ಸಿನಿಮಾ ರಂಗಕ್ಕೆ ಬರುವ ಅನೇಕ ನಟಿಯರು ಮೊದಲು ಬಳುಕುವ ಬಳ್ಳಿಯ ಹಾಗೆ ಇರುತ್ತಾರೆ. ಆದರೆ ನಂತರ ಅವರ ದೈಹಿಕ ತೂಕ ಹೆಚ್ಚಾಗಿ ತುಂಬಾ ದಪ್ಪಗಾಗಿ ಬಿಡುತ್ತಾರೆ. ನಟಿಯರು ದಪ್ಪಗಾದ ಕೂಡಲೇ ಬಾಡಿ ಶೇಮಿಂಗ್ ಎದುರಿಸುವಂತಹ ಪ್ರಮೇಯ ಒದಗಿ ಬರುತ್ತದೆ. ಕೆಲವರು ಇದರಿಂದ ತೀರಾ ನೊಂದು ಜೀವ ಕಳೆದು ಕೊಂಡರೆ ಇನ್ನು ಕೆಲವತು ಸರ್ಜರಿ ಮಾಡಿಸಿಕೊಂಡು ಇನ್ನಷ್ಟು ಸಮಸ್ಯೆಯನ್ನು ಮೈ ಮೇಲೆ ಕಳೆದುಕೊಳ್ಳುತ್ತಾರೆ.
ಇನ್ನು ಕೆಲವರು ಜಿಮ್ ವರ್ಕೌಟ್ ಅಂತ ಹೋಗಿ ಕೊಬ್ಬು ಕರಗಿಸಿ ಕೊಳ್ಳುತ್ತಾರೆ. ಇನ್ನು ಈ ದೇಹ ದಪ್ಪಗಾಗಲು ಅನೇಕ ಕಾರಣಗಳು ಇರುತ್ತವೆ. ಕೆಲವರಿಗೆ ಆರಾಮವಾಗಿ ತಿಂದು ತೇಗಿ, ಯಾವುದೇ ದೈಹಿಕ ವ್ಯಾಯಾಮ ಸಿಗದೆ ಬೊಜ್ಜು ಬಂದರೆ ಇನ್ಬು ಕೆಲವರಿಗೆ ಹಾರ್ಮೋನಲ್ ಸಮಸ್ಯೆಯಿಂದ ಬೊಜ್ಜು ಬಂದು ದಪ್ಪಗಾಗುತ್ತಾರೆ.ಇದೇ ರೀತಿ ಚಿತ್ರರಂಗಕ್ಕೆ ಬಂದ ಆರಂಭದ ಕೆಲ ವರ್ಷಗಳಲ್ಲಿ ಸಣ್ಣಗಿದ್ದ ಒಬ್ಬ ನಟಿ ನಂತರ ದಪ್ಪಗಾಗಿ ಬಾಡಿ ಶೇಮಿಂಗ್ ಎಸುರಿಸಿದ್ದಾರೆ. ಅವರೇ ನಿತ್ಯಾ ಮೆನನ್.
ಹೌದು, ದೇಹದ ತೂಕ ಹೆಚ್ಚಾದ ಕಾರಣ ನಿತ್ಯಾ ಮೆನನ್ ಅನೇಕ ಟ್ರೋಲ್‌ಗಳಿಗೆ ಆಹಾರವಾದರು.ಅವರ ದೇಹದ ಅಂಗಾಂಗದ ಕುರಿತಾಗಿ ಕೆಟ್ಟ ಕಾಮೆಂಟ್ ಗಳು ಬರಲು ಆರಂಭ ಆಗಿದ್ದವು. ಈ ವಿಚಾರದ ಬಗ್ಗೆ ಮಾತನಾಡಿರುವ ನಿತ್ಯಾ ಮೆನನ್ ದೇಹದ ಬಗ್ಗೆ ಕಾಮೆಂಟ್ ಮಾಡುವವರು ಸದಾ ಕಲ್ಪನಾ ಲೋಕದಲ್ಲಿದ್ದು, ಏನೇನೋ ಅವರವರಿಗೆ ಮನಸ್ಸಿಗೆ ಬಂದಹಾಗೆ ಅಂದುಕೊಳ್ಳುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಇಂತಹ ಕೆಟ್ಟ ಕಾಮೆಂಟ್‌ಗೆ ಒಳಗಾಗೋದರಿಂದ, ಟ್ರೋಲ್ ಆಗೋದರಿಂದ ಅದು ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಇದರಲ್ಲಿ ಯಾವುದೇ ಸಂದೇಹ ಇಲ್ಲ. ನಿಮಗಿಂತ ಮೇಲಿರುವವರಿಂದ ನೀವು ಸದಾ ವಿಮರ್ಶೆಗೆ ಒಳಪಡುತ್ತೀರಿ ಎಂದು ನೀವು ಎಂದುಕೊಳ್ಳುತ್ತೀರಿ, ಆದರೆ ನಮಗಿಂತ ಕೆಳಗಿರುವವರಿಂದಲೇ ನಾವು ಸದಾ ವಿಮರ್ಶೆಗೆ ಒಳಪಡುತ್ತಿರುತ್ತೇವೆ.
