PhotoGrid Site 1665036397005

ನಿಮ್ಮ ಆಟಗಳು ಹೆಚ್ಚಾಗುತ್ತಿವೆ ಇನ್ಮೇಲೆ ನಿಮಗೆ ನಾಯಿನೆ ಗತಿ ಎಂದ ವ್ಯಕ್ತಿಗೆ, ನಟಿ ಸಮಂತಾ ಕೊಟ್ಟ ಉತ್ತರ ಕೇಳಿ ಬೆಚ್ಚಿಬಿದ್ದ ತೆಲುಗು ಜನತೆ ನೋಡಿ!!

ಸುದ್ದಿ

ಸೆಲೆಬ್ರಿಟಿಗಳು ಅಂದ್ರೆ ಅವರು ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾರೆ ಜನರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇನ್ನು ಅಭಿಮಾನಿಗಳು ಅಷ್ಟೇ ತಮ್ಮ ನೆಚ್ಚಿನ ಸೆಲೆಬ್ರಿಟಿ ಸ್ಟಾರ್ ನಟ ನಟಿಯರು ಎಲ್ಲಿ ಸಿಕ್ಕಿದರು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕೋ ಅವರ ಜೊತೆ ಮಾತನಾಡುವುದಕ್ಕೋ ಕಾಯುತ್ತಿರುತ್ತಾರೆ. ಇಂದು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

ಹೌದು, ಇಂದು ಸೋಶಿಯಲ್ ಮೀಡಿಯಾ ಎಲ್ಲದಕ್ಕೂ ಮೂಲ. ಇಲ್ಲಿ ಒಳ್ಳೆಯದು ಇದೆ ಕೆಟ್ಟದ್ದು ಇದೆ. ಸಿನಿಮಾ ತಾರೆಯರು ತಾವು ಸಿನಿಮಾದಲ್ಲಿ ಮಿಂಚುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸದಾ ಆಕ್ಟಿವ್ ಆಗಿರುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಅಂತಹ ನಟಿಯರಲ್ಲಿ ಸಮಂತಾ ರುತ್ ಪ್ರಭು ಕೂಡ ಒಬ್ಬರು.

ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯ ಅತಿ ಹೆಚ್ಚು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಗಳಿಸುವ ನಟಿ ಅಂದ್ರೆ ಅದು ಸಮಂತ. ಟಾಲಿವುಡ್ ಅಷ್ಟೇ ಅಲ್ಲದೆ ಇದೀಗ ಬಾಲಿವುಡ್ ನಲ್ಲಿಯೂ ಕೂಡ ನಟಿ ಸಮಂತ ಹೆಚ್ಚು ಮಿಂಚುತ್ತಿದ್ದಾರೆ. ತಮ್ಮ ಕಾಮರ್ಸ್ ಪದವಿಯನ್ನು ಮುಗಿಸಿ ಪಾರ್ಟ್ ಟೈಮ್ ಮಾಡಲಿಂಗ್ ವೃತ್ತಿಯನ್ನು ಆರಂಭಿಸಿದ ಸಮಂತ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂತು.

2010ರಲ್ಲಿ ತೆಲುಗು ಭಾಷೆಯಲ್ಲಿ ಯೇ ಮಾಯೆ ಚೆಸಾವೆ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ರು. ಮೊದಲ ಸಿನಿಮಾವೇ ಸಮಂತಾ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಸಮಂತ ಅವರಿಗೆ ಅವಕಾಶಗಳು ಸಾಕಷ್ಟು ಹುಡುಕಿಕೊಂಡು ಬಂದವು. ತಾವು ಮೊದಲ ಚಿತ್ರದಲ್ಲಿ ಅಭಿನಯಿಸಿದ ಹೀರೋ ಜೊತೆಗೆ ಅಂದರೆ ಸ್ಟಾರ್ ನಟ ನಾಗಚೈತನ್ಯ ಅವರ ಜೊತೆಗೆ ಪ್ರೀತಿಯಲ್ಲಿ ಬಿದ್ದ ಸಮಂತಾ ನಂತರ ಅವರನ್ನೇ ಮದುವೆಯಾದರು.

