಟ ಕನ್ನಡತಿ ಪ್ರಣೀತಾ ಸುಭಾಷ್ ಮೊದಲಾದ ನಟಿಯರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು.
ಸ್ನೇಹಿತರೆ ನಿಮ್ಮ ನೆಚ್ಚಿನ ನಟಿ ಹರ್ಷಿಕ ಹಾಗೂ ಕನ್ನಡದಲ್ಲಿ ವೃತ್ತಿ ಆರಂಭಿಸಿ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕ ಮಂದಣ್ಣ ಕೊಡಗು ಸಮುದಾಯಕ್ಕೆ ಸೇರಿದವರು ಅಂದರೆ ಕೊಡವರು. ಇನ್ನು ಬೌದ್ಧ ಧರ್ಮಕ್ಕೆ ಸೇರಿದ ಹನ್ಸಿಕ ಮೂಟ್ವಾನಿ ಹಾಗೂ ಸಂಜನಾ ಗಲ್ರಾನಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಹಾಗೆಯೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ ಸಾಕಷ್ಟು ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳು ಮಿಂಚುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇರಬಹುದು, ಕ್ರೇಜಿ ಬಾಯ್ಸ್ ಸಿನಿಮಾದ ಮೂಲಕ ಹಿಟ್ ಗಳಿಸಿದ ಅಶಿಕ ರಂಗನಾಥ್ ಇರಬಹುದು, ಈಗಾಗಲೇ ನಟಿಸಿ ಸೈ ಎನಿಸಿಕೊಂಡ ಸೋನು ಗೌಡ ಮೊದಲಾದವರು ಒಕ್ಕಲಿಗ ಸಮಾಜಕ್ಕೆ ಸೇರಿದವರಾದರೆ ನಟಿ ಅಮಲ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುವವರು. ಹಾಗೆಯೇ ಅದಿತಿ ಪ್ರಭುದೇವ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಇವಿಷ್ಟು ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಫೇಮಸ್ ಆಗಿರುವ ನಟಿಯರು ಅನುಸರಿಸುವ ಜಾತಿ ಧರ್ಮದ ಬಗ್ಗೆ ಮಾಹಿತಿ.