ಬಿಗ್ ಬಾಸ್ ಕನ್ನಡ ಸೀಸನ್ 9 ಇತರ ಎಲ್ಲಾ ಸೀಸನ್ ಗಳಿಗಿಂತ ಬಹಳ ವಿಭಿನ್ನವಾಗಿದೆ. 9 ಹೊಸ ಸ್ಪರ್ಧಿಗಳು ಹಾಗೂ ಇನ್ನೂ 9 ಜನ ಈ ಮೊದಲೇ ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9ರ ಮನೆ ಪ್ರವೇಶಿಸಿದ್ದಾರೆ. ಕಳೆದ ತಿಂಗಳು ಪ್ರಸಾರವಾಗಿದ್ದ ಓಟಿಟಿ ವರ್ಷನ್ ನಲ್ಲಿ ಟಾಪ್ 4ನಲ್ಲಿದ್ದ ನಾಲ್ಕು ಜನ ಸಹ ಬಿಗ್ ಬಾಸ್ ಮನೆಯನ್ನು ಮತ್ತೆ ಸೇರಿಕೊಂಡಿದ್ದಾರೆ. ಬಿಗ್ ಬಾಸ್ ನಲ್ಲಿ ಈ ಬಾರಿ ಮನೋರಂಜನೆಯ ಕೂಡ ದುಪ್ಪಟ್ಟಾಗಿದೆ.
ಅರುಣ್ ಸಾಗರ್, ವಿನೋದ್ ಗೊಬ್ಬರಗಾಲ ಮೊದಲಾದ ಹಾಸ್ಯ ಕಲಾವಿದರು ಬಿಗ್ ಬಾಸ್ ಮನೆಯನ್ನು ಇನ್ನಷ್ಟು ವರ್ಣ ರಂಜಿತವಾಗಿಸಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ಸಲ ಮಹಿಳಾ ಸ್ಪರ್ಧಿಗಳ ಹವಾ ಜೋರಾಗಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ಟ್ರಾಂಗ್ ಆಗಿರುವ ಮಹಿಳಾ ಸ್ಪರ್ಧಿಗಳು ಬಿಗ್ ಬಾಸ್ ಕೊಡುವ ಟಾಸ್ಕ್ ಗಳನ್ನು ಅಚ್ಚುಕಟ್ಟಾಗಿ ಕಂಪ್ಲೀಟ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ 18 ಜನರಲ್ಲಿ ಮೊದಲ ವಾರ 12 ಜನ ನಾಮಿನೇಟ್ ಆಗಿದ್ರು. ಆದ್ರೆ ಇದರಲ್ಲಿ ಒಬ್ಬರು ಮಾತ್ರ ಎಲಿಮಿನೇಟ್ ಆಗಿದ್ದಾರೆ ಅವರೇ ಬೈಕ್ ರೈಡರ್ ಐಶ್ವರ್ಯ ಪಿಸ್ಸೆ. ಹೌದು ಇಂಟರ್ನ್ಯಾಷನಲ್ ಬೈಕ್ ರೈಡರ್ ಆಗಿರುವ ಐಶ್ವರ್ಯ ಬೆಂಗಳೂರು ಮೂಲದವರು. ಆಫ್ ರೋಡ್ ರೈಡಿಂಗ್ ನಲ್ಲಿ ಫೇಮಸ್ ಆಗಿರುವ ಐಶ್ವರ್ಯ ಮೊದಲ ವಾರವೇ ತಮ್ಮ ಜರ್ನಿಯನ್ನು ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ.
