PhotoGrid Site 1661858201424

ನಿನ್ನ ರೇಟ್ ಎಷ್ಟು ಎಂದು ಕೇಳಿದ ಕಿಡಿಗೇಡಿಗೆ ವ್ಯಕ್ತಿಗೆ, ನಿರೂಪಕಿ ಅನಸೂಯಾ ಕೊಟ್ಟ ನೇರ ಉತ್ತರ ಹೇಗಿತ್ತು ಗೊತ್ತಾ? ಬೆಚ್ಚಿಬಿದ್ದ ತೆಲುಗು ನಿರ್ಮಾಪಕರು ನೋಡಿ!!

ಸುದ್ದಿ

ಸಿನಿಮಾ ನಟಿಯರ ಬಗ್ಗೆ ಅಥವಾ ಕಿರುತರೆ ಕಲಾವಿದೆಯರ ಬಗ್ಗೆ ಒಳ್ಳೆಯದನ್ನ ಯೋಚಿಸುವುದಕ್ಕಿಂತ ಕೆಟ್ಟದ್ದನ್ನು ಮಾತನಾಡುವವರೇ ಜಾಸ್ತಿ. ಯಾವುದೇ ನಟಿ ಫೇಮಸ್ ಆದ್ರೆ ಆಕೆ ಯಾರೊಂದಿಗೂ ಸ್ಪಂದಿಸಿರಬೇಕು ಹಾಗಾಗಿ ಇಷ್ಟು ಬೇಗ ಫೇಮಸ್ ಆಗಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸಿನಿಮಾ ನಟಿಯರು ಹಾಕುವ ಪ್ರತಿಯೊಂದು ಪೋಸ್ಟ್ ಕೂಡ ಸಿಕ್ಕಾಪಟ್ಟೆ ಲೈಕ್ ಗಳಿಸುತ್ತೆ. ಇನ್ನು ಟಾಲಿವುಡ್ ನ ಪ್ರಖ್ಯಾತ ನಟಿ ಹಾಗೂ ನಿರೂಪಕಿ ಆಗಿರುವ ಅನಸೂಯ ಅವರು ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಹೌದು, ಟಾಲಿವುಡ್ ನಲ್ಲಿ ನಂಬರ್ ಒನ್ ನಿರೂಪಕಿ ಎನಿಸಿಕೊಂಡಿರುವ ಅನಸೂಯ ಟಾಲಿವುಡ್ ನ ಸಿನಿಮಾಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿದ್ದರೂ ಅವರೇ ನಿರೂಪಣೆ ಮಾಡುತ್ತಾರೆ. ಈ ಖ್ಯಾತ ನಿರೂಪಕಿ ಹಾಗೂ ಟಾಲಿವುಡ್ ನ ಸ್ಟಾರ್ ನಟ ವಿಜಯ್ ದೇವರಕೊಂಡ ಅವರ ನಡುವೆ ಈ ಹಿಂದೆ ಜಟಾಪಟಿ ನಡೆದಿತ್ತು. ವಿಜಯ ದೇವರಕೊಂಡ ಅವರ ನಟನೆಯ ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ.

ಈ ಸಿನಿಮಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಸೂಯ ಹಾಗೂ ವಿಜಯ ದೇವರಕೊಂಡ ಅವರ ನಡುವೆ ಮಾತು ನೆಡೆದಿತ್ತು. ವಿಜಯ ದೇವರಕೊಂಡ ಹುಡುಗಿಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಅಂತ ವೇದಿಕೆಯ ಮೇಲೆಯೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ರು ನಿರೂಪಕಿ ಅನುಸೂಯ. ಅದಾದ ಮೇಲೆ ವಿಜಯ ದೇವರು ಕೊಂಡ ಅವರ ಯಾವುದೇ ಸಿನಿಮಾಗದ ಪ್ರಮೋಷನ್ ಇರಲಿ ಅಥವಾ ಯಾವುದೇ ಕಾರ್ಯಕ್ರಮವಿರಲಿ ಅದಕ್ಕೆ ನಿರೂಪಕಿಯಾಗಿ ಅನುಸೂಯ ಬರುತ್ತಿರಲಿಲ್ಲ.