ನಾವು ದಪ್ಪಗಾದಾಗ ಸಿಕ್ಕಾಪಟ್ಟೆ ತಿನ್ನುತ್ತ ಸೋಂಭೇರಿಯಾಗಿ ನಾವಿರ್ತೀವಿ ಅಂತ ಹಲವರು ಅವರಿಗೆ ಅವರೇ ಊಹೆ ಮಾಡಿಕೊಳ್ಳುತ್ತಾರೆ. ಕಲಾವಿದರು ಯಾರೂ ಸೋಮಾರಿಗಳಲ್ಲ. ಹಾರ್ಮೋನಲ್ ಸಮಸ್ಯೆಯಿಂದ ಕೂಡ ದಪ್ಪಗಾಗಬಹುದು. ನಟನೆ ಅನ್ನೋದು ನನ್ನ ಜೀವನದ ಒಂದು ಭಾಗವೇ ಹೊರತು ಜೀವನದಲ್ಲಿ ಇದಕ್ಕಿಂತ ಮಿಗಿಲಾದದ್ದು ಇದೆ’ ಎಂದು ನಿತ್ಯಾ ಮೆನನ್ ಅಭಿಪ್ರಾಯಪಟ್ಟಿದ್ದಾರೆ.
ತನ್ನ ಮಾತನ್ನು ಮುಂದುವರಿಸಿದ ನಿತ್ಯಾ ಮೆನನ್ ನಾನು ಏನು ಮಾಡಬೇಕೋ ಅದನ್ನು ನಾನು ಮಾಡ್ತೀನಿ. ನಾನು ದಪ್ಪಗಿದ್ದಾಗ ಅಥವಾ ಸಣ್ಣಗಿದ್ದಾಗ ಉದ್ಯಮ ನನ್ನನ್ನು ಹೇಗೆ ಕಾಣುತ್ತದೆ ಎಂಬುದು ಮ್ಯಾಟರ್ ಆಗುವುದಿಲ್ಲ. ಟ್ರೋಲ್, ನೆಗೆಟಿವ್ ಕಾಮೆಂಟ್‌ಗಳಿಂದ ನನಗೂ ಬೇಸರವಾಗುತ್ತದೆ, ಆದರೆ ನಾನು ಅದನ್ನು ಆದಷ್ಟು ತಿರಸ್ಕಾರ ಮಾಡಲು ಪ್ರಯತ್ನಪಡುತ್ತೇನೆ ಎಂದು ನಿತ್ಯಾ ಹೇಳಿದ್ದಾರೆ.
ನಿತ್ಯಾ ಮೆನನ್ ಅವರು ನೋಡಲು ಕೇರಳದವರಂತೆ ಕಂಡರೂ ಅವರು ಬೆಂಗಳೂರಿನಲ್ಲಿ ಹುಟ್ಟಿದ ಕನ್ನಡತಿ.ಅವರು ಕನ್ನಡದ ‘7 o Clock’ ಸಿನಿಮಾ ಮೂಲಕವೇ ಬಣ್ಣದ ಲೋಕಕ್ಕೆ ಪೋಷಕ ನಟಿಯಾಗಿ ಕಾಲಿಟ್ಟವರು.ಇದೀಗ ದಕ್ಷಿಣ ಭಾರತದ ಬಹು ಬೇಡಿಕೆಯ ನಟಯಾಗಿ ಮಿಂಚುತ್ತಿರುವ ನಿತ್ಯಾ ಮೆನನ್, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಗುಂಗುರು ಕೂದಲಿನ, ಬಟ್ಟಲು ಕಣ್ಣಿನ ಸಹಜ ಸುಂದರಿ ನಿತ್ಯಾ ಮೆನನ್, ಒಬ್ಬ ಪತ್ರಕರ್ತೆ. ನಿತ್ಯಾ ಮೆನನ್ ಅವರು ಸುದೀಪ್ ಜೊತೆ ಕೋಟಿಗೊಬ್ಬ 2 ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಅವರ ಮೈನಾ ಸಿನಿಮಾವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ನಿತ್ಯಾ ಮೆನನ್ ಕುರಿತಾದ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.