ಐಶ್ವರ್ಯ ಮೊದಲ ವಾರವೇ ಬಿಗ್ ಬಾಸ್ ಜರ್ನಿಯನ್ನು ಮುಗಿಸಿ ಹೊರ ನಡೆದಿರುವುದಕ್ಕೆ ಕಾರಣಗಳನ್ನ ವಿಶ್ಲೇಷಣೆ ಮಾಡಿದರೆ ಈ ಕೆಲವು ಕಾರಣಗಳು ಸಿಗುತ್ತವೆ. ಮೊದಲನೇದಾಗಿ ಐಶ್ವರ್ಯ ಪಿಸ್ಸೆ ಯಾವುದೇ ಚಿತ್ರರಂಗ ಅಥವಾ ಮನೋರಂಜನಾ ಕ್ಷೇತ್ರದಿಂದ ಬಂದವರಲ್ಲ. ಫಿಸಿಕಲಿ ಸ್ಟ್ರಾಂಗ್ ಇದ್ರೂ ಕೂಡ ಮನೋರಂಜನೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳದೆ ಇರುವ ಕಾರಣ ಐಶ್ವರ್ಯ ಮೊದಲ ವಾರ ಮನೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲೇ ಇಲ್ಲ.
ಬಿಗ್ ಬಾಸ್ ಮನೆಯಲ್ಲಿ ಇರುವ ಉಳಿದ ಬಹುತೇಕ ಎಲ್ಲಾ ಸ್ಪರ್ಧಿಗಳು ಮನೋರಂಜನಾ ಫೀಲ್ಡ್ ನಿಂದ ಬಂದವರೆ ಹಾಗಾಗಿ ಅವರೊಂದಿಗೆ ಬೆರೆತುಕೊಳ್ಳುವುದಕ್ಕೆ ಐಶ್ವರ್ಯ ಅವರಿಗೆ ಮೊದಲನೆಯ ವಾರ ಸಾಧ್ಯವಾಗಲಿಲ್ಲ ಅಥವಾ ಅವರಿಗೆ ಇನ್ನಷ್ಟು ದಿನಗಳ ಅವಧಿ ಸಿಕ್ಕರೆ, ಎಲ್ಲರೊಂದಿಗೆ ಬೆರೆತುಕೊಂಡು ಇರಲು ಸಾಧ್ಯವಾಗುತ್ತಿತ್ತೋ ಏನೋ ಗೊತ್ತಿಲ್ಲ ಆದರೆ ಮೊದಲ ವಾರ ಐಶ್ವರ್ಯ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ.
ಹಾಗಾಗಿ ಅವರಿಗೆ ಕಡಿಮೆ ವೋಟ್ ಲಭಿಸಿತ್ತು. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆ ಐಶ್ವರ್ಯ ಪಿಸ್ಸೆ. 27 ವರ್ಷದ ಐಶ್ವರ್ಯ ತಮ್ಮ 18ನೇ ವರ್ಷದಲ್ಲಿಯೇ ಬೈಕ್ ರೈಡಿಂಗ್ ಶುರುಮಾಡಿದರು. ಇವರಿಗೆ ಸಾಕಷ್ಟು ಇಂಟರ್ನ್ಯಾಷನಲ್ ಬೈಕ್ ರೈಡಿಂಗ್ ಸ್ಪರ್ಧೆಗಳಲ್ಲಿ ಗೆದ್ದ ಮೊದಲ ಮಹಿಳಾ ಬೈಕ್ ರೈಡರ್ ಎನಿಸಿಕೊಂಡಿದ್ದಾರೆ. ಇನ್ನು ಬೈಕ್ ರೇಸಿಂಗ್ ನಲ್ಲಿ ಅತಿ ಹೆಚ್ಚು ಹಣ ಗಳಿಸಬಲ್ಲ ಐಶ್ವರ್ಯ.
ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಇದು ಎಷ್ಟು ಹಣ ಗಳಿಸಿರಬಹುದು ಅಂತ ಚರ್ಚೆಗಳು ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಕೇವಲ ಒಂದು ವಾರ ಇದ್ದ ಐಶ್ವರ್ಯ ಪಿಸ್ಸೆ ಅವರಿಗೆ 1.30 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಇಂತಹ ಒಬ್ಬ ಸಾಧಕಿ ಬಿಗ್ ಬಾಸ್ ಮನೆಯಲ್ಲಿ ಇನ್ನಷ್ಟು ದಿನ ಇರಬೇಕಿತ್ತು ಅಂತ ಜನರು ಕಮೆಂಟ್ ಮಾಡಿದ್ದಾರೆ.