ಟಾಲಿವುಡ್ ಅತ್ಯಂತ ಸುಂದರ ಜೋಡಿ ಎಂದು ಕರೆಸಿಕೊಂಡಿದ್ದ ಸ್ಯಾಮ್ ಹಾಗೂ ಚಾಯ್ ಮದುವೆಯಾಗಿ ಕೇವಲ ನಾಲ್ಕೇ ವರ್ಷಕ್ಕೆ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದು ಈಗ ಹಳೆಯ ವಿಷಯ. ಇನ್ನು ಸಮಂತಾ ಅವರು ವಿಚ್ಛೇದನ ನಂತರವೂ ಕುಗ್ಗದೆ ತಮ್ಮ ಪ್ರತಿ ಜೀವನದಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಇನ್ನು ಸಮಂತ ಫಿಟ್ನೆಸ್ ಫ್ರೀಕ್ ಕೂಡ ಹೌದು. ಹಾಗಾಗಿ ಆಗಾಗ ತಾವು ವರ್ಕೌಟ್ ಮಾಡುವ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡುತ್ತಾರೆ.

ಇನ್ನು ಸಮಂತಾ ಅವರ ಬಳಿ ಒಂದು ಪೆಟ್ ನಾಯಿ ಕೂಡ ಇದೆ. ತಾವು ವರ್ಕೌಟ್ ಮಾಡುವ ಸಮಯದಲ್ಲಿ ತನ್ನ ಪ್ರೀತಿಯ ನಾಯಿಯನ್ನು ಕೂಡ ಜೊತೆಯಲ್ಲಿಯೇ ಇಟ್ಟುಕೊಳ್ಳುವ ಸಮಂತ, ನನ್ನ ವರ್ಕೌಟ್ ಪಾರ್ಟ್ನರ್ ಅಂತ ನಾಯಿಯ ಬಗ್ಗೆ ಸಾಕಷ್ಟು ಬಾರಿ ಬರೆದುಕೊಂಡಿದ್ದರು. ಇನ್ನು ಸೆಲೆಬ್ರಿಟಿಗಳು ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಅಪ್ಲೋಡ್ ಮಾಡಿದರೆ ಅದಕ್ಕೆ ಅಭಿಮಾನಿಗಳು ಕಮೆಂಟ್ ಮಾಡೋದು ಸಹಜ.

ಆದರೆ ಇನ್ನೊಬ್ಬ ಬೂಪ ಅನಗತ್ಯವಾಗಿ ಕಮೆಂಟ್ ಮಾಡಿ ನಂತರ ಸಮಂತಾ ಅವರ ಬಳಿ ಚೀಮಾರಿ ಹಾಕಿಸಿಕೊಂಡಿದ್ದಾನೆ. ಹೌದು, ಸಮಂತಾ ನಾಯಿಯ ಜೊತೆ ಆಟವಾಡುತ್ತಿದ್ದ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ರು ಇದನ್ನ ನೋಡಿದ ಆ ವ್ಯಕ್ತಿ ನೀವು ನಾಯಿಯ ಜೊತೆಯೇ ಸಾಯುತ್ತೀರಾ ಎಂದು ಕಮೆಂಟ್ ಮಾಡಿದ್ದ. ಇದನ್ನು ನೋಡಿ ಸುಮ್ಮನಿರದ ಸಂಬಂಧ ಹಾಗಾದರೆ ನಾನು ತುಂಬಾ ಲಕ್ಕಿ ಅಂತ ಉತ್ತರ ನೀಡಿದ್ದಾರೆ.

ನಟಿ ಸಮಂತಾ ಅವರ ಈ ಉತ್ತರಕ್ಕೆ ಅವರ ಅಭಿಮಾನಿಗಳು ಶಹಬ್ಬಾಷ್ ಹೇಳಿದ್ದಾರೆ. ಸಮಂತಾ ಅವರು ಸಿನಿಮಾ ಮಾತ್ರವಲ್ಲದೆ ಜಾಹೀರಾತು ಇಂಡಸ್ಟ್ರಿಯಿಂದಲೂ ಕೂಡ ಸಾಕಷ್ಟು ಹಣ ಗಳಿಕೆ ಮಾಡುತ್ತಾರೆ. ಇತ್ತೀಚೆಗೆ ತಮ್ಮದೇ ಆದ ಬಿಸಿನೆಸ್ ಕೂಡ ಆರಂಭಿಸಿದ್ದಾರೆ ಸಮಂತ. ಒಟ್ಟಿನಲ್ಲಿ ಒಂದಲ್ಲ ಒಂದು ಚಟುವಟಿಕೆಯಲ್ಲಿ ಸದಾ ಸಕ್ರಿಯರಾಗಿರುತ್ತಾರೆ ನಟಿ ಸಮಂತಾ.

Leave a Reply

Your email address will not be published. Required fields are marked *