ಇತ್ತೀಚಿಗೆ ವಿಜಯ ದೇವರಕೊಂಡ ಅವರ ಸಿನಿಮಾ ಬಾಲಿವುಡ್ ನಲ್ಲಿ ತೆರೆಕಂಡಿತ್ತು ಅದುವೇ ಲೈಗರ್ ಸಿನಿಮಾ. ಆದರೆ ಈ ಸಿನಿಮಾ ನಿರೀಕ್ಷೆಯ ಮಟ್ಟ ತಲುಪುವಲ್ಲಿ ಸೋತಿದೆ. ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಲೈಗರ್ ಸಿನಿಮಾ ಸೋತಿದ್ದಕ್ಕಾಗಿ ಚಿತ್ರತಂಡ ಬೇಸರ ವ್ಯಕ್ತಪಡಿಸಿದರೆ ನಿರೂಪಕಿ ಅನುಸೂಯ ಮಾತ್ರ ಈ ಸೋಲನ್ನ ಸಂಭ್ರಮಿಸಿ, ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ಕರ್ಮ ಮತ್ತೆ ಬರುತ್ತೆ ಎನ್ನುವ ಪೋಸ್ಟ್ ಹಾಕಿ ಲೈಗರ್ ಸಿನಿಮಾ ಸೋತಿದ್ದರ ಬಗ್ಗೆ ಬರೆದುಕೊಂಡಿದ್ದರು. ಅನುಸೂಯ ಹೀಗೆ ಬರೆಯುತ್ತಿದ್ದಂತೆ ವಿಜಯ ದೇವರಕೊಂಡ ಅವರ ಅಭಿಮಾನಿಗಳು ನಿರೂಪಕಿ ಅನುಸೂಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿರೂಪಕಿ ಅನುಸೂಯ ಅವರನ್ನ ಸಾಕಷ್ಟು ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಸೈಲೆಂಟ್ ಆಗಿ ವಿಜಯ್ ಅಭಿಮಾನಿಗಳು ಹಾಗೂ ಅನುಸೂಯ ನಡುವೆ ವಾರ ಆರಂಭವಾಗಿದೆ. ಈ ಸಮಯದಲ್ಲಿ ಕೆಲವು ಅಭಿಮಾನಿಗಳು ಕೆಟ್ಟದಾಗಿಯೂ ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಕೇಳಿರುವ ಪ್ರಶ್ನೆಗೆ ಅನುಸೂಯ ಖಡಕ್ ಉತ್ತರವನ್ನು ಕೂಡ ನೀಡಿದ್ದಾರೆ. ಆತ ಕೇಳಿದ ಅಸಹ್ಯಕರವಾದ ಪ್ರಶ್ನೆ ಏನು ಗೊತ್ತಾ!?

ಆತ ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾನೆ. ಈ ಕಾಮೆಂಟ್ ನೋಡಿ ಸುಮ್ಮನಾಗದ ಅನಸೂಯ ಅದಕ್ಕೆ ಸರಿಯಾಗಿ ಉತ್ತರ ನೀಡಿದ್ದಾರೆ. ನಿಮ್ಮ ಸಹೋದರಿ ಅಥವಾ ನೀವು ಮದುವೆಯಾಗಿದ್ದರೆ ನಿಮ್ಮ ಹೆಂಡತಿಯ ಬಳಿ ಒಂದು ದಿನಕ್ಕೆ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ಕೇಳಿ ಎಂದು ಆತನ ಕಮೆಂಟ್ ಗೆ ರಿಪ್ಲೈ ಮಾಡಿದ್ದಾರೆ. ಈ ಉತ್ತರವನ್ನು ನೋಡಿ ಕಮೆಂಟ್ ಮಾಡಿರುವ ವ್ಯಕ್ತಿ ಹೆದರಿ ಕೂಡಲೇ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾನೆ.

PhotoGrid Site 1661858210222

ಈಗಾಗಲೇ ಅನಸೂಯ ಅವರ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಅನಸೂಯ ಅವರನ್ನ ಆಂಟಿ ಎಂದು ಕೆಲವರು ಕರೆದಿದ್ದಾರೆ. ಹೀಗೆ ತನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಹಾಕುವವರಿಗೆ ನಿರೂಪಕಿ ಅನುಸೂಯ ವಾರ್ನಿಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *