ಸಿನಿಮಾದಲ್ಲಿ ಮಿಂಚಬೇಕು ಉತ್ತಮ ಹೆಸರು ಗಳಿಸಬೇಕು ಅಂದರೆ ಅಷ್ಟು ಸುಲಭವಲ್ಲ ಅದರ ಹಿಂದೆ ಸಾಕಷ್ಟು ನೋವಿನ ಕಥೆ ಇರುತ್ತೆ. ಹಲವು ನಟಿಯರು ಸಾಕಷ್ಟು ಷ್ಟ್ರಗಲ್ ಮಾಡಿ ಇಂದು ಸಾಧನೆಯ ಹಾದಿ ಹಿಡಿದಿದ್ದಾರೆ. ಆಗಾಗ ಕೆಲವು ನಟಿಯರು ಸಂದರ್ಶನಗಳನ್ನು ನೀಡುತ್ತಾ ತಮ್ಮ ಜೀವನದ ಕೆಲವು ಕಥೆಗಳನ್ನು ಹಂಚಿಕೊಳ್ಳುತ್ತಾರೆ. ನಿಜಕ್ಕೂ ಅವುಗಳನ್ನು ಕೇಳಿದ್ರೆ ಮನಸ್ಸು ಭಾರವಾಗುತ್ತೆ. ಬಾಲಿವುಡ್ ನಲ್ಲಿ ಇಂದು ನಂಬರ್ ಒನ್ ಹೀರೋಯಿನ್ ಎನಿಸಿಕೊಂಡಿರುವ ದೀಪಿಕಾ ಪಡುಕೋಣೆ ಕೂಡ ಕೆಲವು ಸಮಸ್ಯೆಗಳನ್ನು ಅವಮಾನಗಳನ್ನು ಅನುಭವಿಸಿದ್ದಾರೆ.
ಆದರೆ ಅಂದು ಅವುಗಳನ್ನೆಲ್ಲ ಮೀರಿ ನಿಂತಿದ್ದಕ್ಕೆ ಇಂದು ಅತ್ಯುತ್ತಮ ಅಭಿನೇತ್ರಿ ಎನಿಸಿಕೊಂಡಿರುವುದು. ದೀಪಿಕಾ ಪಡುಕೋಣೆ ಬೆಂಗಳೂರಿನವರು. ಕ್ರೀಡೆಯಲ್ಲಿ ಹೆಸರು ಮಾಡಿದ ಪ್ರಕಾಶ್ ಪಡುಕೋಣೆ ಅವರ ಮಗಳು ದೀಪಿಕಾ. ದೀಪಿಕಾ ಪಡುಕೋಣೆ ಮಾಡಲಿಂಗ್ ಮಾಡುತ್ತಿರುವಾಗಲೇ ಇಂದ್ರಜಿತ್ ಲಂಕೇಶ್ ಅವರು ದೀಪಿಕಾ ಅವರನ್ನ ಸ್ಯಾಂಡಲ್ ವುಡ್ ಗೆ ಕರೆದುಕೊಂಡು ಬಂದರು. ಉಪೇಂದ್ರ ಅಭಿನಯದ ಐಶ್ವರ್ಯ ಸಿನಿಮಾದಲ್ಲಿ ನಟಿಸಿದರು. ನಂತರ ಬಾಲಿವುಡ್ ಗೆ ಹಾರಿದ ನಟಿ ಅಲ್ಲಿಯೇ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು.
ಶಾರುಕ್ ಖಾನ್ ಜೊತೆ ಓಂ ಶಾಂತಿ ಓಂ ಸಿನಿಮಾದಲ್ಲಿ ನಟಿಸಿದ್ದೆ ದೊಡ್ಡ ಬ್ರೇಕ್ ಸಿಕ್ತು. ಇದೀಗ ದೀಪಿಕಾ ಪಡುಕೋಣೆ ಬಾಲಿವುಡ್ ನ ಸ್ಟಾರ್ ನಟ ರಣಬೀರ್ ಸಿಂಗ್ ಅವರನ್ನ ಮದುವೆಯಾಗಿದ್ದಾರೆ. ಇವರಿಬ್ಬರೂ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಜೊತೆಗೂ ದೀಪಿಕಾ ನಂಟು ಬೆಳೆದಿದೆ. ಈ ವರೆಗೆ ದೀಪಿಕಾ ನಟಿಸಿರುವ ಎಲ್ಲಾ ಸಿನಿಮಾಗಳು ಬಹುತೇಕ ಹಿಟ್ ಸಿನಿಮಾಗಳೇ! ದೀಪಿಕಾ ಪಡುಕೋಣೆಯವರದ್ದು ನೇರವಾಗಿ ಮಾತನಾಡುವ ವ್ಯಕ್ತಿತ್ವ. ಹಾಗಾಗಿ ಅವರು ತಮಗಾದ ಬಾಡಿ ಶೇಮಿಂಗ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಹೌದು, ಇತ್ತೀಚಿಗೆ ಸಿನಿಮಾ ರಂಗದಲ್ಲಿ ನಾಯಕಿಯರು ತಮಗೆ ಆದ ಬಾಡಿ ಶೆ’ಮಿಂಗ್ ಬಗ್ಗೆ ಮಾತನಾಡಿದ್ದಾರೆ. ಕೆಲವರು ಯಾವುದೇ ಕಾರಣಕ್ಕೂ ಅದನ್ನ ಹೇಳಿಕೊಳ್ಳುವುದೇ ಇಲ್ಲ. ಇನ್ನು ಕೆಲವರು ಸ್ವಲ್ಪವೂ ಹಿಂಜರಿಕೆ ಇಲ್ಲದೆ ಹೇಳಿಕೊಳ್ಳುತ್ತಾರೆ. ದೀಪಿಕಾ ಪಡುಕೋಣೆ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ನಿಮ್ಮ ಜೀವನದಲ್ಲಿ ಸಿಕ್ಕ ಒಂದು ಕೆಟ್ಟ ಹಾಗೂ ಒಂದು ಒಳ್ಳೆಯ ಸಲಹೆ ಯಾವುದು ಅಂತ ಕೇಳಿದ್ದಾರೆ.
ಇದಕ್ಕೆ ಉತ್ತರೆಇಸಿದ ದೀಪಿಕಾ ’ನನಗೆ ಉತ್ತಮ ಸಲಹೆಯನ್ನು ನೀಡಿದ್ದು ಶಾರೂಖ್ ಖಾನ್. ಅವರ ಜೊತೆಗೆ ಅಭಿನಯಿಸುವ ಸಂದರ್ಭದಲ್ಲಿ, ನೀವು ಚೆನ್ನಾಗಿ ಬೆಳೆಯುತ್ತಿ, ನಿನಗೆ ಅವಕಾಶಗಳು ಸಿಗುತ್ತವೆ. ಉತ್ತಮ ಸಮಯ ಬರುತ್ತೆ ಅಂತ ಹದಿನೈದು ವರ್ಷಗಳ ಹಿಂದೆಯೇ ಹೇಳಿದ್ದರು. ಅದು ಅಮೂಲ್ಯವಾದ ಮಾತುಗಳು. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ’ ಎಂದಿದ್ದಾರೆ.
ಇನ್ನು ದೀಪಿಕಾಗೆ ಸಿಕ್ಕ ಕೆಟ್ಟ ಸಲಹೆಯ ಬಗ್ಗೆಯೂ ಮಾತನಾಡಿದ ಅವರು ’ ನಾನು ಹದಿನೆಂಟು ವರ್ಷ ವಯಸ್ಸಿನಲ್ಲಿ ಇರುವಾಗ ಒಬ್ಬರು ಸ್ತ-ನ ಚಿಕ್ಕದಿದೆ ಎಂದು ಕಸಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ ನಾನು ಅದನ್ನು ನಿರ್ಲಕ್ಷ ಮಾಡಿದ್ದೇನೆ. ನಾನು ಅದನ್ನೇ ದೊಡ್ಡ ವಿಷಯವಾಗಿ ಪರಿಗಣಿಸಿದ್ರೆ ಇಂದು ಈ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ದೀಪಿಕಾ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹೀಗೆ ಸಿನಿಮಾ ತಾರೆಯರು ಬಾಡಿ ಶೇ’ಮಿಂಗ್ ಸಮಸ್ಯೆಗೆ ಒಳಗಾಗಿದ್ದಾರೆ. ಕೆಲವರು ಇದೇ ಕಾರಣಕ್ಕೆ ಪ್ರಾ’ಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿ ಆರೊಗ್ಯ ಸಮಸ್ಯೆಗಳನ್ನು ತಂದುಕೊಂಡಿದ್ದಾರೆ. ಇದು ನಿಜವಾಗಿಯೂ ಸಿನಿಮಾ ರಂಗದ ಕಟು ಸತ್ಯ.